ಭಾನುವಾರ, ನವೆಂಬರ್ 17, 2019
29 °C

ನಂದಿ ಉತ್ಸವ ನವೆಂಬರ್‌ಗೆ ಮುಂದೂಡಿಕೆ

Published:
Updated:

ಚಿಕ್ಕಬಳ್ಳಾಪುರ: ಜೂನ್ ಅಂತ್ಯದಲ್ಲಿ ಅಥವಾ ಜುಲೈ ಮೊದಲನೇ ವಾರದಲ್ಲಿ ಆಚರಿಸಲು ಉದ್ದೇಶಿಸಲಾಗಿದ್ದ ನಂದಿ ಉತ್ಸವವನ್ನು ನವೆಂಬರ್‌ವರೆಗೆ ಮುಂದೂಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆಯವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ನಂದಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.`ಮಳೆಗಾಲ ಆರಂಭವಾಗಿರುವ ಕಾರಣ ನಂದಿ ಉತ್ಸವವನ್ನು ಆಚರಿಸುವುದು ಕಷ್ಟಸಾಧ್ಯ. ಭಾರಿ ಮಳೆಯಾದಲ್ಲಿ ಎಲ್ಲ ಸಿದ್ಧತೆಗಳಿಗೆ ಅಡಚಣೆಯಾಗಲಿದೆ. ಬಹುತೇಕ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಕಾರಣ ಉತ್ಸವಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ನಂದಿ ಉತ್ಸವವನ್ನು ನವೆಂಬರ್‌ನಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ~ ಎಂದು ಶಾಸಕ ಕೆ.ಪಿ.ಬಚ್ಚೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.`ಆಗಸ್ಟ್ 23ರಂದು ಜಿಲ್ಲಾ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಲಾಗುವುದು. ನವೆಂಬರ್‌ನಲ್ಲಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಂದಿ ಉತ್ಸವ ಆಚರಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)