ಧೋಲಕ್‌ಪುರ್ ಬ್ರೇಕಿಂಗ್ ನ್ಯೂಸ್

7

ಧೋಲಕ್‌ಪುರ್ ಬ್ರೇಕಿಂಗ್ ನ್ಯೂಸ್

Published:
Updated:
ಧೋಲಕ್‌ಪುರ್ ಬ್ರೇಕಿಂಗ್ ನ್ಯೂಸ್

ಛೋಟಾ ಭೀಮ್ ಯಾರಿಗೆ ತಾನೇ ಗೊತ್ತಿಲ್ಲ. ಮಕ್ಕಳ ಪ್ರೀತಿಯ ಪೋಗೊ ಚಾನೆಲ್‌ನಲ್ಲಿ ಬರುವ ಅನಿಮೇಷನ್ ಪಾತ್ರ ಆತ.ಛೋಟಾ ಭೀಮ್ ತನ್ನ ಚಡ್ಡಿ ದೋಸ್ತರಾದ ಚುಟ್ಕಿ, ರಾಜು, ಜಗ್ಗು (ಕೋತಿ) ಜೊತೆ ಅಡ್ಡಾಡುವುದು, ಧೋಲಕ್‌ಪುರದ ಜನರನ್ನು ಗೋಳು ಹೋಯ್ದುಕೊಳ್ಳುವುದು, ಅಪಾಯದಿಂದ ಪಾರು ಮಾಡುವುದು, ತನಗೆ ಆಗಾಗ ಕಾಟ ಕೊಡುವ ಕಾಲಿಯಾ, ಧೋಲು-ಭೋಲು ಅವರಿಗೆ ತಕ್ಕಶಾಸ್ತಿ ಮಾಡುವುದು ಎಲ್ಲವೂ ಮಕ್ಕಳಿಗೆ ಅಚ್ಚುಮೆಚ್ಚು.

ಛೋಟಾ ಭೀಮ್ ಅಭಿಮಾನಿಗಳಾದ ಪುಟಾಣಿ ಕಥೆಗಾರರು, ಕನಸುಗಾರರಿಗೆ ಪೋಗೊ ಸೆಪ್ಟೆಂಬರ್ 2ರವರೆಗೆ ಸ್ಪರ್ಧೆ ಏರ್ಪಡಿಸಿದೆ.ಇದರಲ್ಲಿ ಪಾಲ್ಗೊಳ್ಳಬಯಸುವ ಮಕ್ಕಳು ಸೋಮವಾರದಿಂದ ಶುಕ್ರವಾರ ದವರೆಗೆ ಸಂಜೆ 6 ಗಂಟೆಗೆ ಪೋಗೊ ಚಾನೆಲ್ ವೀಕ್ಷಿಸಬೇಕು. ಆ ಸರಣಿಯ ಮಧ್ಯೆ ತೋರಿಸುವ `ಧೋಲಕ್‌ಪುರ್ ಬ್ರೇಕಿಂಗ್ ನ್ಯೂಸ್~ ಕ್ಲಿಪಿಂಗ್‌ಗಳನ್ನು ನೋಡಿ ಆ ಕಥೆಗೆ ಅಂತ್ಯ ಸೂಚಿಸಬೇಕು. ಅಂತಿಮ ಸುತ್ತಿಗೆ ಆಯ್ಕೆಯಾದ 6 ಮಕ್ಕಳನ್ನು ಪೋಗೊದ ವಿಶೇಷ ವರದಿಗಾರರಾಗಿ ಅವರು ಸೂಚಿಸಿದ ಕಥೆಯ ಜೊತೆ ಚಾನಲ್‌ನಲ್ಲಿ ತೋರಿಸಲಾಗುತ್ತದೆ.

 

ಇದಲ್ಲದೇ ರನ್ನರ್ ಅಪ್ ಆದ 30 ಮಕ್ಕಳ ಹೆಸರನ್ನು ಈ ಸರಣಿಯ ಸಮಯದಲ್ಲಿ ಪ್ರಕಟಿಸಲಾಗುತ್ತದೆ. ಅದಲ್ಲದೇ ಇವರಿಗೆಲ್ಲ ಐ-ಪಾಡ್ ದೊರೆಯಲಿದೆ.

ಮಾಹಿತಿಗೆ: 5888 8388, www.pogo.tv   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry