ಬುಧವಾರ, ನವೆಂಬರ್ 20, 2019
20 °C

`ನಕ್ಸಲರ ಮೇಲೆ ಯೋಧರ ಕಣ್ಗಾವಲು'

Published:
Updated:

ಮಡಿಕೇರಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅರೆಸೇನಾ ಪಡೆಯ ಸಿಬ್ಬಂದಿ ನಗರದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ಪಥಸಂಚಲ ನಡೆಸಿ, ಜನರಲ್ಲಿ ಅಭಯ ಮೂಡಿಸಿದರು.ಗದ್ದುಗೆಯಿಂದ ಆರಂಭವಾದ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ತೆರಳಿ ಗಾಂಧಿ ಮೈದಾನದಲ್ಲಿ ಅಂತ್ಯಗೊಂಡಿತು.ಡಿವೈಎಸ್‌ಪಿ ರಾಜೀವ್ ಮಾಂಗ್ ಮಾತನಾಡಿ, ಅರೆಸೇನಾ ಪಡೆಯಲ್ಲಿ 190 ಯೋಧರ ಎರಡು ತಂಡಗಳಿವೆ. ಒಂದು ತಂಡವನ್ನು ನಕ್ಸಲರು ಓಡಾಡಿರುವ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಇತ್ತೀಚೆಗೆ ಕೊಡಗಿನ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರೆಸೇನಾ ಪಡೆಯ ಯೋಧರ ಕಣ್ಗಾವಲು ಇಡಲಾಗಿದೆ ಎಂದರು.ಯೋಧರ ಮತ್ತೊಂದು ತಂಡವನ್ನು ಸೂಕ್ಷ್ಮ ಮತಗಟ್ಟೆಯ ಕಾರ್ಯಕ್ಕೆ ನಿಯೋಜಿಸ ಲಾಗುವುದು. ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.ಈಗಾಗಲೇ ಯೋಧರ ಪಡೆಯು ನಕ್ಸಲರು ಕಂಡುಬಂದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಅನುವು ಮಾಡಿ ಕೊಡಲಾಗುವುದು ಎಂದು ಹೇಳಿದರು.ಪೊಲೀಸ್ ವೀಕ್ಷಕರ ಭೇಟಿ

ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಪೊಲೀಸ್ ವೀಕ್ಷಕರಾಗಿ ಅತುಲ್ ಕರ್ವಾಲ್ ನಿಯೋಜನೆಗೊಂಡಿದ್ದಾರೆ.ಇತ್ತೀಚೆಗೆ ಅವರು ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಅವರಿಂದ ಚುನಾವಣಾ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಯಾವುದೇ ರೀತಿಯ ದೂರು, ಮಾಹಿತಿಗೆ ಸಂಬಂಧಿಸಿದಂತೆ ಮೊ: 94487 95583 ಈ ಸಂಖ್ಯೆಯ ಮೂಲಕ  ಕರೆ ಮಾಡಬಹುದು. ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಂಜೆ 5ರಿಂದ 6 ಗಂಟೆ ಸಮಯದಲ್ಲಿ ಖುದ್ದಾಗಿ ಭೇಟಿ ಮಾಡಿ ದೂರು/ಮಾಹಿತಿ ನೀಡಬಹುದಾಗಿದೆ.ಚುನಾವಣಾ ವೀಕ್ಷಕರ ಸಂಪರ್ಕಾಧಿ ಕಾರಿಯಾಗಿ ಮಡಿಕೇರಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವೆಂಕಟೇಗೌಡ (ಮೊ: 94808 04945) ಕಾರ್ಯನಿರ್ವ ಹಿಸಲಿದ್ದಾರೆ ಎಂದು  ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.ವೆಚ್ಚ ವೀಕ್ಷಕರ ನೇಮಕ

ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಸಹಾಯಕ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ.ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಹಾಯಕ ವೆಚ್ಚ ವೀಕ್ಷಕರಾಗಿ ಮೈಸೂರಿನ ಕೇಂದ್ರ ಅಬಕಾರಿ ಮತ್ತು ಸುಂಕ ಆಯುಕ್ತರ ಕಚೇರಿಯ ವ್ಯವಸ್ಥಾಪಕ ಹಿತೇಶ್‌ಕುಮಾರ್ (ಮೊ: 94480 65155), ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಹಾಯಕ ವೆಚ್ಚ ವೀಕ್ಷಕರಾಗಿ ಮೈಸೂರಿನ ಕೇಂದ್ರ ಅಬಕಾರಿ ಮತ್ತು ಸುಂಕ ಆಯುಕ್ತರ ಕಚೇರಿಯ ವ್ಯವಸ್ಥಾಪಕ ರಾಜೀವ್ ಲೋಚನ್ (ಮೊ: 94818 14832) ಅವರನ್ನು ನೇಮಕ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)