ನಕಲಿ ನೋಟು: ಆರ್ಥಿಕತೆಗೆ ಧಕ್ಕೆ

7

ನಕಲಿ ನೋಟು: ಆರ್ಥಿಕತೆಗೆ ಧಕ್ಕೆ

Published:
Updated:

ಶಿವಮೊಗ್ಗ: `ದೇಶದಲ್ಲಿ ನಕಲಿನೋಟುಗಳ ಚಲಾವಣೆಯಿಂದ ಆರ್ಥಿಕ ವ್ಯವಸ್ಥೆಗೆ ತೀವ್ರ ಧಕ್ಕೆ ಆಗುತ್ತಿದೆ~ ಎಂದು ಅಖಿಲ ಭಾರತ ಎಸ್‌ಬಿಎಂ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್. ಹಿರಿಯಣ್ಣಯ್ಯ ವಿಷಾದಿಸಿದರು.ನಗರದಲ್ಲಿ ಭಾನುವಾರ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘ ಆಯೋಜಿಸಿದ್ದ `ಸಾಚಾ ಭಾರತೀಯ ನೋಟುಗಳ ಲಕ್ಷಣ~ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.ಜನರಲ್ಲಿ ನಕಲಿನೋಟುಗಳ ಬಗ್ಗೆ ಹೆಚ್ಚಿನ ಅರಿವಿಲ್ಲ. ಆದ್ದರಿಂದ, ಸುಲಭವಾಗಿ ನಾಗರಿಕರು ಮೋಸ ಹೋಗುತ್ತಿದ್ದಾರೆ. ಭಾರತಕ್ಕೆ ಪಾಕಿಸ್ತಾನದಿಂದ ನಕಲಿನೋಟುಗಳು ಬರುತ್ತಿವೆ. ಪಾಕಿಸ್ತಾನ ಭಾರತದಲ್ಲಿ ನಕಲಿನೋಟುಗಳನ್ನು ಚಲಾವಣೆ ಮಾಡಿ, ದೇಶದ ಆರ್ಥಿಕ ಪರಿಸ್ಥಿತಿ ಹಾಳುಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆಪಾದಿಸಿದರು.ಭಾರತಕ್ಕೆ ಪಾಕಿಸ್ತಾನವು ನೇಪಾಳ, ಬಾಂಗ್ಲಾದೇಶ ಮತ್ತು ದುಬೈ ಮೂಲಕ ನಕಲಿ ಕರೆನ್ಸಿ ಕಳಿಸುತ್ತಿದೆ ಎಂದು ದೂರಿದರು.2010 ಮತ್ತು 2011ನೇ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮತ್ತು ಇತರ ಬ್ಯಾಂಕ್‌ಗಳಲ್ಲಿ ಸುಮಾರು 2,400 ನಕಲಿನೋಟು ಚಲಾವಣೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು ವಿಭಾಗದ ಹಿರಿಯ ಸಹಾಯಕ ವ್ಯವಸ್ಥಾಪಕ ಟಿ.ಎನ್. ಅಶೋಕ್‌ಕುಮಾರ್ ಮಾತನಾಡಿದರು.ಬಿ.ಎಸ್. ನರಸಿಂಹಮೂರ್ತಿ, ನಾಗರಾಜಶೆಟ್ಟಿ, ದತ್ತಕುಮಾರ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry