ನಗರದಲ್ಲಿ ಇಂದು -ಅಕ್ಟೋಬರ್ 3, ಸೋಮವಾರ

7

ನಗರದಲ್ಲಿ ಇಂದು -ಅಕ್ಟೋಬರ್ 3, ಸೋಮವಾರ

Published:
Updated:

ಇಂಡಿಯನ್ ಅಕಾಡೆಮಿ ಆಫ್ ಸೆರಿಬ್ರಲ್ ಪಾಲ್ಸಿ: ರಾಜಭವನ. `ಸೆರಿಬ್ರಲ್ ಪಾಲ್ಸಿ~ ದಿನದ ಅಂಗವಾಗಿ ರಾಜಭವನದಿಂದ ಲ್ಯಾವೆಲ್ಲೆ ರಸ್ತೆಯಲ್ಲಿರುವ ರೋಟರಿ ಫ್ರೆಂಡ್‌ಶಿಪ್ ಕ್ಲಬ್‌ವರೆಗೆ ಜಾಥಾ. ಚಾಲನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಬೆಳಿಗ್ಗೆ 9.ಕಾರ್ಮಿಕ ಇಲಾಖೆ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು ವಿಶ್ವವಿದ್ಯಾಲಯ. `ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ~ಗೆ ಚಾಲನಾ ಕಾರ್ಯಕ್ರಮ. ಉದ್ಘಾಟನೆ- ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ. ಯೋಜನೆಗೆ ಚಾಲನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಸ್ಮಾರ್ಟ್ ಕಾರ್ಡ್ ವಿತರಣೆ- ಸಚಿವ ಬಿ.ಎನ್.ಬಚ್ಚೇಗೌಡ. ಅತಿಥಿಗಳು- ಸಚಿವ ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮೇಯರ್ ಪಿ.ಶಾರದಮ್ಮ. ಅಧ್ಯಕ್ಷತೆ- ಶಾಸಕ ಆರ್.ರೋಷನ್ ಬೇಗ್. ಮಧ್ಯಾಹ್ನ 3.ಸಾರಿಗೆ ಇಲಾಖೆ: 2ನೇ ಮಹಡಿ, ಟಿ.ಟಿ.ಎಂ.ಸಿ. ಕಟ್ಟಡ, ಬಿಎಂಟಿಸಿ ಬಸ್ ನಿಲ್ದಾಣ, 4ನೇ ಬಡಾವಣೆ, ಜಯನಗರ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟನೆ- ಸಚಿವ ಆರ್.ಅಶೋಕ. ಅತಿಥಿಗಳು- ಸಂಸದ ಅನಂತಕುಮಾರ್, ಮೇಯರ್ ಪಿ.ಶಾರದಮ್ಮ, ಶಾಸಕ ಎಂ.ಕೃಷ್ಣಪ್ಪ (ಬೆಂಗಳೂರು ದಕ್ಷಿಣ), ಪಾಲಿಕೆ ಸದಸ್ಯ ಸಿ.ಕೆ.ರಾಮಮೂರ್ತಿ. ಅಧ್ಯಕ್ಷತೆ- ಶಾಸಕ ಬಿ.ಎನ್.ವಿಜಯಕುಮಾರ್. ಬೆಳಿಗ್ಗೆ 11.ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಸಮಿತಿ: ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ. ಶರನ್ನವರಾತ್ರಿ, ದಸರಾ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನ. ಸಾನ್ನಿಧ್ಯ- ರಂಭಾಪುರಿ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ. ವೇದಘೋಷ- ರೇಣುಕಾಚಾರ್ಯ ಗುರುಕುಲ. `ಪಂಚಪೀಠಗಳ ಪರಂಪರೆ~ ಉಪದೇಶಮಾೃತ- ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ. ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ- ಡಾ.ಮೀನಾಕ್ಷಿ ಖಂಡಿಮಠ. `ಬಾಳಿಗೆ ಬೆಳಕು~ ಸಾಹಿತ್ಯ ಕೃತಿ ಲೋಕಾರ್ಪಣೆ- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ. ಅತಿಥಿಗಳು- ಸಚಿವರಾದ ಮುರುಗೇಶ್ ಆರ್.ನಿರಾಣಿ, ಸಿ.ಸಿ.ಪಾಟೀಲ, ಎಸ್.ಎ.ರವೀಂದ್ರನಾಥ್, ಬಾಲಚಂದ್ರ ಜಾರಕಿಹೊಳಿ. ಸಂಜೆ 6.30.ಮಹಾಗಣಪತಿ ಸಾಂಸ್ಕೃತಿಕ ಸಂಘ: ಮಹಾಗಣಪತಿ ನಗರ, ಶಿವನಗರ, ರಾಜಾಜಿನಗರ. ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ. ಉದ್ಘಾಟನೆ- ಸಚಿವ ಎಸ್.ಸುರೇಶ್‌ಕುಮಾರ್. ಅತಿಥಿಗಳು- ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ, ಕಂಠೀರವ ಸ್ಟುಡಿಯೊ ಅಧ್ಯಕ್ಷ ಎಂ.ರುದ್ರೇಶ್, ಪಾಲಿಕೆ ಸದಸ್ಯ ಎ.ಎಚ್.ಬಸವರಾಜು, ರೇಷ್ಮೆ ಮಂಡಳಿ ಅಧ್ಯಕ್ಷ ಬಿ.ವಿಜಯಕುಮಾರ್. ಸಂಜೆ 6.30.ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜು: ಸಭಾಂಗಣ. `ವಿಶ್ವ ವಸತಿ ದಿನ~ ಉದ್ಘಾಟನೆ- ಸಚಿವ ವಿ.ಸೋಮಣ್ಣ. ಅತಿಥಿಗಳು- ಕಾಲೇಜಿನ ನಿರ್ವಹಣಾ ಮಂಡಳಿ ಮುಖ್ಯಸ್ಥ ವಿಜಯ್ ಘೋರೆ, ಬಿಎಂಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಬಿ.ವಿ.ಆಚಾರ್ಯ, ಸಂಸ್ಥೆಯ ಸದಸ್ಯ ಕಾರ್ಯದರ್ಶಿ ಬಿ.ಎಸ್.ರಾಗಿಣಿ ನಾರಾಯಣ. ಬೆಳಿಗ್ಗೆ 8.30.ಇಂಡೋ ಗ್ಲೋಬಲ್ ಸೋಷಿಯಲ್ ಸರ್ವೀಸ್ ಸೊಸೈಟಿ, ನಗರ ನಿರಾಶ್ರಿತರಿಗಾಗಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ: ಸೆನೆಟ್ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು ವಿಶ್ವವಿದ್ಯಾಲಯ. `ವಿಶ್ವ ವಸತಿ ದಿನಾಚರಣೆ~ ಮತ್ತು ವಸತಿಹೀನರ ವಸತಿ ವ್ಯವಸ್ಥೆ ಕುರಿತು ಸಮಾಲೋಚನಾ ಸಭೆ. ಅತಿಥಿ- ಬಿಬಿಎಂಪಿ ಆಯುಕ್ತ ಸಿದ್ದಯ್ಯ. ಬೆಳಿಗ್ಗೆ 9.30.ಎ.ಎಸ್.ಸಿ. ಸೆಂಟರ್ ಮತ್ತು ಕಾಲೇಜು ಬೆಂಗಳೂರು: ಅಗ್ರಂ ಮೈದಾನ, ಎಎಸ್‌ಸಿ, ಏರ್‌ಫೋರ್ಸ್ ಆಸ್ಪತ್ರೆ ಬಳಿ, ಹಳೇ ವಿಮಾನ ನಿಲ್ದಾಣ ರಸ್ತೆ. ಅನಾಥ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ. ಮಧ್ಯಾಹ್ನ 2.15.ವಿವೇಕಾನಂದ ಕಾಲೇಜು:
ಡಾ.ರಾಜ್‌ಕುಮಾರ್ ರಸ್ತೆ, ರಾಜಾಜಿನಗರ. `ಬೆಂಗಳೂರಿನಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳ ಪಾತ್ರ~ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ. ಅತಿಥಿಗಳು- ಐಸಿಎಚ್‌ಆರ್ ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕರಾದ ಡಾ.ಎಸ್.ಕೆ.ಅರುಣಿ, ಸಹಾಯಕ ಪ್ರಾಧ್ಯಾಪಕ ಪ್ರೊ.ಟಿ.ಎಂ.ಮಂಜುನಾಥ್, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ಆಯುಕ್ತ ಪ್ರೊ.ವಿ.ಸಾಂಬಾಜಿ ರಾವ್. ಅಧ್ಯಕ್ಷತೆ- ಪ್ರಾಂಶುಪಾಲ ಪ್ರೊ.ಎಂ.ಗೋವಿಂದಯ್ಯ. ಸಂಜೆ 4.30.ಬಸವ ಸಮಿತಿ: ಅರಿವಿನ ಮನೆ, ಬಸವ ಸಮಿತಿ. ಅರಿವಿನ ಮನೆ 68ನೇ ಕಾರ್ಯಕ್ರಮದಲ್ಲಿ `ಗಾಂಧಿ - ಬಸವ~ ಕುರಿತ ಉಪನ್ಯಾಸ ಕಾರ್ಯಕ್ರಮ. ಉದ್ಘಾಟನೆ- ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ಉಪನ್ಯಾಸ- ಗಾಂಧಿ ಸ್ಮಾರಕ ನಿಧಿ ಟ್ರಸ್ಟ್ ಅಧ್ಯಕ್ಷ ಹೊ.ಶ್ರೀನಿವಾಸಯ್ಯ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಕೆ.ರಾಮೇಗೌಡ. ಅಧ್ಯಕ್ಷತೆ- ಸಮಿತಿ ಅಧ್ಯಕ್ಷ ಅರವಿಂದ ಜತ್ತಿ. ಸಂಜೆ 6.ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳು: ನಾಗಪ್ಪ ರಸ್ತೆ, ಶೇಷಾದ್ರಿಪುರ. `ಸಂಶೋಧನಾ ವಿಧಾನಗಳು~ ಕುರಿತ ಕಾರ್ಯಾಗಾರ. ಅತಿಥಿಗಳು- ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ವೆಂಕಟರಾವ್, ಮೌಂಟ್ ಕಾರ್ಮೆಲ್ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಎಸ್.ರಮೇಶ್, ಐಎಸ್‌ಇಸಿ ಅತಿಥಿ ಉಪನ್ಯಾಸಕ ಡಾ.ಅಬ್ದುಲ್ ಅಜೀಜ್. ಬೆಳಿಗ್ಗೆ 9.ಶಂಕರ ಪ್ರತಿಷ್ಠಾನ: ದೊಡ್ಡಕಲ್ಲಸಂದ್ರ, ಕನಕಪುರ ರಸ್ತೆ. `ಸೋಮ~ ಕಲಾ ಉತ್ಸವ. `ಗಂಗಾ ಕಾವೇರಿ~ ಕೊಳಲು ವಾದನ- ಎಂ.ಕೆ.ಪ್ರಾಣೇಶ್ ಮತ್ತು ಪ್ರವೀಣ್ ಗೋಡ್ಕಿಂಡಿ. ರಾತ್ರಿ 8.30.ಬಿ.ಎನ್.ಎಂ ತಾಂತ್ರಿಕ ವಿದ್ಯಾಲಯ: 12ನೇ ಮುಖ್ಯರಸ್ತೆ, 2ನೇ ಹಂತ, ಬನಶಂಕರಿ. ಪ್ರಥಮ ವರ್ಷದ ಎಂಬಿಎ, ಎಂ.ಟೆಕ್ ತರಗತಿಗಳ ಉದ್ಘಾಟನಾ ಸಮಾರಂಭ. ಅತಿಥಿ- ಫೋರೆಸ್ ಕಂಪೆನಿಯ ಮುಖ್ಯಸ್ಥರಾದ ಸ್ಮಿತಾ ಎಚ್.ಶೆಟ್ಟಿ, ಸಿಟ್ರಿಕ್ಸ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಡಾ.ಪಲ್ಲಭ ಬಂಡೋಪಾಧ್ಯಾಯ. ಬೆಳಿಗ್ಗೆ 9.30.

