ನಕಲಿ ಖಾತೆ ರೂ 2.70 ಲಕ್ಷ ವಂಚನೆ

7

ನಕಲಿ ಖಾತೆ ರೂ 2.70 ಲಕ್ಷ ವಂಚನೆ

Published:
Updated:

ಉಡುಪಿ: ಇಲ್ಲಿನ ಕೆ.ಎಂ. ಮಾರ್ಗದ ರಾಧಾ ಡೆಂಟಲ್ ಸರ್ಜಿಕಲ್‌ನ ವ್ಯವಸ್ಥಾಪಕ ಹರಿ ಅವರ ಇ ಮೇಲ್ ಹ್ಯಾಕ್ ಮಾಡಿ ಅವರ ಖಾತೆಗೆ ಜಮೆಯಾಗಬೇಕಿದ್ದ ರೂ 2.70 ಲಕ್ಷ ಮೊತ್ತವನ್ನು ನಕಲಿ ಖಾತೆಗೆ ಸಂದಾಯ ಮಾಡಿ  ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ವಂಚನೆಗೊಳಗಾದ ಹರಿ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.`ಇ ಮೇಲ್ ಹ್ಯಾಕ್ ಮಾಡಿ ನನಗೆ ಹಣ ಪಾವತಿ ಮಾಡಬೇಕಾಗಿದ್ದವರ ವಿವರ ತಿಳಿದುಕೊಂಡ ಆರೋಪಿಗಳು ತಮ್ಮದೇ ಆದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಸಂಬಂಧಿಸಿದವರಿಗೆ ತಿಳಿಸಿದ್ದಾರೆ. ಇದನ್ನು ನಂಬಿದ ಅವರು ದುಷ್ಕರ್ಮಿಗಳು ನೀಡಿದ ಖಾತೆ ಸಂಖ್ಯೆಗೆ ಹಣ ವರ್ಗಾಯಿಸಿದ್ದಾರೆ' ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಅನುಮಾನಗೊಂಡು ಈ ಬಗ್ಗೆ ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂತು ಎಂದು ಅವರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry