ಬುಧವಾರ, ಏಪ್ರಿಲ್ 21, 2021
29 °C

ಧ್ವಜಾರೋಹಣ ದುರಂತ: ಕಟ್ಟಡದ ಮೇಲಿಂದ ಬಿದ್ದು ನೌಕರನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ: ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕಟ್ಟಡದ ಮೇಲಿನ ಕಬ್ಬಿಣದ ಸರಳಿಗೆ ತ್ರಿವರ್ಣ ಧ್ವಜ ಕಟ್ಟಲೆಂದೇ ಕಟ್ಟಡ ಏರಿದ್ದ ನೌಕರನೊಬ್ಬ ಆಯತಪ್ಪಿ ಮೇಲಿಂದ ಬಿದ್ದು ಸಾವಿಗೀಡಾಗಿರುವ ಘಟನೆ ಸಮೀಪದ ಹಾರುವನಹಳ್ಳಿ ಗ್ರಾಮದ ಬಳಿ ಬುಧವಾರ ಮುಂಜಾನೆ ಸಂಭವಿಸಿದೆ.ಪ್ರಗತಿ ಸ್ಟೀಲ್ಸ್ ಉದ್ಯೋಗ್ ಕಾರ್ಖಾನೆಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿದ್ದ ಚಿಲಕನಹಟ್ಟಿ ಗ್ರಾಮದ ಪಿ.ಪರಶುರಾಮ್ ಮಾರ್ಗದಪ್ಪ (23)  ಮೃತಪಟ್ಟಿದ್ದಾರೆ.  ಕಳೆದ ಮೂರು ವರ್ಷದಿಂದ ಇವರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಇತರ ಕಾರ್ಮಿಕರೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಲೆಂದೇ ಬುಧವಾರ ಮುಂಜಾನೆ 9ರ ಸುಮಾರಿಗೆ ಕಾರ್ಖಾನೆಯ ಮುಖ್ಯ ದ್ವಾರಕ್ಕೆ ಹೊಂದಿಕೊಂಡಿರುವ ಆಡಳಿತ ಕಚೇರಿಯ ಕಟ್ಟಡದ ಛಾವಣಿ ಮೇಲಿನ ಕಬ್ಬಿಣದ ಸರಳಿಗೆ ರಾಷ್ಟ್ರಧ್ವಜ ಕಟ್ಟಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ.ಧ್ವಜವನ್ನು ಕಟ್ಟುವ ವೇಳೆ ಕಬ್ಬಿಣದ ಸರಳು ಗಟ್ಟಿಯಾಗಿದೆಯೇ ಎಂಬುದನ್ನು ಪರಿಶೀಲಿಸುವ ಸಂದರ್ಭ, ಆಯತಪ್ಪಿ ಧ್ವಜಸಮೇತ 15 ಅಡಿ ಎತ್ತರದಿಂದ ಕೆಳಗೆ ಬ್ದ್ದಿದರು  ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಆಗಿ ಮೃತಪಟ್ಟಿದ್ದಾನೆ.

 .

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.