ಶನಿವಾರ, ಮೇ 15, 2021
25 °C

ನಕ್ಸಲ್ ಒತ್ತೆಯಲ್ಲಿದ್ದ ಇಟಲಿ ಪ್ರಜೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಅಪರಹಣಕ್ಕೊಳಗಾಗಿದ್ದ ಇಟಲಿ ಪ್ರಜೆ ಪೌಲೊ ಬೊಸೊಸ್ಕೊ ಅವರನ್ನು ಗುರುವಾರ ನಕ್ಸಲರು ಬಿಡುಗಡೆ ಮಾಡಿದ್ದಾರೆ. 29 ದಿನಗಳ ಹಿಂದೆ ಕ್ಲೌಡಿಯೊ ಕೊಲಾಂಜೆಲೊ ಎಂಬ ಮತ್ತೊಬ್ಬ ಇಟಲಿ ಪ್ರಜೆಯನ್ನು ಬಿಡುಗಡೆ ಮಾಡಿದ್ದರು.

ಗಿರಿಜನರೇ ಹೆಚ್ಚಾಗಿರುವ ಒಡಿಶ್ಶಾದ ಕಂಧಮಲ್ ಜಿಲ್ಲೆಯ ಗಜಪತಿ ಹಾಗೂ ಗಂಜಾಂ ಪ್ರದೇಶದ ಮಧ್ಯಭಾಗದಲ್ಲಿ ಮಾವೋವಾದಿಗಳು ಬೊಸೊಸ್ಕೊ (54) ಅವರನ್ನು ತಮ್ಮ ಹಾಗೂ ಸರ್ಕಾರದ ಮಧ್ಯವರ್ತಿ, ಪತ್ರಕರ್ತ ದಂಡಪಾಣಿ ಮೊಹಂತಿ ಅವರಿಗೆ ಒಪ್ಪಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪುರಿ ಮೂಲದ ಇಟಲಿ ಪ್ರವಾಸೋಧ್ಯಮದಲ್ಲಿ ಕೆಲಸ ಮಾಡುವ ಬೊಸೊಸ್ಕೊ ಅವರನ್ನು 61 ವರ್ಷ ವಯಸ್ಸಿನ ಮತ್ತೊಬ್ಬ ಇಟಲಿ ಪ್ರವಾಸಿ ಕೊಲಾಂಜೆಲೊ ಅವರು ಚಾರಣಕ್ಕೆಂದು ಮಾರ್ಚ್ 14ರಂದು ಕಂಧಮಲ್ ಜಿಲ್ಲೆಯ ದಾರಿಂಗ್ಬೇಡಿ ಕಾಡಿನಿಂದ ಮಾವೋವಾದಿಗಳು ಅಪಹರಿಸಿದ್ದರು.

ಇಟಲಿ ಪ್ರಜೆಯ ಬಿಡುಗಡೆಗಾಗಿ  ಜೈಲಿನಲ್ಲಿರುವ ಶುಭಶ್ರೀ ಸೇರಿದಂತೆ ಏಳು ನಕ್ಸಲರನ್ನು ಬಿಡುಗಡೆ ಮಾಡಬೇಕೆಂಬ ಷರತ್ತು ವಿಧಿಸಿದ್ದರು. ಇದಕ್ಕೆ ಸಮ್ಮತಿಸಿದ ರಾಜ್ಯ ಸರ್ಕಾರ ಶುಭಶ್ರೀ ಸೇರಿದಂತೆ ಐವರನ್ನು ಬಿಡುಗಡೆ ಮಾಡಲು ಒಪ್ಪಿತು.

ಬಿಡುಗಡೆಗೊಂಡ ಇಟಲಿ ಪ್ರಜೆಯನ್ನು ಸಂಧಾನಕಾರ ಮೊಹಂತಿ ಹಾಗೂ ಬಿ.ಡಿ.ಶರ್ಮ ಅವರೊಂದಿಗೆ ಒಡಿಶ್ಶಾ ಸರ್ಕಾರದ ಪ್ರತಿನಿಧಿಗಳೊಂದಿಗೆ ರಾಜ್ಯದ ರಾಜಧಾನಿಗೆ ಕರೆತರಲಾಯಿತು. ~ನನಗೆ ಒಡಿಶ್ಶಾ ಎಂದರೆ ಬಲು ಇಷ್ಟ. ಈಗ ನಾನು ಸ್ವತಂತ್ರನಾಗಿದ್ದೇನೆ. ಸಾಕಷ್ಟು ಬಳಲಿದ್ದೇನೆ. ನನಗೆ ಕೆಲ ಕಾಲ ವಿಶ್ವಾಂತಿಯ ಅಗತ್ಯವಿದೆ~ ಎಂದು ಬೊಸೊಸ್ಕೊ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.