ಶುಕ್ರವಾರ, ಏಪ್ರಿಲ್ 23, 2021
22 °C

ಧೂಮಪಾನಿ ಪಕ್ಕವಿದ್ದರೆ 16ಪಟ್ಟು ಅಧಿಕ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್ (ಐಎಎನ್‌ಎಸ್): ಬಸ್ ನಿಲ್ದಾಣ, ರೈಲು ನಿಲ್ದಾಣ ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಸೇವಿಸುವವರ ಪಕ್ಕ ನೀವು ನಿಂತಿದ್ದೇ ಆದರೆ, ಅಪಾಯಕಾರಿ ಸೂಕ್ಷ್ಮ ಕಣಗಳು ದೇಹ ಪ್ರವೇಶಿಸುವ ಸಾಧ್ಯತೆ ಅನತಿ ದೂರದಲ್ಲಿರುವ ವ್ಯಕ್ತಿಗಿಂತ 16 ಪಟ್ಟು ಅಧಿಕವಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.ನ್ಯೂಜಿಲೆಂಡ್‌ನ ಒಟಾಗೊ ವಿ.ವಿ. ಸಂಶೋಧಕರು ಐದು ವಾರಗಳ ಕಾಲ ಸಾರ್ವಜನಿಕ ಸ್ಥಳದಲ್ಲಿ ಸೂಕ್ಷ್ಮಗ್ರಾಹಿ ವಾಯು ವಿಶ್ಲೇಷಕ ಸಾಧನದ ನೆರವಿನಿಂದ ನಡೆಸಿದ ಸಮೀಕ್ಷೆಯಿಂದ ಇದು ಪತ್ತೆಯಾಗಿದೆ.

ಅದೇ ರೀತಿ, ಧೂಮಪಾನ ಮಾಡುವ ವ್ಯಕ್ತಿ ಸರಾಸರಿ 2.6 ಮೀಟರ್ ದೂರದಲ್ಲಿದ್ದಾಗ, ಅಲ್ಲಿನ ಗಾಳಿಯಲ್ಲಿ, ಧೂಮಪಾನಿ ಇಲ್ಲದ ವೇಳೆಗಿಂತ ಶೇ 70ರಷ್ಟು ಹೆಚ್ಚು ಅಪಾಯಕಾರಿ ಸೂಕ್ಷ್ಮ ಕಣಗಳು ಇರುವುದು ಪತ್ತೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.