ನಗರದಲ್ಲಿ ಅಮೆರಿಕ ಕಾರ್ನರ್ ಆರಂಭ

7

ನಗರದಲ್ಲಿ ಅಮೆರಿಕ ಕಾರ್ನರ್ ಆರಂಭ

Published:
Updated:

ಬೆಂಗಳೂರು: `ಅಮೆರಿಕದ ಬಗ್ಗೆ ಎಲ್ಲರಿಗೂ ನಿಖರ ಮಾಹಿತಿ ನೀಡುವ ಉದ್ದೇಶದಿಂದ ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳನ್ನು ತೆರೆಯಲಾಗಿದೆ~ ಎಂದು ಅಮೆರಿಕದ ಕಾನ್ಸುಲ್ ಜನರಲ್ ಜೆನ್ನಿಫರ್ ಮ್ಯಾಕ್ ಇನ್‌ಟೈರ್ ಹೇಳಿದರು.ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಅಮೆರಿಕ ಕಾರ್ನರ್ ಕೇಂದ್ರದ ನೂತನ ಆವರಣ ಉದ್ಘಾಟಿಸಿ ಮಾತನಾಡಿದರು.`ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಜನರಲ್‌ನ ಸಾರ್ವಜನಿಕ ವ್ಯವಹಾರಗಳ ಕಚೇರಿಯು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ 2004ರಲ್ಲಿ ಬೆಂಗಳೂರಿನಲ್ಲಿ ಅಮೆರಿಕ ಕಾರ್ನರ್ ಕಚೇರಿ ತೆರೆಯಿತು. ಈ ಕೇಂದ್ರದಲ್ಲಿ ಅಮೆರಿಕದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಿಷಯಗಳ ನಿಖರ ಮಾಹಿತಿ ದೊರೆಯುತ್ತದೆ~ ಎಂದರು.`ಬೆಂಗಳೂರು ಕೇಂದ್ರವು  ಪ್ರತಿ ಶನಿವಾರ ಅಮೆರಿಕದ ಅತ್ಯುತ್ತಮ ಚಲನಚಿತ್ರಗಳನ್ನು ಕೇಂದ್ರದಲ್ಲಿ ಪ್ರದರ್ಶಿಸಲಾಗುತ್ತಿದೆ. ಕೇಂದ್ರವು ಈವರೆಗೆ 1000ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು, ಹಲವು ಪ್ರಕಟಣೆ ಹೊರತಂದಿರುವುದು ಸಂತಸ ತಂದಿದೆ~ ಎಂದರು.`ಕೇಂದ್ರದಲ್ಲಿ ಹೊಸದಾಗಿ ಮೂರು ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಯುವಜನತೆಗೆ ಅನುಕೂಲವಾಗುವ 70 ಪುಸ್ತಕಗಳನ್ನು ನೀಡಲಾಗಿದೆ. ಮುಂದೆಯೂ ಹಂತ ಹಂತವಾಗಿ ಪುಸ್ತಕಗಳನ್ನು ವಿತರಿಸಲಾಗುವುದು~ ಎಂದು ಹೇಳಿದರು. ಭಾರತೀಯ ವಿದ್ಯಾ ಭವನದ (ಕರ್ನಾಟಕ) ಅಧ್ಯಕ್ಷ ಎನ್. ರಾಮಾನುಜ ಇತರರು  ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry