ಗುರುವಾರ , ಮೇ 6, 2021
26 °C

ನಗರದಲ್ಲಿ ಆರೋಗ್ಯಕ್ಕಾಗಿ ಓಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಆರೋಗ್ಯದ ದಿನದ ಅಂಗವಾಗಿ ಬೆಂಗಳೂರು ಸ್ಕೂಲ್    ಸ್ಪೋರ್ಟ್ಸ್ ಫೌಂಡೇಷನ್ ಆಶ್ರಯದಲ್ಲಿ ಶನಿವಾರ ಮೂರು ಮೈಲಿಯ ಓಟ ನಡೆಯಿತು.ದೇಹದಾರ್ಢ್ಯ,  ಏರೋಬಿಕ್ಸ್ ಹೀಗೆ ವಿವಿಧ ಕ್ರೀಡಾ ಚಟುವಟಿಕೆಗಳ ಮೂಲಕ ದೈಹಿಕ ಆರೋಗ್ಯದ ಮಹತ್ವವನ್ನು ಈ ಓಟದ ಮೂಲಕ ತಿಳಿಸಿಕೊಡಲಾಯಿತು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ನಗರದ ಸಾಕಷ್ಟು ಜನ ಭಾಗವಹಿಸಿದ್ದರು. `ಮೂರು ಲಕ್ಷಕ್ಕಿಂತ ಹೆಚ್ಚಿನ ಜನರನ್ನು ತಲುಪುವ ಉದ್ದೇಶವನ್ನು ಈ ಓಟ ಹೊಂದಿದೆ.ಇದಕ್ಕಾಗಿ 32 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ತಿಂಗಳು ಮೂರು ಮೈಲಿ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ~ ಎಂದು ಇದರ ಆಯೋಜಕರಾದ ಎಲ್ವಿಸ್ ಜೋಸೆಫ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.