ಧ್ಯಾನಾಸಕ್ತ ಗಾಂಧೀಜಿ ಪ್ರತಿಮೆ ಸ್ಥಾಪನೆ
ಬೆಂಗಳೂರು: ವಿಧಾನಸೌಧ- ವಿಕಾಸಸೌಧದ ನಡುವೆ ಧ್ಯಾನಾಸಕ್ತ ಭಂಗಿಯಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆ ಸ್ಥಾಪನೆಗೆ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ನೇತೃತ್ವದ ಸಮಿತಿ ಒಪ್ಪಿಗೆ ಸೂಚಿಸಿದೆ.
ನವದೆಹಲಿಯ ಸಂಸತ್ ಭವನದ ಎದುರಿನಲ್ಲಿರುವ ಗಾಂಧಿ ಪ್ರತಿಮೆ ಮಾದರಿಯ್ಲ್ಲಲೇ ಇಲ್ಲಿಯೂ ಪಶ್ಚಿಮಾಭಿಮುಖವಾಗಿ ಗಾಂಧಿ ಪ್ರತಿಮೆ ಸ್ಥಾಪಿಸಲು ಸಭೆ ಸಮ್ಮತಿ ಸೂಚಿಸಿದೆ ಎಂದು ಬುಧವಾರ ಶಂಕರಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.
`ಸಂಸತ್ ಭವನದ ಎದುರಿನ ಗಾಂಧಿ ಪ್ರತಿಮೆಯನ್ನು ನಿರ್ಮಿಸಿದ ಶಿಲ್ಪಿ ಮಹಾರಾಷ್ಟ್ರದ ನೋಯಿಡಾದಲ್ಲಿ ನೆಲೆಸಿದ್ದಾರೆ. ಅವರನ್ನು ಸಂಪರ್ಕಿಸಿ ಅವರಿಂದಲೇ ಪ್ರತಿಮೆ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ವಾಸ್ತುಶಿಲ್ಪಿಗಳಿಂದ ಕೂಡಲೇ ಪ್ರತಿಮೆ ವಿನ್ಯಾಸ ಪಡೆದು ಅದಕ್ಕೆ ಒಪ್ಪಿಗೆ ಪಡೆಯಲಾಗುವುದು. ನಂತರ 15 ದಿನಗಳೊಳಗಾಗಿ ಪ್ರತಿಮೆ ಸ್ಥಾಪನೆಗೆ ಕಾರ್ಯಾದೇಶ ನೀಡಲಾಗುವುದು~ ಎಂದರು.
ಜನವರಿಯಲ್ಲಿ ಅನಾವರಣ ಸಂಭವ:`ಜನವರಿಯಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸುವ ಬಗ್ಗೆಯೂ ಚಿಂತನೆ ನಡೆದಿದೆ~ ಎಂದು ಅವರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.