ಬುಧವಾರ, ಏಪ್ರಿಲ್ 21, 2021
30 °C

ನಕ್ಸಲ್ ಪ್ಯಾಕೇಜ್ ಸದ್ಬಳಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು  ಬೇರೆ ಪ್ರದೇಶದಲ್ಲಿ ಕೈಗೊಳ್ಳುತ್ತಿರುವುದನ್ನು ವಿರೋ ಧಿಸಿ ನಕ್ಸಲ್ ಬಾಧಿತ ಪ್ರದೇಶ ವ್ಯಾಪ್ತಿಯ ನಿವಾಸಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಪ್ರತಿ ತಾಲ್ಲೂಕಿಗೆ 4.72 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಹಣ ನಕ್ಸಲ್ ಪೀಡಿತ ಪ್ರದೇಶಗಳಿಗೆ ಬಳಕೆಯಾಗದೆ ಕೇವಲ ರಾಜಕೀಯ ಪ್ರಭಾವ ಇರುವ ಪ್ರದೇಶಗಳಿಗೆ ಮಾತ್ರ ಅನು ಮೋದನೆಯಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.`ಪಟ್ಟಿ ಮಾಡಿರುವ ನಕ್ಸಲ್ ಬಾಧಿತ ಪ್ರದೇಶಗಳಿಗೆ ಹಣ ಕೂಡಲೇ ಬಳಕೆಯಾಗಲಿ, ನಕ್ಸಲ್ ಪ್ಯಾಕೇಜ್ ಹಣದ ಸದ್ಬಳಕೆಗೆ ಒತ್ತಾಯಿಸೋಣ, ನಕ್ಸಲ್ ಪ್ಯಾಕೇಜ್ ಹಣ ದುರುಪಯೋಗಕ್ಕೆ ಹೊರಟಿರುವ ರಾಜಕೀಯ ಪಕ್ಷಗಳನ್ನು ವಿರೋಧಿಸೋಣ~ ಎಂಬ ಭಿತ್ತಿ ಪ್ರತ್ರಗಳನ್ನು ಪ್ರತಿಭಟನಾಕಾರರು ಪ್ರದರ್ಶಿ ಸಿದರು.ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸೀತಾ, ಮುಜೇಖಾನ್, ನೆಲ್ಲಿಕೋಟ, ಕಾರ್ಲೆ, ಕವನಹಳ್ಳ ಪ್ರದೇಶಗಳ ರಸ್ತೆ ಅಭಿವೃದ್ಧಿಪಡಿಸಲು ಪೊಲೀಸ್ ಇಲಾಖೆ ವರದಿ ನೀಡಿದ್ದರೂ ಅದನ್ನು ಪರಿಗಣಿಸದೆ ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ.  ಕಳೆದ 12 ವರ್ಷಗಳಿಂದ ಮೂಲಸೌಲಭ್ಯಗಳಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದು, ರಸ್ತೆ ಅಭಿವೃದ್ಧಿ ಅಗತ್ಯವಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.ಈ ಹಿಂದೆ ಬಿಡುಗಡೆಯಾದ ಅಲ್ಪ ಮೊತ್ತದ ಹಣದಲ್ಲಿ 1.72 ಕಿ.ಮೀ. ವರೆಗೆ ಮಾಡಿರುವ ಕಾಮಗಾರಿ ಕಳಪೆಯಿಂದ ಕೂಡಿದೆ. ಕಾಮಗಾರಿ ನಡೆಸಲು ಬಿಡುಗಡೆಗೊಳಿಸಿರುವ ಪಟ್ಟಿ ಅವೈಜ್ಞಾನಿಕ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ತಿಳಿಸಿದ್ದಾರೆ.ಸಿದ್ಧಪಡಿಸಿರುವ ಪಟ್ಟಿ ವಾಪಸ್ ಪಡೆದು, ಅಗತ್ಯ ಪ್ರದೇಶಗಳ ಸಮೀಕ್ಷೆ ನಡೆಸಿ ನಕ್ಸಲ್ ಪ್ಯಾಕೇಜ್ ಹಣ ಸದ್ಬಳಕೆ ಮಾಡಬೇಕೆಂದು ಆಗ್ರಹಿಸಿದರು.ಚೈತ್ರ, ಅಪ್ಪುಗೌಡ, ಶ್ಯಾಮುಗೌಡ, ಸತೀಶ್ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.