ಗುರುವಾರ , ಫೆಬ್ರವರಿ 25, 2021
29 °C

ನಕ್ಸಲ್ ದಾಳಿ: ಠಾಣಾಧಿಕಾರಿ ಸಹಿತ 6 ಪೊಲೀಸರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕ್ಸಲ್ ದಾಳಿ: ಠಾಣಾಧಿಕಾರಿ ಸಹಿತ 6 ಪೊಲೀಸರ ಹತ್ಯೆ

ರಾಯಪುರ (ಪಿಟಿಐ): ಒಬ್ಬ ಠಾಣಾಧಿಕಾರಿ ಮತ್ತು ಐವರು ಪೊಲೀಸ್ ಸಿಬ್ಬಂದಿ ಶುಕ್ರವಾರ ಛತ್ತೀಸ್ ಗಢದ ದಾಂತೆವಾಡ ಜಿಲ್ಲೆಯಲ್ಲಿ ಸಂಭವಿಸಿದ ನಕ್ಸಲೀಯ ದಾಳಿಯಲ್ಲಿ ಮೃತರಾಗಿದ್ದಾರೆ.ಕುವಾಕೊಂಡದ ಠಾಣಾಧಿಕಾರಿ ವಿವೇಕ ಶುಕ್ಲಾ  ನೇತೃತ್ವದ ಪಹರೆ ತಂಡ ಶ್ಯಾಮಗಿರಿ ಬೆಟ್ಟಗಳತ್ತ ಬರುತ್ತಿದ್ದಾಗ ಈ ದಾಳಿ ನಡೆಯಿತು. ಕುವಾಕೊಂಡ - ಬಚೇಲಿ ಸಮೀಪದ ರಸ್ತೆ ಕಾಮಗಾರಿಗೆ ರಕ್ಷಣೆ ಒದಗಿಸುವ ಸಲುವಾಗಿ ಅವರು ಹೊರಟಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.ಸುಮಾರು 10 ಸಿಬ್ಬಂದಿಯನ್ನು ಒಳಗೊಂಡ ಪಹರೆ ತಂಡವು ಮೋಟಾರು ವಾಹನಗಳಲ್ಲಿ ಬರುತ್ತಿದ್ದಾಗ ಸಶಸ್ತ್ರ ಬಂಡುಕೋರರು ಅವರತ್ತ ಗುಂಡಿನ ದಾಳಿ ನಡೆಸಿದರು. ಠಾಣಾಧಿಕಾರಿ ಶುಕ್ಲ ಮತ್ತು ಇತರ ಐವರು ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೃತರಾದರು ಎಂದು ಅವರು ನುಡಿದರು.ದಾಳಿಯ ಸುದ್ದಿ ಬರುತ್ತಿದ್ದಂತೆಯೇ ದಟ್ಟಾರಣ್ಯದೊಳಗಿರುವ ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ಧಾವಿಸಿದವು ಎಂದೂ ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.