ಬುಧವಾರ, ಮೇ 12, 2021
26 °C

ನಕ್ಸಲ್ ಹಣೆಪಟ್ಟಿ ಕಳಚಿಕೊಂಡ ಯಶೋದಾಗೆ ವಿವಾಹ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಕಾರ್ಕಳ ಸಮೀಪದ ಈದು ಗ್ರಾಮದಲ್ಲಿ 2003ರಲ್ಲಿ ನಕ್ಸಲರ ವಿರುದ್ಧ ಪೊಲೀಸರು ನಡೆಸಿದ್ದ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಮುಜೇಕಾನು ಗ್ರಾಮದ ಯಶೋದಾ ಅವರ ವಿವಾಹ ಬುಧವಾರ ನಡೆಯಿತು.ಕಾರಗದ್ದೆ ವೀರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಿವಾಹದಲ್ಲಿ ಗಿರಿಜನ ಪಂಗಡದ ಯಶೋದಾ ಶೃಂಗೇರಿ ತಾಲ್ಲೂಕಿನ ಮಸ್ಕಿ ಗ್ರಾಮದ ಬಿಳಗೋಡು ಕೂಡಿಗೆಯ ಕಳಸಪ್ಪ (ಸುರೇಶ್) ಅವರನ್ನು ವರಿಸಿದರು.ಎಸ್‌ಪಿ ಶಶಿಕುಮಾರ್ ಕೂಡ ವಿವಾಹದಲ್ಲಿ ಪಾಲ್ಗೊಂಡಿದ್ದರು. ನಕ್ಸಲ್ ಚಳವಳಿಗೆ ಸಂಬಂಧಿಸಿದಂತೆ ಯಶೋದಾ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಲ್ಲೂ ಯಶೋದಾ ನಿರಪರಾಧಿ ಎಂದು ಕಳೆದ ವರ್ಷ ತೀರ್ಪು ಬಂದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.