ನಕ್ಷೆ ಮಂಜೂರಾತಿ ಇಲ್ಲದೇ ಕಟ್ಟಡ ನಿರ್ಮಾಣ:ತಲೆಕೆಡಿಸಿಕೊಳ್ಳದ ಬಿಬಿಎಂಪಿ

7

ನಕ್ಷೆ ಮಂಜೂರಾತಿ ಇಲ್ಲದೇ ಕಟ್ಟಡ ನಿರ್ಮಾಣ:ತಲೆಕೆಡಿಸಿಕೊಳ್ಳದ ಬಿಬಿಎಂಪಿ

Published:
Updated:
ನಕ್ಷೆ ಮಂಜೂರಾತಿ ಇಲ್ಲದೇ ಕಟ್ಟಡ ನಿರ್ಮಾಣ:ತಲೆಕೆಡಿಸಿಕೊಳ್ಳದ ಬಿಬಿಎಂಪಿ

ಬೆಂಗಳೂರು: ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಗರದಲ್ಲಿ ತಲೆಯೆತ್ತಿರುವ ಕಟ್ಟಡಗಳ ಸಂಖ್ಯೆಗೇನೂ ಕೊರತೆಯಿಲ್ಲ. ಆದರೆ, ನಕ್ಷೆ ಮಂಜೂರಾತಿ ಪಡೆಯದೆ ಕನ್ವೆನ್ಷನ್ ಸೆಂಟರ್‌ಗಳು ಕೂಡ ನಿರ್ಮಾಣಗೊಂಡರೂ ಪಾಲಿಕೆ ಆ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ!ಗಿರಿನಗರದ ವಿಶ್ವಭಾರತಿ ಹೌಸಿಂಗ್ ಕಾಂಪ್ಲೆಕ್ಸ್ ಲೇಔಟ್‌ನ 4ನೇ ಫೇಸ್‌ನ ಅವಧಾನಿ ಕನ್ವೆನ್ಷನ್ ಸೆಂಟರ್‌ನ ಮಂಜೂರಾದ ನಕ್ಷೆಯ ದೃಢೀಕೃತ ಪ್ರತಿ ನೀಡುವಂತೆ ಸಾರ್ವಜನಿಕರೊಬ್ಬರು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಬಯಸಿದಾಗ ಬಿಬಿಎಂಪಿಯು ಅಚ್ಚರಿಯ ಉತ್ತರ ನೀಡಿದೆ.`ಕಚೇರಿಯಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಈ ಸ್ವತ್ತಿಗೆ ಕಚೇರಿಯಿಂದ ನಕ್ಷೆ ಮಂಜೂರಾತಿ ನೀಡಿರುವುದು ಕಂಡು ಬಂದಿರುವುದಿಲ್ಲ ಎಂಬ ಅಂಶವನ್ನು ಈ ಮೂಲಕ ತಿಳಿಯಪಡಿಸಲಾಗಿದೆ~ ಎಂದು ಪಾಲಿಕೆಯ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರು (ದಕ್ಷಿಣ) ಉತ್ತರ ನೀಡಿದ್ದಾರೆ.ಮಾಹಿತಿ ಕೋರಿದವರಿಗೇ ಮಾಹಿತಿ ಕೇಳಿದ ಪಾಲಿಕೆ!

ಇನ್ನು, ಗಿರಿನಗರ ಬಳಿಯ ವಿವೇಕಾನಂದ ಪಾರ್ಕ್‌ನ ಮಾರುತಿ ಲೂಥರ್ ಪಬ್ಲಿಕ್ ಸ್ಕೂಲ್ ಎದುರಿನ ಕೌಂಡಿನ್ಯ ಕನ್ವೆನ್ಷನ್ ಹಾಲ್‌ನ ಮಂಜೂರಾದ ನಕ್ಷೆಯ ದೃಢೀಕೃತ ಪ್ರತಿ ನೀಡುವಂತೆ ಕೋರಿದ್ದಕ್ಕೂ ಪಾಲಿಕೆ ಬಳಿ ನಿರ್ದಿಷ್ಟ ಉತ್ತರವೇ ಇಲ್ಲ.ಬದಲಿಗೆ, ಈ ಸ್ವತ್ತಿಗೆ ಸಂಬಂಧಿಸಿದ ಕಟ್ಟಡದ ಮಂಜೂರಾತಿ ಪಡೆದಿರುವ ಮೂಲ ಮಾಲೀಕರ ಹೆಸರು, ಸ್ವತ್ತಿನ ನಿಖರವಾದ ವಿಳಾಸ, ಕಟ್ಟಡ ಮಂಜೂರಾತಿಗೆ ನೀಡಿರುವ ಎಲ್.ಪಿ. ಸಂಖ್ಯೆಯನ್ನು ನೀಡಿದಲ್ಲಿ ಮತ್ತೊಮ್ಮೆ ಪರಿಶೀಲಿಸಿ ಮಾಹಿತಿ ಒದಗಿಸಲಾಗುವುದು ಎಂದು ಇದೇ ಅಧಿಕಾರಿ ಮಾಹಿತಿ ಬಯಸಿದವರಿಂದಲೇ ಮಾಹಿತಿ ಕೇಳಿದ್ದಾರೆ.ಪಾಲಿಕೆ ಮೂಲಗಳ ಪ್ರಕಾರ, ಇವೆರಡೂ ಕಟ್ಟಡಗಳನ್ನು ನಕ್ಷೆ ಮಂಜೂರಾತಿ ಪಡೆಯದೆಯೇ ಅನಧಿಕೃತವಾಗಿ ನಿರ್ಮಿಸಲಾಗಿದೆ. ಹೀಗೆ, ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲು ಪಾಲಿಕೆ ಅಧಿಕಾರಿಗಳು ಕೂಡ ಸಹಕರಿಸಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.ಈ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದುದರಿಂದ ಈ ಪ್ರದೇಶದ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲು ಬಿಡಿಎ ಅಥವಾ ಪಾಲಿಕೆಗೆ ಅವಕಾಶವಿರಲಿಲ್ಲ. ಆದರೆ, ಎರಡು ತಿಂಗಳ ಹಿಂದೆಯಷ್ಟೇ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಅದಕ್ಕೂ ಆರು ತಿಂಗಳ ಮುನ್ನವೇ ಈ ಎರಡೂ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ದೂರಲಾಗಿದೆ.ನಕ್ಷೆ ಮಂಜೂರಾತಿ ಪಡೆಯದೇ ಕಟ್ಟಡಗಳನ್ನು ನಿರ್ಮಿಸಿರುವುದರಿಂದಅವುಗಳನ್ನು ಅನಧಿಕೃತ ಎಂದು ಪರಿಗಣಿಸಬೇಕಾಗುತ್ತದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಹೌಸಿಂಗ್ ಸೊಸೈಟಿಯು ಕಟ್ಟಡ ಮಾಲೀಕರಿಂದ ಶುಲ್ಕ ಸಂಗ್ರಹಿಸಿ ಪಾವತಿಸಿದ ನಂತರವಷ್ಟೇ ಆ ಜಾಗವನ್ನು ಬಿಡಿಎ ಪಾಲಿಕೆಗೆ ಹಸ್ತಾಂತರ ಮಾಡಲಿದೆ. ಆದರೆ, ಶುಲ್ಕ ಪಾವತಿಸುವ ಮುನ್ನವೇ ಈ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.ಬಿಡಿಎ ಅಧಿಕೃತವಾಗಿ ಜಾಗವನ್ನು ಹಸ್ತಾಂತರಿಸಿದ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವಷ್ಟೇ ಪಾಲಿಕೆಯು ಈ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲು ಅವಕಾಶ ಲಭ್ಯವಾಗಲಿದೆ.ಅಕ್ರಮ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿ

ಅಕ್ರಮ ಕಟ್ಟಡಗಳ ನಿರ್ಮಾಣದ ಬಗ್ಗೆ ಸಾರ್ವಜನಿಕರು ಚಿತ್ರಗಳ ಸಹಿತ ವೆಬ್‌ಸೈಟ್ ವಿಳಾಸ: bangalore@prajavani.co.in  ಗೆ ಮಾಹಿತಿ ಸಲ್ಲಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry