ಮಂಗಳವಾರ, ಮೇ 11, 2021
26 °C

`ನಕ್ಸಲ್ ಪೀಡಿತ ರಾಜ್ಯ' ಘೋಷಣೆಗೆ ಸಿ.ಎಂ ಸಿದ್ದರಾಮಯ್ಯ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕವನ್ನು `ನಕ್ಸಲ್ ಪೀಡಿತ ರಾಜ್ಯ'ವೆಂದು ಘೋಷಿಸಿ ವಿಶೇಷ ಹಣಕಾಸಿನ ನೆರವು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ `ಆಂತರಿಕ ಭದ್ರತೆ'ಗೆ ಸಂಬಂಧಿಸಿದ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ  ಸಿದ್ದರಾಮಯ್ಯ, ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ ಕೊಡಬೇಕು. ನಕ್ಸಲ್ ಚಳವಳಿ ವ್ಯಾಪಕವಾಗಿ ತಲೆ ಎತ್ತದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಕ್ತ ನೆರವು ನೀಡಬೇಕೆಂದು ಮನವಿ ಮಾಡಿದರು.ನಕ್ಸಲರ ಚಟುವಟಿಕೆ ನಿಗ್ರಹಿಸುವ ಉದ್ದೇಶದಿಂದ ಕರ್ನಾಟಕವು ನೆರೆಯ ಕೇರಳ, ಆಂಧ್ರ ತಮಿಳುನಾಡು ಜತೆ ಮಾಹಿತಿಗಳ ವಿನಿಮಯ ಮಾಡಿಕೊಳ್ಳುತ್ತಿದೆ. ಮೈಸೂರು ಹಾಗೂ ಕೊಯಮತ್ತೂರಿನಲ್ಲಿ ಎರಡು ಸಭೆಗಳನ್ನು ನಡೆಸಲಾಗಿದೆ. ಮಾಹಿತಿ ವಿನಿಮಯಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು `ನೋಡಲ್ ಅಧಿಕಾರಿ'ಗಳೆಂದು ನೇಮಿಸಲಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಸಕ್ರಿಯವಾಗಿರುವ 30 ನಕ್ಸಲರನ್ನು ಗುರುತಿಸಲಾಗಿದ್ದು, ಅವರ ಹುಡಕಾಟ ನಡೆಯುತ್ತಿದೆ. ತುಂಗಾ, ಕರಾವಳಿ, ವಾರಾಹಿ ಮತ್ತು ನೇತ್ರಾವತಿ ಎಂಬ ನಾಲ್ಕು ದಳಗಳು ನಕ್ಸಲರ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ನಕ್ಸಲ್ ವಿರೋಧಿ ಪಡೆಗಳು ರಾಜ್ಯದಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ನಕ್ಸಲರ ಕ್ಯಾಂಪುಗಳನ್ನು ನಾಶಪಡಿಸಿವೆ. ಅನೇಕ ಸಲ ನಕ್ಸಲರ ಜತೆ ನಡೆದಿರುವ `ಗುಂಡಿನ ಕಾಳಗ'ದಲ್ಲಿ ನಮ್ಮ ಪೊಲೀಸರು ಸಫಲರಾಗಿದ್ದಾರೆಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.ನಕ್ಸಲ್ ಪ್ರದೇಶಗಳಲ್ಲಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಿದೆ. ಪೊಲೀಸರಿಗೆ ಶರಣಾಗುವ ನಕ್ಸಲರಿಗೆ `ಪುನರ್ವಸತಿ ಪ್ಯಾಕೇಜ್'ಗಳನ್ನು ಪ್ರಕಟಿಸಲಾಗಿದೆ. ಇದುವರೆಗೆ ಐವರು ನಕ್ಸಲರು ಶರಣಾಗಿದ್ದಾರೆ. ಜಿಲ್ಲಾ ಆಡಳಿತ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.