ಶನಿವಾರ, ಜೂನ್ 12, 2021
22 °C

ನಂಜರಾಯಪಟ್ಟಣ: ಕಾಳ್ಗಿಚ್ಚು ಜಾಗೃತಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜರಾಯಪಟ್ಟಣ: ಕಾಳ್ಗಿಚ್ಚು ಜಾಗೃತಿ ಜಾಥಾ

ಕುಶಾಲನಗರ: ಜೀವ ಸಂಕುಲಗಳ ತಾಣವಾದ ಅರಣ್ಯಕ್ಕೆ ಬೆಂಕಿ ಬೀಳದಂತೆ ಎಲ್ಲರೂ ಜಾಗೃತಿ ವಹಿಸಿಬೇಕು ಎಂದು ನಂಜರಾಯಪಟ್ಟಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎಲ್.ದೊಡ್ಡಸಿದ್ದಪ್ಪ ಶನಿವಾರ ಹೇಳಿದರು.ನಂಜರಾಯಪಟ್ಟಣ ಪ್ರೌಢಶಾಲೆಯ ಆಶ್ರಯದಲ್ಲಿ ಅರಣ್ಯ ಇಲಾಖೆ ಮತ್ತು ಮೀನುಕೊಲ್ಲಿ ಗ್ರಾಮ ಅರಣ್ಯ ಸಮಿತಿ ವತಿಯಿಂದ ನಂಜರಾಯಪಟ್ಟಣದಲ್ಲಿ ನಡೆದ  ಕಾಳ್ಗಿಚ್ಚು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬಿದ್ದು ನಿಸರ್ಗ ಸಂಪತ್ತು ನಾಶವಾಗುತ್ತಿದೆ. ಆದ್ದರಿಂದ ಕಾಡಿಗೆ ಬೆಂಕಿ ಬೀಳದಂತೆ ತಡೆಯಲು ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.ಉಪ ವಲಯ ಅರಣ್ಯಾಧಿಕಾರಿ ಕೆ.ಎಸ್.ಸುಬ್ರಾಯ ಮಾತನಾಡಿ, ಕಾಡಂಚಿನಲ್ಲಿ ವಾಸಿಸುವ ಜನರು ಕಾಡಿನಲ್ಲಿ ಬೆಂಕಿ ಕಂಡ ತಕ್ಷಣ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಮೂಲಕ ಬೆಂಕಿ ಆರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. ನಂಜರಾಯಪಟ್ಟಣ ಪ್ರೌಢಶಾಲೆ ಬಳಿಯಿಂದ ಹೊರಟ ಜಾಥಾವು ಗ್ರಾಮದಲ್ಲಿ ಸಂಚರಿಸಿತು. ಶಾಲಾ ವಿದ್ಯಾರ್ಥಿಗಳು ಕಾಳ್ಗಿಚ್ಚು ಜಾಗೃತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕೆ.ವಿ.ಪ್ರೇಮಾನಂದ, ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ರಾಧಾಮಣಿ, ಸದಸ್ಯರಾದ ದಮಯಂತಿ, ಸುಶೀಲ, ರಮಾವತಿ, ಸುಮೇಶ್, ಪ್ರಸಾದ್, ಶಿಕ್ಷಕರಾದ ಎಚ್.ಬಿ.ಮೂರ್ತಿ, ಮಂಜುನಾಥ್ ಅಡ್ಮನಿ, ನಾಗರಾಜು, ರೀತಾ, ಉತ್ತಯ್ಯ, ಅರಣ್ಯ ರಕ್ಷಕರಾದ ಸುರೇಶ್, ದುಶ್ಯಂತ್ ಮತ್ತಿತರರು ಇದ್ದರು.ಜಾಥಾದಲ್ಲಿ ವಿದ್ಯಾರ್ಥಿಗಳು ಕಾಡಿಗೆ ಬೆಂಕಿ ನಾಡಿಗೆ ಆಪತ್ತು , ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ,  ಜಲವೇ ಜೀವಜಾಲ, ವನ್ಯಪ್ರಾಣಿಗಳನ್ನು ಸಂರಕ್ಷಿಸಿ  ಮತ್ತಿತರ ಘೋಷಣೆಗಳನ್ನು ಕೂಗಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.