ನಂಬಿ, ನನಗಿನ್ನೂ ಇಪ್ಪತ್ತು...

7

ನಂಬಿ, ನನಗಿನ್ನೂ ಇಪ್ಪತ್ತು...

Published:
Updated:
ನಂಬಿ, ನನಗಿನ್ನೂ ಇಪ್ಪತ್ತು...

`ಬೇಕಿದ್ದರೆ ಅಮ್ಮನನ್ನು ಕೇಳಿ ಖಚಿತಪಡಿಸಿಕೊಳ್ಳಿ. ನನಗಿನ್ನೂ ಇಪ್ಪತ್ತು~ ಎಂದು ಹರಿಪ್ರಿಯಾ ಒತ್ತಿ ಹೇಳಿದರು. ಅವರು ಅಷ್ಟು ಸ್ಪಷ್ಟವಾಗಿ ಹೇಳಿದರೂ ಕೆಲವರ ಕಣ್ಣಲ್ಲಿ ಅನುಮಾನದ ಪ್ರಶ್ನೆ. ಅದನ್ನು ಗುರ್ತಿಸಿ ಬೇಸರಗೊಂಡವರಂತೆ- `ನಂಬಿದರೆ ನಂಬಿ ಬಿಟ್ಟರೆ ಬಿಡಿ, ನನ್ನ ವಯಸ್ಸನ್ನು ಸಾಬೀತುಪಡಿಸುವ ಅನಿವಾರ್ಯತೆಯೇನೂ ಇಲ್ಲ~ ಎಂದು ನಕ್ಕರು.

ಹರಿಪ್ರಿಯಾ ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷಗಳು ಭರ್ತಿಯಾದವು. ಆಗ ಆಕೆಯಿನ್ನೂ ಷೋಡಶಿಯಂತೆ. ಆ ಲೆಕ್ಕ ಪಕ್ಕಾ ಆದರೆ ಅವರ  ವಯಸ್ಸೀಗ ಇಪ್ಪತ್ತು! ಅಂದಹಾಗೆ, ಈ ವಯಸ್ಸಿನ ಲೆಕ್ಕಾಚಾರ ನಡೆಯಲಿಕ್ಕೆ ಕಾರಣ, `ಕಿಲಾಡಿ ಕಿಟ್ಟಿ~ ಸುದ್ದಿಗೋಷ್ಠಿಯಲ್ಲಿ ಹರಿಪ್ರಿಯಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದು.

ಕೇಕ್ ಕತ್ತರಿಸಿದ ಹರಿ ಸಿಕ್ಕಾಪಟ್ಟೆ ಖುಷಿಯಾಗಿದ್ದರು. 2011 ಅವರಿಗೆ ಅದೃಷ್ಟದ ವರ್ಷವಂತೆ. ರವಿಚಂದ್ರನ್ ಜೊತೆ ಕೆಲಸ ಮಾಡಿದ `ಮಂಜಿನ ಹನಿ~ ಖುಷಿಕೊಟ್ಟಿದೆ. `ಸಾಗರ್~, `ಸೂಪರ್ ಶಾಸ್ತ್ರಿ~ ಸೇರಿದಂತೆ ಅವಕಾಶಗಳು ದೊರೆತಿವೆ. ತೆಲುಗು, ತಮಿಳು ಚಿತ್ರಗಳಲ್ಲೂ ಯಶಸ್ಸಿನ ಪಸೆಯಿದೆ. ನಟಿಯೊಬ್ಬಳು ಖುಷಿಯಾಗಿರಲಿಕ್ಕೆ ಇನ್ನೇನು ಬೇಕು?

`ಮುಂದಿನ ವರ್ಷವೂ ಇಷ್ಟೇ ಖುಷಿಯಾಗಿರಿ~ ಎಂದು ಹಿರಿಯರೊಬ್ಬರು ಹಾರೈಸಿದಾಗ ಹರಿಪ್ರಿಯಾಳ ಕಣ್ಣುಗಳಲ್ಲೆರಡು ಕಾಮನಬಿಲ್ಲು ಬಂದು ಕೂತಂತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry