ಭಾನುವಾರ, ಅಕ್ಟೋಬರ್ 20, 2019
27 °C

ಧ್ವಜಸ್ತಂಭ ಶುದ್ಧೀಕರಣಕ್ಕೆ ಜಲಾಭಿಷೇಕ

Published:
Updated:

ಸಿಂದಗಿ: `ಪಟ್ಟಣದ ಮಿನಿವಿಧಾನಸೌಧ ಆವರಣದ ಧ್ವಜ ಸ್ತಂಭದಲ್ಲಿ ಕಿಡಿಗೇಡಿ ಗಳು ಪಾಕ್ ಧ್ವಜ ಹಾರಿಸಿದ ಹಿನ್ನೆಲೆ ಯಲ್ಲಿ ಧ್ವಜಸ್ತಂಭ ಮಲಿನಗೊಂಡಿದೆ. ಧ್ವಜಸ್ತಂಭವನ್ನು ಶುದ್ಧೀಕರಣಗೊಳಿ ಸಲು ಶೀಘ್ರದಲ್ಲಿಯೇ ಕಾಂಗ್ರೆಸ್ ವತಿ ಯಿಂದ ಜಲಾಭಿಷೇಕ  ನಡೆಸಲಾಗು ವುದು~ ಎಂದು ಮಾಜಿ ಶಾಸಕ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಸುಣಗಾರ ಗುರುವಾರ  ಪಟ್ಟಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಪುರಸಭೆ ಅಧ್ಯಕ್ಷರನ್ನೊಳಗೊಂಡು ಪಟ್ಟಣದ ಹಿಂದೂ-ಮುಸ್ಲಿಂ ಬಂಧುಗಳ ಸಮ್ಮುಖದಲ್ಲಿ ನದಿಯಿಂದ ಗಂಗಾಜಲ ತಂದು ಇಲ್ಲಿನ ಎಲ್ಲಾ ವೃತ್ತಗಳಲ್ಲಿನ ಮಹಾತ್ಮರ ಪುತ್ಥಳಿಗಳನ್ನು ತೊಳೆಯಲಾ ಗುವುದು. ನಂತರ ಧ್ವಜ ಸ್ತಂಭ ಶುದ್ಧ ಗೊಳಿಸುವುದಾಗಿ ವಿವರಿಸಿದರು. ಬಿಜೆಪಿಯ ಅಂಗ ಸಂಘಟನೆಯಾದ ಶ್ರೀರಾಮ ಸೇನಾ ಕಾರ್ಯಕರ್ತರು ಈ ದೇಶದ್ರೋಹದ ಕೃತ್ಯ ಎಸಗಿರುವುದು ಸಿಂದಗಿಯ ಜನತೆಗೆ ಭಾರಿ ನೋವುಂಟು ಮಾಡಿದೆ. ಈ ಕೃತ್ಯದ ಹಿಂದೆ ರಾಜಕೀಯ ಕುತಂತ್ರ ಇರುವುದು ಸ್ಪಷ್ಟವಾಗುತ್ತದೆ. ಕಾಣದ ಭಾರಿ ಕುಳಗಳ ಕೈವಾಡವಿರು ವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿ ಯದೇ ಸತ್ಯವನ್ನು ಬಯಲಿಗೆ ತರಬೇಕು. ಈ ಕಾರ್ಯಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ತನ್ನ ಗಲಭೆ ಹಸ್ತವನ್ನು ಚಾಚಿ ಜಾತಿ-ಜಾತಿ, ಧರ್ಮ-ಧರ್ಮಗಳ ಮಧ್ಯೆ ಕಲಹ ಹುಟ್ಟಿಸಿ ಭಾವೈಕ್ಯಕ್ಕೆ ಧಕ್ಕೆ ತರುವ ದಿಸೆಯಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವುದು ಆತಂಕಕಾರಿ ವಿಷಯ ಎಂದರು.ಹಿಂದೂ-ಮುಸ್ಲಿಂರಲ್ಲಿ ಬಿರುಕು ಸೃಷ್ಟಿಸಿ ಮತಗಳ ವಿಂಗಡನೆ ಮಾಡು ವುದೇ ಈ ಘಟನೆಯ ಮುಖ್ಯ ಉದ್ದೇಶ ವಾಗಿದೆ ಎಂದು ಆರೋಪಿಸಿದರು. ಮೂರೇ ದಿನಗಳಲ್ಲಿ ಕಿಡಿಗೇಡಿಗಳ ಹೆಸರನ್ನು ಬಹಿರಂಗಪಡಿಸಿರುವದಕ್ಕೆ ಕಾಂಗ್ರೆಸ್ ಸಮಿತಿ ಪರವಾಗಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಇದರ ಹಿಂದಿರುವ ರಾಜಕೀಯ ವ್ಯಕ್ತಿ ಗಳ ಕೈವಾಡವನ್ನು ಹೊರ  ಹಾಕದಿದ್ದರೆ ಕಾಂಗ್ರೆಸ್ ಜಿಲ್ಲೆಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಪ್ಪ ಯಂಕಂಚಿ, ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಮಲ್ಲು ಗತ್ತರಗಿ, ಮುರಗೆಪ್ಪ ಗೌಡ ರದ್ದೇವಾಡಗಿ, ಎಂ.ಎನ್. ಸಾಲಿ, ಬಸವರಾಜ ಶೀಲವಂತ, ಯಂಟಮಾನ, ಶಿವು ಮೂಡಗಿ, ರಾಜಶೇಖರ ಕೂಚಬಾಳ, ಎಚ್.ಕೆ. ನದಾಫ್, ಸಿದ್ದಣ್ಣ ಹಿರೇಕುರುಬರ ಉಪಸ್ಥಿತರಿದ್ದರು.

Post Comments (+)