ಗುರುವಾರ , ಮೇ 6, 2021
33 °C

ನಕ್ಸಲೀಯರ ಈ ಕೃತ್ಯ ಸರಿಯೇ?

- ಪ್ರೊ. ಶಿವರಾಮಯ್ಯ,ಬೆಂಗಳೂರು Updated:

ಅಕ್ಷರ ಗಾತ್ರ : | |

ಹಿಂದೆ ಬುಡಕಟ್ಟು ಜನ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ತಮ್ಮ ಜೀವನೋಪಾಯ ಸಾಗಿಸುತ್ತಿದ್ದರು. ದುರದೃಷ್ಟಕ್ಕೆ ಅದೇ ಕಾಡುಗಳಲ್ಲಿ ಗ್ರ್ಯಾನೈಟ್ ಕಲ್ಲು, ಬಾಕ್ಸೈಟ್ ಅದಿರು ಮೊದಲುಗೊಂಡು ಅನೇಕ ಬಗೆಯ ಖನಿಜಗಳಿದ್ದು, ಅವು ಆಧುನಿಕ ಕೈಗಾರಿಕೆ ಹಾಗೂ ಯುದ್ಧೋಪಕರಣಗಳ ತಯಾರಿಕೆಗೆ ಅಗತ್ಯವಾಗಿ ಬೇಕಾದವು ಎಂದು ಗೊತ್ತಾಗಿ ಕಂಡು ಕೇಳರಿಯದ ಲಾಭ ಸಿಗುವಂತಾದಾಗ ಕಾರ್ಪೊರೇಟ್ ಕಂಪೆನಿಗಳು ಅಲ್ಲಿ ಮುಗಿಬಿದ್ದವು.ಸರ್ಕಾರಗಳು ದಲ್ಲಾಳಿ ಕಾಸಿಗಾಗಿ ಪಕ್ಷಭೇದ ಇಲ್ಲದೆ ಅವುಗಳನ್ನು ಸ್ವಾಗತಿಸಿದವು. ಜನರನ್ನು ಬಲವಂತ ಎತ್ತಂಗಡಿ ಮಾಡಲಾಯಿತು. ಆದರೆ ಸಾಮಾಜಿಕ ನ್ಯಾಯಕ್ಕಾಗಿ ಅವರ ನಡುವೆ ಕೆಲವು ಪ್ರತಿಭಟನೆಕಾರರು ಹುಟ್ಟಿಕೊಂಡರು. ಹಿಂಸೆಗಿಳಿದ ಅವರನ್ನು ಪ್ರಭುತ್ವ ನಕ್ಸಲರೆಂದು ಹೆಸರಿಸಿ ದಮನಕ್ಕೆ ಕೈ ಹಾಕಿತು. ಹೀಗೆ ಹಿಂಸೆಗೆ ಹಿಂಸೆ ಮರಿ ಹಾಕುತ್ತಾ ಕೆಲ ರಾಜ್ಯಗಳಲ್ಲಿ ರಕ್ತ ಚೆಲ್ಲುತ್ತಿದೆ.ಇತ್ತೀಚೆಗೆ ಬುಡಕಟ್ಟು ಜನರೇ ಅಧಿಕವಾಗಿರುವ ಛತ್ತೀಸಗಡದಲ್ಲಿ ನಕ್ಸಲರಿಂದ ಪ್ರತಿ ಹಿಂಸೆ, ರಕ್ತಪಾತ ಹೆಚ್ಚಾಗುತ್ತಿದ್ದು ಜನರ ಅನುಕಂಪಕ್ಕೆ ಅವರು ಎರವಾಗುತ್ತಿದ್ದಾರೆ. ಇದೇ ಅವಕಾಶಕ್ಕಾಗಿ ಕಾಯುತ್ತಿದೆಯೋ ಎಂಬಂತೆ, ಸರ್ಕಾರ ನಕ್ಸಲರನ್ನು ಭಯೋತ್ಪಾದಕರೊಂದಿಗೆ ಸಮೀಕರಿಸುತ್ತಿದೆ.ಸಾಮಾಜಿಕ ನ್ಯಾಯಕ್ಕಾಗಿ ದನಿ ಎತ್ತುವವರಿಗೆಲ್ಲ ಇದು ಅಪಾಯಕಾರಿ ಸಂದೇಶ. ಈ ಅಪಾಯವನ್ನು ಮನಗಂಡು ನಕ್ಸಲ್ ಹೋರಾಟಗಾರರು ಹಿಂಸೆಗೆ ವಿದಾಯ ಹೇಳಿ ಜನರ ನಡುವೆ ಬಂದು ತಮ್ಮ ದನಿಯನ್ನು ಎತ್ತುವುದು ಲೇಸು. ಪ್ರಾಣ ಕೊಟ್ಟು, ಪ್ರಾಣ ತೆಗೆಯುವುದರಿಂದ ಯಾರ ಹಿತಸಾಧನೆಯೂ ಇಲ್ಲ. ನಕ್ಸಲರು ಇದನ್ನು ಬೇಗ ಮನವರಿಕೆ ಮಾಡಿಕೊಳ್ಳುವುದು ಒಳ್ಳೆಯದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.