ನಕ್ಸಲೀಯರ ದಾಳಿ: 10 ಭದ್ರತಾ ಸಿಬ್ಬಂದಿ ಸಾವು

ಮಂಗಳವಾರ, ಜೂಲೈ 23, 2019
25 °C

ನಕ್ಸಲೀಯರ ದಾಳಿ: 10 ಭದ್ರತಾ ಸಿಬ್ಬಂದಿ ಸಾವು

Published:
Updated:

ರಾಯಪುರ:  ಭದ್ರತಾ ಪಡೆಯ ನೆಲಬಾಂಬ್ ನಿರೋಧಕ ವಾಹನವನ್ನು ಪ್ರಬಲವಾಗಿ ಸ್ಫೋಟಿಸಿ, ಬಳಿಕ ಅದರ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ ನಕ್ಸಲೀಯರು, 10 ಸಿಬ್ಬಂದಿಯನ್ನು ಕೊಂದುಹಾಕಿದ ಘಟನೆ ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.ಸ್ಫೋಟದ ತೀವ್ರತೆಗೆ ವಾಹನವು ಸಾಕಷ್ಟು ಮೇಲಕ್ಕೆ ಎಗರಿ ಬಿದ್ದಿದ್ದು, 7 ವಿಶೇಷ ಪೊಲೀಸ್ ಅಧಿಕಾರಿಗಳು (ಎಸ್‌ಪಿಒ) ಹಾಗೂ ಮೂವರು ಪೊಲೀಸರು ಸ್ಥಳದಲ್ಲೇ ಮೃತರಾಗಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.`ಪೊಲೀಸ್ ಮುಖ್ಯ ಕೇಂದ್ರದಿಂದ ಕಟಿಕಲ್ಯಾಣ್ ಪ್ರದೇಶಕ್ಕೆ ಹೊರಟಿದ್ದ ವಾಹನ ಸೇತುವೆಯ ಮೇಲೆ ಬರುತ್ತಿದ್ದಂತೆಯೇ ನಕ್ಸಲೀಯರು ಈ ಆಕ್ರಮಣ ನಡೆಸಿದ್ದಾರೆ. ಪೊಲೀಸರು ಪ್ರತಿ ದಾಳಿ ನಡೆಸಿದಾಗ ಪರಾರಿಯಾಗಿದ್ದಾರೆ~ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ನಕ್ಸಲೀಯರ `ಜನಪಿತೂರಿ~ ವಾರಾಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪ್ರತಿ ವರ್ಷದ ಜೂನ್ ಎರಡನೇ ವಾರ ನಡೆಯುವ ಈ ಆಚರಣೆಯ ವೇಳೆ ಅವರು ಸಂಭ್ರಮಾಚರಣೆಯ ಜೊತೆಗೆ ಇಂತಹ ದಾಳಿಗಳನ್ನೂ ನಡೆಸುತ್ತಾರೆ.ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಬಂಡುಕೋರರು 76 ಸಿಆರ್‌ಪಿಎಫ್ ಯೋಧರನ್ನು ಕೊಂದು ಹಾಕಿದ್ದರು.ರಾಜ್ಯದಲ್ಲಿ ಈವರೆಗೆ ಪ್ರಸಕ್ತ ವರ್ಷ 30 ಪೊಲೀಸ್ ಸಿಬ್ಬಂದಿ ನಕ್ಸಲೀಯರಿಗೆ ಬಲಿಯಾಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry