ನಗರಕ್ಕೆ ಬಂದಿಳಿದ ಯೂರೊಫೈಟರ್ ಟೈಫೂನ್ಸ್ ಯುದ್ಧವಿಮಾನ

7

ನಗರಕ್ಕೆ ಬಂದಿಳಿದ ಯೂರೊಫೈಟರ್ ಟೈಫೂನ್ಸ್ ಯುದ್ಧವಿಮಾನ

Published:
Updated:

ಬೆಂಗಳೂರು: ವೈಮಾನಿಕ ಮೇಳದ ದಿನವು ಸಮೀಪಿಸುತ್ತಿರುವಂತೆ ವಿವಿಧ ದೇಶಗಳ ಪ್ರಮುಖ ವಿಮಾನಗಳು ಉದ್ಯಾನ ನಗರಿಗೆ ಕಾಲಿಡಲು ಆರಂಭಿಸಿವೆ. ಬ್ರಿಟಿಷ್ ವೈಮಾನಿಕ ಕೇಂದ್ರವು ಅಭಿವೃದ್ಧಿ ಪಡಿಸಿದ ‘ಯೂರೊಫೈಟರ್ ಟೈಫೂನ್ಸ್’ ಎರಡು ಯುದ್ಧವಿಮಾನಗಳು ಶುಕ್ರವಾರ ಬಂದಿಳಿದಿವೆ.ಇದೇ ಮೊದಲ ಬಾರಿಗೆ ಈ ವಿಮಾನಗಳು ‘ಏರೊ ಇಂಡಿಯಾ’ ವೈಮಾನಿಕ ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಯುದ್ಧದ ಸಂದರ್ಭದಲ್ಲಿ ಬಹುವಿಧವಾಗಿ ಬಳಕೆಯಾಗುವ ಈ ವಿಮಾನವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.ಶತ್ರುಗಳ ಮೇಲೆ ಬಿರುಗಾಳಿಯಂತೆ ಎರಗಬಲ್ಲ ಸಾಮರ್ಥ್ಯ ಇದಕ್ಕಿದೆ.ಅತ್ಯಂತ ಪರಿಣಾಮಕಾರಿಯಾಗಿ ದಾಳಿ ಮಾಡುವ ಸಾಮರ್ಥ್ಯವಿರುವ ಇದು ಇತರ ವಿಮಾನಗಳಿಗೆ ಹೋಲಿಸಿದರೆ ಅಷ್ಟೇನೂ ದುಬಾರಿಯಲ್ಲ ಎಂದು ನಿಮಾರ್ಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry