ಶನಿವಾರ, ಅಕ್ಟೋಬರ್ 19, 2019
28 °C

ಧೂಮ್-3 ಮೇಳಕ್ಕೆ ಚಾಲನೆ

Published:
Updated:

ವಿಜಾಪುರ: ಬಿ.ಎಲ್.ಡಿ.ಇ. ಸಂಸ್ಥೆಯ ಎಂ.ಬಿ.ಎ.  ವಿಭಾಗದಿಂದ ಮಕರ ಸಂಕ್ರಾಂತಿ ಅಂಗವಾಗಿ ಸ್ಥಳೀಯ ಎಸ್.ಎಸ್. ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿರುವ `ಧೂಮ್-3~ ವಾಣಿಜ್ಯ ಮೇಳಕ್ಕೆ ಶನಿವಾರ ಸಂಜೆ ವರ್ಣರಂಜಿತ ಚಾಲನೆ ದೊರೆಯಿತು.ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಮೇಳಕ್ಕೆ ಚಾಲನೆ ನೀಡಿದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಗುಡ್ಡೋಡಗಿ, ಬಿಎಲ್‌ಡಿಇ ವಿವಿ ಡಾ.ಬಿ.ಜಿ. ಮೂಲಿಮನಿ, ಆಡಳಿತಾಧಿಕಾರಿಗಳಾದ ಎಸ್.ಎಚ್. ಲಗಳಿ, ಕೆ.ಎಸ್. ಬಿರಾದಾರ, ಎಂ.ಬಿ.ಎ. ಕಾಲೇಜಿನ ನಿರ್ದೇಶಕ ಡಾ.ಉತ್ತಮ ಕಿನಂಗೆ, ಮೇಳದ ಸಂಯೋಜಕ ಪ್ರೊ.ಸಿ.ಜಿ. ಬ್ಯಾಹಟ್ಟಿ ಇತರರು ಪಾಲ್ಗೊಂಡಿದ್ದರು.ಭಾರತೀಯ ಸಿನಿಮಾ ರಂಗ-50 ವರ್ಷಗಳ ಕಾಲ ನಡೆದು ಬಂದ ದಾರಿ ಕುರಿತು ರಾಷ್ಟ್ರ ಮಟ್ಟದ ಯುವ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಈ ವಾಣಿಜ್ಯ ಮೇಳದಲ್ಲಿ 75 ವ್ಯಾಪಾರ ಸಂಸ್ಥೆಗಳು ಪಾಲ್ಗೊಂಡಿವೆ. ಕಾರು, ಬೈಕ್, ಗೃಹೋಪಯೋಗಿ ವಸ್ತುಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿದಂತೆ ವಿವಿಧ ಬಗೆಯ ವ್ಯಾಪಾರಸ್ಥರು ಮಳಿಗೆ ಆರಂಭಿಸಿದ್ದಾರೆ. ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಹಾರ ಮೇಳವನ್ನೂ ಆಯೋಜಿಸಲಾಗಿದೆ. ಜಿಲ್ಲೆಯ ಜನತೆ ಇದರ ಪ್ರಯೋಜನ ಪಡೆಯಬೇಕು ಎಂದು ಡಾ.ಉತ್ತಮ ಕಿನಂಗೆ ತಿಳಿಸಿದ್ದಾರೆ.

 

Post Comments (+)