ಸೋಮವಾರ, ಅಕ್ಟೋಬರ್ 21, 2019
21 °C

ನಕ್ಸಲ್ ಆರೋಪಕ್ಕೆ ಸಾಕ್ಷ್ಯಾಧಾರ ಕೊರತೆ: ಕೋರ್ಟ್ ಛೀಮಾರಿ

Published:
Updated:

ಮುಂಬೈ: ಮಾನವ ಹಕ್ಕು ಕಾರ್ಯಕರ್ತ ಅರುಣ್ ಫೆರೇರಾ ಅವರು ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಒದಗಿಸಲು ವಿಫಲರಾದ ಪೊಲೀಸರಿಗೆ ಛೀಮಾರಿ ಹಾಕಿರುವ ಮುಂಬೈ ಹೈಕೋರ್ಟ್, ಅರುಣ್ ಅವರಿಗೆ ಜಾಮೀನು ನೀಡಿದೆ.ಈ ಹಿನ್ನೆಲೆಯಲ್ಲಿ ನಾಗಪುರ ಕೇಂದ್ರ ಕಾರಾಗೃಹದಿಂದ ಬುಧವಾರ ಹೊರಬಂದ ಅರುಣ್, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. `ನಾನು ಬಳಲಿದ್ದು, ಮನೆಗೆ ಹೋಗಲು ಬಯಸುತ್ತೇನೆ~ ಎಂದಷ್ಟೇ ಹೇಳಿದರು. 2007ರಿಂದಲೂ ಅವರು ಕಾರಾಗೃಹದಲ್ಲಿದ್ದರು.ಇದೇ ವೇಳೆ, ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಕಾರಣವಿಲ್ಲದೆ ತಮ್ಮನ್ನು ಬಂಧಿಸಿ ಮಾನಸಿಕ ಹಿಂಸೆ ನೀಡಿದ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅವರು ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

Post Comments (+)