ಧ್ಯಾನ್‌ಚಂದ್‌ ಅಕಾಡೆಮಿಗೆ ಗೆಲುವು

7
‘ಸಿ’ ಡಿವಿಷನ್‌ ಹಾಕಿ ಟೂರ್ನಿ

ಧ್ಯಾನ್‌ಚಂದ್‌ ಅಕಾಡೆಮಿಗೆ ಗೆಲುವು

Published:
Updated:

ಬೆಂಗಳೂರು: ಧ್ಯಾನಚಂದ್‌ ಹಾಕಿ ಅಕಾಡೆಮಿ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯತ್ತಿರುವ ‘ಸಿ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಭಾನುವಾರದ ಪಂದ್ಯದಲ್ಲಿ 4–1 ಗೋಲುಗಳಿಂದ ಬೆಂಗಳೂರು ಫ್ರೆಂಡ್ಸ್‌ ತಂಡವನ್ನು ಮಣಿಸಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ  ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತುಮಕೂರಿನ ಧ್ಯಾನ್‌ಚಂದ್‌ ತಂಡದ ನಾಗಸುಮನ್‌ 2ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು, 12ನೇ ನಿಮಿಷದಲ್ಲಿ ಇನ್ನೊಂದು ಗೋಲು ಗಳಿಸಿದರು. ರೋಹಿತ್‌ ವರ್ಮ (33ನೇ ನಿಮಿಷ) ಮತ್ತು ಶ್ಯಾಮ್‌ (42ನೇ ನಿ.) ಉಳಿದ ಗೋಲು ತಂದಿತ್ತರು.ದಿನದ ಇನ್ನೊಂದು ಪಂದ್ಯದಲ್ಲಿ ರಘುನಾಥ್‌ 32ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಬಲದಿಂದ ರೈಸಿಂಗ್‌ ಸ್ಟಾರ್‌ ಹಾಕಿ ಕ್ಲಬ್‌ 1–0 ಗೋಲಿನಿಂದ ಅಶೋಕ ಕ್ಲಬ್‌ ವಿರುದ್ಧ ಗೆಲುವು ಪಡೆಯಿತು.ಉಳಿದ ಪಂದ್ಯಗಳಲ್ಲಿ ಫಾಲ್ಕನ್ ಕ್ಲಬ್‌ 3–2 ಗೋಲುಗಳಿಂದ ಲಿಯೊ ಸ್ಪೋರ್ಟ್ಸ್‌ ಕ್ಲಬ್‌ ಮೇಲೂ, ವಾರಿಯರ್ಸ್‌ ಕ್ಲಬ್‌ 9–0ರಲ್ಲಿ ಮೆಟ್ರೊ ಕ್ಲಬ್‌ ವಿರುದ್ಧವೂ ಗೆಲುವು ಸಾಧಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry