ಶನಿವಾರ, ಮೇ 21, 2022
22 °C

ನಕ್ಸಲೀಯರಿಂದ ರೈಲ್ವೆ ಸ್ಟೇಷನ್ ಮಾಸ್ಟರ್ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ (ಪಿಟಿಐ): ಬಿಹಾರದ ಜಮುವಾಯ್ ಜಿಲ್ಲೆಯ ಘೋರ್‌ಪರಣ್ ರೈಲು ನಿಲ್ದಾಣದಿಂದ ರೈಲ್ವೆ ಸ್ಟೇಷನ್ ಮಾಸ್ಟರ್ ಹಾಗೂ ರೈಲ್ವೆ ಕೂಲಿ ಕಾರ್ಮಿಕರೊಬ್ಬರನ್ನು ನಕ್ಸಲೀಯರ ತಂಡ ಬುಧವಾರ ಅಪಹರಿಸಿದೆ ಎಂದು ರೈಲ್ವೆ ಪೊಲೀಸ್ ಮುಖ್ಯಸ್ಥ ಅಮಿತಾಭ್ ದಾಸ್ ತಿಳಿಸಿದ್ದಾರೆ.ಅಪಹರಣಕ್ಕೊಳಗಾಗಿರುವ ಸ್ಟೇಷನ್ ಮಾಸ್ಟರ್ ವಿಜಯ್‌ಕುಮಾರ್ ಮತ್ತು ಕಾರ್ಮಿಕ ದುಖನ್ ಮಹತೊ ಅವರನ್ನು ಪತ್ತೆಹಚ್ಚಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ರೈಲ್ವೆ ಸಚಿವ ಮುಕುಲ್ ರಾಯ್ ತಿಳಿಸಿದರು.   ಅಪಹರಣ ಕುರಿತಂತೆ ಬಿಹಾರ ಗೃಹ ಕಾರ್ಯದರ್ಶಿ, ರೈಲ್ವೆ ಸಂರಕ್ಷಣಾ ಪಡೆ ಮುಖ್ಯಸ್ಥರು ಹಾಗೂ ಬಿಹಾರದ ಪೊಲೀಸ್ ಮಹಾ ನಿರ್ದೇಶಕರೊಂದಿಗೆ ಮತುಕತೆ ನಡೆಸಲಾಗಿದೆ ಎಂದೂ ರಾಯ್ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.