`ನಂದಿನಿ ಹಾಲು' ಜಾಗೃತಿಗೆ ಸಂಚಾರಿ ಪ್ರಯೋಗಾಲಯ: ಹರ್ಷ ಗುಪ್ತಾ

7

`ನಂದಿನಿ ಹಾಲು' ಜಾಗೃತಿಗೆ ಸಂಚಾರಿ ಪ್ರಯೋಗಾಲಯ: ಹರ್ಷ ಗುಪ್ತಾ

Published:
Updated:

ಬೀದರ್: `ನಂದಿನಿ' ಹಾಲಿನ ಬಗೆಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಶೀಘ್ರದಲ್ಲಿಯೇ ಗುಲ್ಬರ್ಗ-ಬೀದರ್ ಹಾಲು ಒಕ್ಕೂಟದ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ `ಸಂಚಾರಿ ಪ್ರಯೋಗಾಲಯ'ದ ಸಂಚಾರ ಆರಂಭಿಸಲಾಗುವುದು ಎಂದು ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತಾ ಹೇಳಿದರು.ಸಂಚಾರಿ ಪ್ರಯೋಗಾಲಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸ್ಥಳದಲ್ಲಿಯೇ ಪರೀಕ್ಷೆ ನಡೆಸಿ ಗ್ರಾಹಕರಿಗೆ ಹಾಲಿನ ಗುಣಮಟ್ಟದ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಈ ವಾಹನ ಬೀದರ್, ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಜಾನುವಾರುಗಳಿಗೆ ತುರ್ತು ವೈದ್ಯಕೀಯ ಸೇವೆ ಕಲ್ಪಿಸಲು ಬೀದರ್ ಪಶು ವೈದ್ಯಕೀಯ  ವಿಶ್ವವಿದ್ಯಾಲಯವು `ಧನ್ವಂತರಿ' ಅಂಬ್ಯುಲೆನ್ಸ್ ಸೇವೆ ಆರಂಭಿಸಿದ್ದು, ಇದಕ್ಕಾಗಿ ರೈತರಿಂದ ಪ್ರತಿ ಕಿ.ಮೀ.ಗೆ 12 ರೂಪಾಯಿ ಪಡೆಯಲಾಗುತ್ತಿದೆ. ಇದೀಗ ಈ ಪೈಕಿ 10 ರೂಪಾಯಿಯನ್ನು ಗುಲ್ಬರ್ಗ- ಬೀದರ್ ಹಾಲು ಒಕ್ಕೂಟ ಭರಿಸಲಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry