ಸೋಮವಾರ, ಜೂನ್ 14, 2021
22 °C

ನಗರದಲ್ಲಿ ಇಂದಿನಿಂದ ಲಂಕೇಶ್ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಂಗಾಯಣ ಶಿವಮೊಗ್ಗ, `ಪಿ. ಲಂಕೇಶ್ ನಾಟಕೋತ್ಸವ~ವನ್ನು ಮಾರ್ಚ್ 6ರಿಂದ 8ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಪ್ರತಿ ದಿನ ಸಂಜೆ 7ಕ್ಕೆ ಹಮ್ಮಿಕೊಂಡಿದೆ.ಪತ್ರಕರ್ತೆ ಗೌರಿ ಲಂಕೇಶ್ ನಾಟಕೋತ್ಸವವನ್ನು ಮಾರ್ಚ್ 6ರಂದು ಸಂಜೆ 6.30ಕ್ಕೆ ಉದ್ಘಾಟಿಸುವರು. ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅತಿಥಿಯಾಗಿ ಭಾಗವಹಿಸುವರು ಎಂದು ರಂಗಾಯಣ ನಿರ್ದೇಶಕ ಹೊ.ನ. ಸತ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅಂದು ಸಂಜೆ 7ಕ್ಕೆ ನಟರಾಜ್ ಹೊನ್ನವಳ್ಳಿ ನಿರ್ದೇಶನದಲ್ಲಿ ನಮ್ ಟೀಮ್!?  ಶಿವಮೊಗ್ಗ   `ಗುಣಮಖ~  ನಾಟಕ  ಪ್ರದರ್ಶಿಸಲಿದೆ.  7ರಂದು  ಕಾಂತೇಶ್ ಕದರ ಮಂಡಲಗಿ  ನಿರ್ದೇಶನದಲ್ಲಿ ಸಹ್ಯಾದ್ರಿ ರಂಗತರಂಗ ತಂಡ `ಸಂಕ್ರಾಂತಿ~ ನಾಟಕ ಪ್ರಸ್ತುತ ಪಡಿಸಲಿದೆ. 8ರಂದು ಹೆಗ್ಗೋಡಿನ ಚರಕ ತಂಡ ಮೈಸೂರಿನ ಸುಮತಿ ಅವರ ನಿರ್ದೇಶನದಲ್ಲಿ `ಕಲ್ಲು ಕರಗುವ ಸಮಯ~ ನಾಟಕ ಪ್ರದರ್ಶಿಸಲಿದೆ. ಇದರ ರೂಪಾಂತರವನ್ನು ಬಿ. ಚಂದ್ರೇಗೌಡ ಮಾಡಿದ್ದಾರೆ ಎಂದು ಹೇಳಿದರು.ಅಲ್ಲದೇ, 8ರಂದು ಸಂಜೆ 5.30ಕ್ಕೆ ಲಂಕೇಶ್ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದ್ದು, ಪ್ರಸನ್ನ, ಪ್ರೊ.ರಾಜೇಂದ್ರ ಚೆನ್ನಿ, ನಟರಾಜ್ ಹುಳಿಯಾರ್ ಮಾತನಾಡಲಿದ್ದಾರೆ. ಕಡಿದಾಳು ಶಾಮಣ್ಣ ಸಮಾರೋಪ ಭಾಷಣ ಮಾಡುವರು ಎಂದು ವಿವರಿಸಿದರು. ಪ್ರತಿ ದಿವಸವೂ ಉಚಿತ ಪ್ರವೇಶವಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಅಂಕಣಕಾರ ಬಿ. ಚಂದ್ರೇಗೌಡ, ನಿರ್ದೇಶಕ ಕಾಂತೇಶ್ ಕದರಮಂಡಲಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹರಿಗೆ ಗೋಪಾಲಸ್ವಾಮಿ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.