ನಕಲಿ ಮೊಬೈಲ್ ಮಾರಾಟ: ದಾಳಿ

7

ನಕಲಿ ಮೊಬೈಲ್ ಮಾರಾಟ: ದಾಳಿ

Published:
Updated:
ನಕಲಿ ಮೊಬೈಲ್ ಮಾರಾಟ: ದಾಳಿ

ಮಂಗಳೂರು: ಸ್ಯಾಮ್‌ಸಂಗ್ ಕಂಪೆನಿಯ ಹೆಸರಲ್ಲಿ ನಕಲಿ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಶುಕ್ರವಾರ ಮಂಗಳೂರು ಕೇಂದ್ರ ಮಾರುಕಟ್ಟೆಯ ಎಂಟು ಅಂಗಡಿಗಳ ಮೇಲೆ ದಾಳಿ ನಡೆಸಿದ ಉತ್ತರ ಠಾಣೆ ಪೊಲೀಸರು, ಹಲವು ನಕಲಿ ಸಾಮಗ್ರಿಗಳೊಂದಿಗೆ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ದಾಳಿ ನಡೆಸಲಾದ ಮೊಬೈಲ್ ಅಂಗಡಿಗಳಿಂದ 151 ಮೊಬೈಲ್ ಫೋನ್‌ಗಳು, 40 ಅಡಾಪ್ಟರ್‌ಗಳು, 1,600 ಪೌಚ್, 350 ಸ್ಟಿಕ್ಕರ್‌ಗಳು ಮತ್ತು 40 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಸ್ಯಾಮ್‌ಸಂಗ್ ಕಂಪೆನಿಯ ಪ್ರತಿನಿಧಿ ಸ್ಟೀಫನ್ ರಾಜ್ ಅವರು ನೀಡಿದ ದೂರಿನ ಮೇರೆಗೆ ಕೇಂದ್ರ ಉಪವಿಭಾಗದ ಎಸಿಪಿ ಬಿ.ಟಿ.ಕವಿತಾ, ಉತ್ತರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಶೆಟ್ಟಿ ಹಾಗೂ ಇತರ ಸಿಬ್ಬಂದಿ ದಾಳಿ ನಡೆಸಿದರು. ಸ್ಯಾಮ್ ಸಂಗ್ ಕಂಪೆನಿಯ ಲೋಗೋ ಬಳಸಿ ನಕಲಿಯಾಗಿ ಪರಿವರ್ತನೆ ಮಾಡಿ ಅದನ್ನು ನಿಜವಾದ ಸ್ಯಾಮ್‌ಸಂಗ್ ಮೊಬೈಲ್ ಎಂದು ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.ಉತ್ತರ ಠಾಣೆಯಲ್ಲಿ ಅಪರಾಧ ಕ್ರ. 23/2013 ಕಲಂ 51(ಬಿ) (1) ಜತೆಗೆ 63 ಕಾಪಿರೈಟ್ ಕಾಯ್ದೆ 1957ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry