ನಕಾರಾತ್ಮಕ ಭಾವನೆ ತ್ಯಜಿಸಿ: ಪ್ರತಿಪಕ್ಷಗಳಿಗೆ ಪ್ರಧಾನಿ ಆಗ್ರಹ

7

ನಕಾರಾತ್ಮಕ ಭಾವನೆ ತ್ಯಜಿಸಿ: ಪ್ರತಿಪಕ್ಷಗಳಿಗೆ ಪ್ರಧಾನಿ ಆಗ್ರಹ

Published:
Updated:

ನವದೆಹಲಿ (ಪಿಟಿಐ): ದೂರಗಾಮೀ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸಹಕರಿಸುವಲ್ಲಿ  ಮತ್ತು ಪ್ರತಿಕೂಲ ರಾಜಕೀಯ ನಿಲುವುಗಳಿಗೆ ಸಂಬಂಧಿಸಿದಂತೆ ~ಸಮತೋಲನ~ ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರ ಸಂಸದೀಯ ಪಕ್ಷಗಳನ್ನು ಒತ್ತಾಯಿಸಿದರು.ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ  ಅವರು ಆಶಾಭಾವನೆ ಮತ್ತು ನಿರಾಶಾಭಾವನೆ ಎರಡಕ್ಕೂ ~ಸಾಂಕ್ರಾಮಿಕ~ ಸ್ವಭಾವ ಇರುವ ಕಾರಣ ~ನಕಾರಾತ್ಮಕ~ ಭಾವನೆಗಳನ್ನು ತ್ಯಜಿಸುವಂತೆಯೂ ಅವರು ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಯೋಜನಾ ಆಯೋಗದ ಸದಸ್ಯರು ಪಾಲ್ಗೊಂಡಿದ್ದ ಸಭೆಯನ್ನು 12ನೇ ಪಂಚವಾರ್ಷಿಕ ಯೋಜನೆಯ ಬಗ್ಗೆ ಚರ್ಚಿಸಲು ಕರೆಯಲಾಗಿತ್ತು.ದೀರ್ಘಕಾಲೀನ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿಗೆ ಅನುಕೂಲವಾಗುವಂತೆ ವರ್ತಿಸಿದರೆ ಮಾತ್ರ ಚುನಾಯಿತ ಸರ್ಕಾರಗಳು ಉತ್ತಮ ಫಲಿತಾಂಸ ನೀಡಲು ಸಾಧ್ಯ ಎಂದು ಪ್ರಧಾನಿ ಹೇಳಿದರು.ಅಂದರೆ ಸಂಸದೀಯ ಪಕ್ಷಗಳು ಹಲವು ವಿಷಯಗಳಿಗೆ ಸಂಬಂಧಿಸಿದ ತಮ್ಮ ಪ್ರತಿಕೂಲ ರಾಜಕೀಯ ನಿಲುವುಗಳು ಮತ್ತು ದೀರ್ಘಗಾಮೀ ರಾಜಕೀಯ ಕಾರ್ಯಕ್ರಮಗಳಲ್ಲಿ ಸಹಕರಿಸುವಲ್ಲಿ ಸಮತೋಲನ ಸಾಧಿಸುವ ಕಷ್ಟವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry