ಸೋಮವಾರ, ಮೇ 17, 2021
31 °C

`ನಕಲಿ ರಸಗೊಬ್ಬರದ ಮೂಲ ತಮಿಳುನಾಡು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ರಾಜ್ಯದಲ್ಲಿ ನಕಲಿ ರಸಗೊಬ್ಬರ ಮಾರಾಟದ ಹಿಂದೆ ತಮಿಳುನಾಡಿನ ವ್ಯವಸ್ಥಿತ ಜಾಲ ಇರುವುದು ತನಿಖೆಯಿಂದ ದೃಢಪಟ್ಟಿದೆ.ಹಾನುಬಾಳು ಪ್ರಾಥಮಿಕ ಸಹಕಾರ ಸಂಘದಲ್ಲಿ ನಕಲಿ ಪೊಟ್ಯಾಶ್ ಪತ್ತೆಯಾದ ನಂತರ, ಸದರಿ ಪ್ರಕರಣದ ಆರೋಪಿ ನಿಟ್ಟೂರಿನ ಮಲ್ಲಿಕಾರ್ಜುನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಮಿಳುನಾಡಿನಿಂದ ನಕಲಿ ರಸಗೊಬ್ಬರ ರಾಜ್ಯಕ್ಕೆ ಮಾರಾಟ ಆಗುತ್ತಿರುವುದು ಬೆಳಕಿಗೆ ಬಂದಿದೆ.ತಾಲ್ಲೂಕಿನ ಹಾನುಬಾಳು ಕೃಷಿ ಪತ್ತಿನ ಸಹಕಾರ ಸಂಘ, ಚಂಗಡಿಹಳ್ಳಿ ರಸಗೊಬ್ಬರ ಮಾರಾಟದ ಅಂಗಡಿ, ಪಕ್ಕದ ಬೇಲೂರು ತಾಲ್ಲೂಕಿನ ಅನುಘಟ್ಟ ಹಾಗೂ ನಾರ್ವೆ ಗ್ರಾಮಗಳ ಸಹಕಾರ ಸಂಘಗಳಲ್ಲಿ ರೈತರಿಗೆ ನಕಲಿ ಪೊಟ್ಯಾಶ್ ರಸಗೊಬ್ಬರ ಮಾರಾಟ ಮಾಡಿರುವ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ತಾಲ್ಲೂಕಿನಲ್ಲಿ ನಾಲ್ವರು ಹಾಗೂ ಬೇಲೂರು ತಾಲ್ಲೂಕಿನಲ್ಲಿ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.