ಧೂಮಪಾನ ವ್ಯಸನ: ವಿಶ್ವದಲ್ಲೇ ಚೀನಾ ನಂಬರ್ 1

7

ಧೂಮಪಾನ ವ್ಯಸನ: ವಿಶ್ವದಲ್ಲೇ ಚೀನಾ ನಂಬರ್ 1

Published:
Updated:

ಬೀಜಿಂಗ್ (ಪಿಟಿಐ): ಚೀನಾದಲ್ಲಿ ಸುಮಾರು 30 ಕೋಟಿ ಧೂಮಪಾನಿಗಳಿದ್ದು, ವರ್ಷದಿಂದ ವರ್ಷಕ್ಕೆ ಹದಿಹರೆಯದ ಧೂಮಪಾನಿಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು  ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಮೂಲಕ, ವಿಶ್ವದಲ್ಲೇ ಅತಿ ಹೆಚ್ಚು ಧೂಮಪಾನಿಗಳನ್ನು ಹೊಂದಿರುವ ರಾಷ್ಟ್ರ ಎಂಬ ಅಪಖ್ಯಾತಿಗೂ ಚೀನಾ ಪಾತ್ರವಾಗಿದೆ.`ವಿಶ್ವದ ಅತೀ ದೊಡ್ಡ ತಂಬಾಕು ಉತ್ಪಾದಕ ಮತ್ತು ಬಳಕೆದಾರ ರಾಷ್ಟ್ರ ವಾಗಿರುವ ಚೀನಾದಲ್ಲಿ 30 ಕೋಟಿ ಜನರು ಧೂಮಪಾನ ಮಾಡುತ್ತಾರೆ. ಇತರೆ ಸುಮಾರು 74 ಕೋಟಿ ಜನರು ನಿಷ್ಕ್ರಿಯ ಧೂಮಪಾನದ (ಸ್ವತಃ ಧೂಮಪಾನ ಮಾಡದೆ ಇತರರು ಬಿಟ್ಟ ಹೊಗೆಯನ್ನು ಸೇವಿಸುವ ಸ್ಥಿತಿ) ಪ್ರಭಾವಕ್ಕೆ ಒಳಗಾಗಿದ್ದಾರೆ~ ಎಂದು ಚೀನಾದ ಆರೋಗ್ಯ ಇಲಾಖೆಯ ಉಪ ಸಚಿವ ಹುಯಾಂಗ್ ಜೇಫು ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ಶನಿವಾರ ವರದಿ ಮಾಡಿದೆ.ಚೀನಾದಲ್ಲಿ ಪ್ರತಿವರ್ಷ 12 ಲಕ್ಷ ಜನರು ತಂಬಾಕು ಸಂಬಂಧಿ ರೋಗಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಚೀನಾದಲ್ಲಿ ಭಾರಿ ಸಂಖ್ಯೆಯಲ್ಲಿ ಧೂಮಪಾನಿಗಳಿರುವುದನ್ನು ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆ ಕಳೆದ ವರ್ಷ ಎಚ್ಚರಿಕೆ ನೀಡಿತ್ತು. ತಂಬಾಕು ಬಳಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೇ ಹೋದಲ್ಲಿ ರೋಗಗಳಿಗೆ ತುತ್ತಾಗಿ ಮರಣ ಹೊಂದುವವರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅದು ಹೇಳಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry