ಗುರುವಾರ , ಅಕ್ಟೋಬರ್ 17, 2019
22 °C

ನಗರಕ್ಕೆ ಇನ್ನೊಂದು ರಾಜಧಾನಿ

Published:
Updated:
ನಗರಕ್ಕೆ ಇನ್ನೊಂದು ರಾಜಧಾನಿ

ಬಹುಭಾಷಿಗರ ನಗರ ಬೆಂಗಳೂರು. ಊರು ಬೆಳೆದಂತೆ ಅದು ಹಲವಾರು ಜಾತಿ, ಪಂಗಡ, ಧರ್ಮದ ಜನರಿಗೆ ನೆಲೆನೀಡುತ್ತಾ ಬಂತು. ಅದರ ಮೊದಲ ಪರಿಣಾಮಗಳಾಗಿದ್ದೇ ಆಹಾರ ಸಂಸ್ಕೃತಿಯ ಬದಲಾವಣೆಯ ಮೇಲೆ.ವಿವಿಧ ರಾಜ್ಯಗಳಿಂದ ಬಂದು ಉದ್ಯಾನನಗರಿಯನ್ನೇ ತಾತ್ಕಾಲಿಕ ತವರೂರಾಗಿಸಿಕೊಂಡು ಇಲ್ಲೇ ತಳವೂರಿದ ಸಾವಿರಾರು ಮಂದಿಗೆ ಇಷ್ಟ ಪಡುವ ಸಾಂಪ್ರದಾಯಿಕ ತಿನಿಸು ನೀಡುವ ಹೋಟೆಲ್‌ಗಳೂ ಕ್ರಮೇಣ ತಲೆಯೆತ್ತಿದುವು. ಇದರ ಪ್ರತಿಫಲವಾಗಿ ಕೇರಳ, ತಮಿಳುನಾಡು, ಪಂಜಾಬಿ, ಮಹಾರಾಷ್ಟ್ರ, ಆಂಧ್ರ ಮೊದಲಾದ ವಿಶೇಷ (ಸ್ಪೆಶಲೈಸ್ಡ್) ಹೋಟೆಲ್‌ಗಳೂ ಆರಂಭಗೊಂಡವು.ಖಾನ್‌ದಾನಿ ರಾಜಧಾನಿ ಇಂತಹುದೇ ಗುಂಪಿಗೆ ಸೇರುವ ಮತ್ತೊಂದು ಉಪಹಾರ ಗೃಹ. ನಗರದಲ್ಲಿ ಇದರ 7ನೇ ಮಳಿಗೆ ವೈಟ್‌ಫೀಲ್ಡ್‌ನ ಫೀನಿಕ್ಸ್ ಮಾರ್ಕೆಟ್‌ನಲ್ಲಿ ಶುಕ್ರವಾರ ಆರಂಭವಾಗಿದೆ. ಈ ಥಾಲಿ ಉಪಹಾರಗೃಹದಲ್ಲಿ ಗುಜರಾತಿ ಮತ್ತು ರಾಜಸ್ತಾನಿ ತಿನಿಸುಗಳು ಲಭ್ಯವಾಗಲಿವೆ.ಮೀರಾ ಹಾಸ್ಪಿಟಾಲಿಟಿ ಮುಖ್ಯಸ್ಥ ಅಜಿ ನಾಯರ್ ನೂತನ `ರಾಜಧಾನಿ~ ಬಗ್ಗೆ ಮಾತನಾಡುತ್ತಾ `ಸಿಲಿಕಾನ್ ಸಿಟಿಯ ನಾಗರಿಕರು ರಾಜಧಾನಿ ಹೋಟೆಲ್ ಅನ್ನು ಸ್ವಾಗತಿಸಿದ ರೀತಿಯ ಬಗ್ಗೆ ಹೆಮ್ಮೆ ಇದೆ. 2006ರಲ್ಲಿ ಮೊದಲ ಘಟಕ ಫೋರಂ ಮಾಲ್‌ನಲ್ಲಿ ತೆರೆದಾಗ ಸಾರ್ವಜನಿಕರಿಂದ ಉತ್ತಮ ಪ್ರೋತ್ಸಾಹ ದೊರೆತಿದ್ದು ಮುಂದಿನ 6 ಮಳಿಗೆ ತೆರೆಯಲು ನೆರವಾಯಿತು.ಮಾರ್ಚ್ ಅಂತ್ಯದೊಳಗೆ ಇಂದಿರಾನಗರ, ಬನ್ನೇರುಘಟ್ಟ, ಬ್ರಿಗೇಡ್ ರಸ್ತೆ ಕೋರಮಂಗಲವೂ ಸೇರಿದಂತೆ ಇನ್ನೂ 4 ಕಡೆಗಳಲ್ಲಿ ಹೋಟೆಲ್ ಆರಂಭಿಸಲಾಗುವುದು. ಪ್ರಸ್ತುತ `ರಾಜಧಾನಿ~ ವರ್ಷಕ್ಕೆ 80 ಕೋಟಿಯ ವಹಿವಾಟು ನಡೆಸುತ್ತಿದೆ~ ಎಂದು ಹೇಳಿದರು.ಬೆಂಗಳೂರಿಗರು ಆಹಾರ ಪ್ರಿಯರು. ಇಲ್ಲಿ ಎಲ್ಲ ಬಗೆಯ ರುಚಿಕರ ಖಾದ್ಯಗಳಿಗೆ ಮುಕ್ತ ಸ್ವಾಗತವಿದೆ. ಸಂಸ್ಕೃತಿ ಸಂಪ್ರದಾಯಕ್ಕೂ ಸಮಾನ ಆದ್ಯತೆ ನೀಡುವವರು ಎಂಬ ಕಾರಣಕ್ಕೆ ಇಲ್ಲಿ ಗುಜರಾತಿ ಶೈಲಿಯಲ್ಲೇ ಸ್ವಾಗತ ನೀಡಲಾಗುತ್ತದೆ. ಊಟ ಮಾಡುತ್ತಲೇ ಕಚ್ಚಿಗೋಧಿ ನೃತ್ಯ, ಘಮಾರ್‌ನೃತ್ಯಗಳನ್ನು ಗ್ರಾಹಕರು ಸವಿಯಬಹುದು. ಊಟದ ಬಳಿಕ ಮೆಹಂದಿ ಹಾಕುವ ಮೂಲಕ ಆಹಾರ ಪ್ರಿಯರನ್ನು ಸಂತೋಷಗೊಳಿಸಲಾಗುತ್ತದೆ.ಸಸ್ಯಾಹಾರ `ಥಾಲಿ~ ರಾಜಸ್ತಾನಿ ಹಾಗೂ ಗುಜರಾತಿ ಶೈಲಿಯ ವಿಶಿಷ್ಟ ಪ್ರಕಾರದ ಊಟ. ಇದರಲ್ಲಿ 30 ಬಗೆಯ ಖಾದ್ಯಗಳು ಲಭ್ಯ. ಮುಖ್ಯವಾಗಿ ಗುಲಾಬ್ ಜಾಮೂನ್, ಅಂಗೂರಿ ಬಾಸುಂದಿ, ರಾಜ್‌ಭೋಗ್, ಸಮೋಸ, ಬರ್ಫಿ ಧೋಕ್ಲಾ, ಬಿಂಡಿ ಸಾಂಬನ್ಯಾ, ಆಲೂ ಪಾಲಕ್ ರಸವಾಲಾ, ಮಟರ್ ಪನ್ನೀರ್, ಚೌಲಿ ಮಸಾಲಾ, ಸ್ವೀಟ್ ದಾಲ್, ಸ್ಪೈಸಿ ದಾಲ್, ರಾಜಸ್ತಾನಿ ಕಡಿ, ಪುಲ್ಕಾ, ಮೇಥಿ ಪುರಿ, ಬಜ್ರಾ ರೋಟ್ಲಾ, ಸ್ಟೀಮ್ ರೈಸ್, ಮಸಾಲಾ ಕಿಚಡಿ, ಕರ್ಡ್ ರೈಸ್, ಪಪ್ಪಡ್, ಉಪ್ಪಿನಕಾಯಿ, ಸಲಾಡ್, ಗ್ರೀನ್ ಚಟ್ನಿ ಹಾಗೂ ಸ್ವೀಟ್ ಚಟ್ನಿ ದೊರೆಯುತ್ತವೆ.ಇತರ ರೆಸ್ಟೋರೆಂಟ್‌ಗಳಿಗಿಂತ ರಾಜಧಾನಿ ವಿಭಿನ್ನ ಎನ್ನುವ 40 ವರ್ಷದ ಅನುಭವವಿರುವ ಚೀಫ್ ಶೆಫ್ ಹೇಮರಾಜ್ ಚೌಧರಿ, `ಸರ್ವಿಂಗ್‌ನಲ್ಲೂ ನಾವು ಸಾಂಪ್ರದಾಯಿಕ ಪ್ರಕಾರವನ್ನೇ ಉಳಿಸಿಕೊಂಡಿದ್ದೇವೆ. ಪ್ರತಿದಿನವೂ ಗ್ರಾಹಕರನ್ನು ಆಕರ್ಷಿಸಬೇಕೆಂಬ ಕಾರಣಕ್ಕೆ ನಿರ್ದಿಷ್ಟ ಮೆನುವನ್ನು ತಯಾರಿಸಿಲ್ಲ.ಪ್ರತಿದಿನವೂ ಅದು ಬದಲಾಗುತ್ತಿರುತ್ತದೆ. ಆಯಾ ಸೀಸನಲ್ ಸಮಯಗಳಲ್ಲಿ ಬೇರೆ ಸ್ವಾದಿಷ್ಟದ ತಿನಿಸು ನೀಡಬೇಕೆಂದಿರುವುದು ನಮ್ಮ ಇನ್ನೊಂದು ವಿಶೇಷ ಎನ್ನುತ್ತಾರೆ. ರಾಜಧಾನಿ ಹೋಟೆಲ್‌ನ ಚೀಫ್ ಶೆಫ್‌ಗಳಿಗೆ `ಮಹಾರಾಜ~ ಎಂದೇ ಹೆಸರಿಟ್ಟು ಕೂಗುವುದು ಇಲ್ಲಿನ ಇನ್ನೊಂದು ವೈಶಿಷ್ಟ್ಯ.ಆರ್ಡರ್ ನೀಡಿದ ಕೆಲವೇ ಹೊತ್ತಿನಲ್ಲಿ ಈ ಊಟ ಮನೆಗೆ ತಲುಪುವಂತೆ ಮಾಡಲು ಕ್ಯಾಟರಿಂಗ್ ವ್ಯವಸ್ಥೆಯೂ ಇಲ್ಲಿದೆ. ಥಾಲಿ ಊಟದ ಬೆಲೆ: 250.

ಮಧ್ಯಾಹ್ನ 12ರಿಂದ 3.30 ಹಾಗೂ ಸಂಜೆ 7ರಿಂದ ರಾತ್ರಿ 11ರ ವೇಳೆಯಲ್ಲಿ ಊಟ ಲಭ್ಯ.

 -

 

Post Comments (+)