ಶುಕ್ರವಾರ, ಜೂನ್ 18, 2021
28 °C

ಧ್ವಜಾರೋಹಣ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿ ವರ್ಷ ನವೆಂಬರ್ 1ರಂದು ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.ಮೈಸೂರು ಅರಮನೆಗೆ 100 ವರ್ಷ ಆಗಿರುವ ಹಿನ್ನೆಲೆಯಲ್ಲಿ ಇಲ್ಲಿಯ ವಾಸ್ತುಶಿಲ್ಪ ನವೀಕರಿಸಲು ಹಾಗೂ ಉದ್ಯಾನಗಳನ್ನು ಉನ್ನತ ದರ್ಜೆಗೆ ಏರಿಸಲು 25 ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ.ಬೆಂಗಳೂರಿನ ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ 2ಕೋಟಿ ರೂಪಾಯಿ, ದೇವಸ್ಥಾನದ ಶಿಲ್ಪ ಕಲೆಯ ಬಗ್ಗೆ  ಗ್ರಾಮೀಣ ಪ್ರದೇಶಗಳಲ್ಲಿ ಶಿಲ್ಪಿಗಳಿಗೆ ತರಬೇತಿ ನೀಡಲು 3 ಕೋಟಿ ರೂ ಅನುದಾನ ನೀಡಲಾಗುವುದು.ಈಗಾಗಲೇ ಘೋಷಣೆ ಆಗಿರುವ ಆರು ಪಾರಂಪರಿಕ ಪ್ರದೇಶಗಳ ಜೊತೆಗೆ 14 ಹೊಸ ಪ್ರದೇಶಗಳನ್ನು ಪಾರಂಪರಿಕ ನಗರಗಳೆಂದು ಘೋಷಿಸಲು 1 ಕೋಟಿ ರೂ ಅನುದಾನ ಒದಗಿಸಲಾಗಿದೆ.* ಕನ್ನಡ, ಸಂಸ್ಕೃತಿ ಚಟುವಟಿಕೆ ಪ್ರೋತ್ಸಾಹಕ್ಕೆ 269 ಕೋಟಿ* ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ಅನುದಾನ* ಹಿರಿಯ ಪತ್ರಕರ್ತರ ಗೌರವ ಧನ 3ಸಾವಿರಕ್ಕೆ ಹೆಚ್ಚಳ* ಪತ್ರಕರ್ತರ ಕಲ್ಯಾಣಕ್ಕಾಗಿ ಒಂದು ಕೋಟಿ ರೂಪಾಯಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.