ಮಂಗಳವಾರ, ಜೂನ್ 22, 2021
28 °C

ನಕ್ಸಲೀಯರ ಜತೆ ಗುಂಡಿನ ಚಕಮಕಿ: ಪೊಲೀಸ್‌ಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ ಗ್ರಾಮದ ಕೊಲ್ಲಿ ಅರಣ್ಯ ಪ್ರದೇಶದಲ್ಲಿ ಶನಿವಾರ ಸಂಜೆ ನಕ್ಸಲರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಕಾನ್‌ಸ್ಟೇಬಲ್ ಸದಾಶಿವ ಚೌಧರಿ ಎಂಬುವವರು ಗಾಯಗೊಂಡಿದ್ದಾರೆ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ನಕ್ಸಲರ ಚಲನವಲನದ ಮಾಹಿತಿ ಮೇರೆಗೆ ನಕ್ಸಲ್ ನಿಗ್ರಹ ಪಡೆ, ಜಿಲ್ಲೆಯ ಪೊಲೀಸರು ನಡ, ಮಂಜೊಟ್ಟಿ, ಬಂಗಾಡಿ, ಕೊಲ್ಲಿ ಹಾಗೂ ಮಲವಂತಿಗೆ ಗ್ರಾಮಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.ಕೊಲ್ಲಿ ಅರಣ್ಯ ಪ್ರದೇಶದಲ್ಲಿ 15ಕ್ಕೂ ಅಧಿಕ ಮಂದಿಯ ನಕ್ಸಲ್ ತಂಡ ಎದುರಾಯಿತು. ನಕ್ಸಲರು ಹಾರಿಸಿದ ಗುಂಡು ಎಎನ್‌ಎಫ್ ಸಿಬ್ಬಂದಿ ಕಾಲಿಗೆ ಹೊಕ್ಕಿತು. ನಕ್ಸಲ್ ತಂಡ ಕಾಡಿನಲ್ಲಿ ಪರಾರಿಯಾಯಿತು ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ `ಪ್ರಜಾವಾಣಿ~ಗೆ  ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.