ಸೋಮವಾರ, ಜೂನ್ 21, 2021
30 °C

ನಕ್ಸಲರಿಂದ ಇಬ್ಬರು ವಿದೇಶಿ ಪ್ರಜೆಗಳ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಐಎಎನ್‌ಎಸ್): ಒಡಿಸ್ಸಾ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ವಿದೇಶಿ ಪ್ರವಾಸಿಗರನ್ನು ಮಾವೋವಾದಿಗಳು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದಾರೆ.ಘಟನೆಯು ಕಂದಮಾಲ್ ಜಿಲ್ಲೆಯಲ್ಲಿ ಶನಿವಾರ ನಡೆದಿರುವುದಾಗಿ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.ಇಬ್ಬರು ವಿದೇಶಿಯರೂ ಇಟಲಿ ದೇಶಕ್ಕೆ ಸೇರಿದವರಾಗಿದ್ದು, ಇಬ್ಬರೂ ಪುರುಷರಾಗಿದ್ದಾರೆ. ಕಾಡಿನಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರ ಫೋಟೋ ತೆಗೆಯುತ್ತಿದ್ದಾಗ ನಕ್ಸಲ್ ಗುಂಪು ಇವರನ್ನು ಅಪಹರಿಸಿದೆ ಎಂದು ಸ್ಥಳಿಯ ಸುದ್ದಿವಾಹಿನಿ ವರದಿ ಮಾಡಿದೆ.ಭಾನುವಾರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪೊಲೀಸರು ಹಾಗೂ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿ ಘಟನೆ ಬಗೆಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.ಮಾವೋವಾದಿ ಮುಖಂಡನೊಬ್ಬ ಸ್ಥಳಿಯ ವರದಿಗಾರನೊಬ್ಬನಿಗೆ ಭಾನುವಾರ ಬೆಳಿಗ್ಗೆ ಧ್ವನಿಮುದ್ರಿತ ಸಂದೇಶವನ್ನು ಕಳುಹಿಸಿದ್ದು, ಇಬ್ಬರು ಇಟಲಿ ಪ್ರವಾಸಿಗರನ್ನು ಬಿಡುಗಡೆ ಮಾಡಬೇಕಾದರೆ ತಕ್ಷಣವೇ ನಕ್ಸಲರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಅಲ್ಲದೆ ಕಳೆದ ವರ್ಷ ಸರ್ಕಾರ ನೀಡಿರುವ ವಾಗ್ದಾನದಂತೆ ತಮ್ಮ 13 ಬೇಡಿಕೆಗಳನ್ನು ಈಡೇರಿಸಬೇಕು ಮಾತ್ರವಲ್ಲ ಮಾತುಕತೆಗೆ ಮುಂದಾಗಬೇಕೆಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.