ಧಾರ್ಮಿಕ ಕಾರ್ಯಕ್ರಮ

ರಾಗೀಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್:
9ನೇ ಬಡಾವಣೆ, ಜಯನಗರ. `ದೇವಿ ದರ್ಶನ~ ಕುರಿತು ಪ್ರವಚನ- ಎಸ್.ಕೆ. ಲಕ್ಷ್ಮೀ. ಸಂಜೆ 6.30.ಆರ್ಟ್ ಆಫ್ ಲಿವಿಂಗ್: ವೇದ ವಿಘ್ನ ಮಹಾ ವಿದ್ಯಾ ಭವನ, ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರ, ಕನಕಪುರ ಮುಖ್ಯ ರಸ್ತೆ. `ನವರಾತ್ರಿ ಮಹೋತ್ಸವ- 2011~. ಮಹಾ ಗಣೇಶ ಪೂಜೆ, ವಾಸ್ತು ಶಾಂತಿ ಅನುಜ್ಞಾ ಪೂಜೆ, ಚಂಡೀ ದೇವಿ ಕಲಶ ಸ್ಥಾಪನೆ. ಸಂಜೆ 4. ಚಂಡೀ ಹೋಮ, ಪೂರ್ಣಾಹುತಿ, ಮಂಗಳಾರತಿ ಸತ್ಸಂಗ. ರಾತ್ರಿ 8.30.ಮಹೇಶ್ವರಮ್ಮ ದೇವಿ ದೇವಾಲಯ: ಪಂಪ ಮಹಾಕವಿ ರಸ್ತೆ, ಶಂಕರಪುರ. ಸರಸ್ವತಿ ಅಲಂಕಾರ. ಸಂಜೆ 6.30.ದುರ್ಗಾ ಮಹೇಶ್ವರಮ್ಮ ದೇವಾಲಯ: ಕೃಷ್ಣರಾಜಪುರ. ಶಾಖಾಂಬರಿ ಅಲಂಕಾರ. ಬೆಳಿಗ್ಗೆ 7.ದುರ್ಗಾ ಮಹೇಶ್ವರಮ್ಮ ದೇವಾಲಯ: ಕೃಷ್ಣರಾಜಪುರ. ದುರ್ಗಾದೇವಿ ಅಲಂಕಾರ. ಬೆಳಿಗ್ಗೆ 7.ಅಂಬಾಭವಾನಿ ದೇವಾಲಯ ಟ್ರಸ್ಟ್:
ಟೆಲಿಕಾಂ ಬಡಾವಣೆ, ಪೈಪ್‌ಲೈನ್ ರಸ್ತೆ, ವಿಜಯನಗರ. ಸರಸ್ವತಿ ಅಲಂಕಾರ. ಬೆಳಿಗ್ಗೆ 7.ಕೈಲಾಸನಾಥೇಶ್ವರ ಸ್ವಾಮಿ ದೇವಾಲಯ: ನಂ 40, ಈಶ್ವರನಗರ, 2ನೇ ಹಂತ, ಬನಶಂಕರಿ. ಸರಸ್ವತಿ ಅಲಂಕಾರ. ಸಂಜೆ 6.ಶಂಕರ ಸೇವಾ ಸಮಿತಿ: ಶಾರದಾಂಬ ಸನ್ನಿಧಿ, ಶಾರದಾಂಬಾ ನಗರ, ಜಾಲಹಳ್ಳಿ. ಚಂಡಿಕಾ ಹೋಮ. ಬೆಳಿಗ್ಗೆ 8.ಸತ್ಯಗಣಪತಿ ದೇವಸ್ಥಾನ: ಸತ್ಯನಾರಾಯಣ ಬಡಾವಣೆ, 3ನೇ ಹಂತ, 4ನೇ ವಿಭಾಗ, ಬಸವೇಶ್ವರನಗರ. ಬೆಣ್ಣೆ ಅಲಂಕಾರ. ಬೆಳಿಗ್ಗೆ 7.ಶ್ರೀರಾಮ ದೇವಸ್ಥಾನ: ಮಾಡಲ್ ಹೌಸ್ ಬ್ಲಾಕ್, ಬಸನವಗುಡಿ. ದ್ರಾಕ್ಷಿ ಗೋಡಂಬಿ  ಅಲಂಕಾರ. ಬೆಳಿಗ್ಗೆ 7.ಬ್ರಾಹ್ಮಣ ಸಭಾ: ಗಾಯತ್ರಿ ಮಂದಿರ, ಕೆಂಗೇರಿ ಉಪನಗರ. `ದಾಸವರೇಣ್ಯರ ಮನದಲ್ಲಿ ಶ್ರೀ ರಘುರಾಮ~ ಗಾಯನ ಕಾರ್ಯಕ್ರಮ- ಓಂಕಾರ ಗಾನ ವೃಂದ. ಸಂಜೆ 6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry