ನಗರದಲ್ಲಿ ಇಂದು- ಅಕ್ಟೋಬರ್ 7, ಶುಕ್ರವಾರ

7

ನಗರದಲ್ಲಿ ಇಂದು- ಅಕ್ಟೋಬರ್ 7, ಶುಕ್ರವಾರ

Published:
Updated:

ಅಕ್ಟೋಬರ್ 7, ಶುಕ್ರವಾರ

ಇನ್ಸ್‌ಸ್ಟಿಟ್ಯೂಟ್ ಆಫ್ ಬಿಜಿನೆಸ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿ: ಹೋಟೆಲ್ ಏಟ್ರಿಯಾ, ಅರಮನೆ ರಸ್ತೆ. `ಗಾಂಧೀಜಿಯ ಮೌಲ್ಯಗಳು: ಕಾರ್ಪೋರೇಟ್ ಆಡಳಿತ ಮತ್ತು ಪ್ರಗತಿ~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಅತಿಥಿ- ಸಚಿವ ಮುರುಗೇಶ್ ಆರ್.ನಿರಾಣಿ. ಸಂಜೆ 6.ದಿ ಆರ್ಟ್ ಆಫ್ ಲಿವಿಂಗ್: ಕನಕಪುರ ರಸ್ತೆ. ಆಯುರ್ವೇದ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆ ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿಗಳು- ಸಚಿವರಾದ ಎಸ್.ಎ.ರಾಮದಾಸ್, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಇಸ್ಕಾನ್ ಅಧ್ಯಕ್ಷ ತಿರು ಸ್ವಾಮೀಜಿ. `ಜಾಗತಿಕ ಮಟ್ಟದ ಆರೋಗ್ಯಕ್ಕೆ ಆಯುರ್ವೇದ ಒಂದು ವರದಾನ~ ಕುರಿತು ಉಪನ್ಯಾಸ- ಶ್ರೀ ಶ್ರೀ ರವಿಶಂಕರ್ ಗುರೂಜಿ. ಸಂಜೆ 5.ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಕಂಬಾರ ಸಂಭ್ರಮ ಕಾರ್ಯಕ್ರಮ. ಅತಿಥಿಗಳು- ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕವಿಗಳಾದ ಎಲ್.ಎನ್.ಮುಕುಂದರಾಜ್, ಡಾ.ಎಲ್.ಹನುಮಂತಯ್ಯ, ಅಧ್ಯಕ್ಷತೆ- ವಿಮರ್ಶಕ ಕೆ.ಮರುಳಸಿದ್ಧಪ್ಪ. ಸಂಜೆ 6.ವೆಂಕಟಪ್ಪ ಕಲಾ ಗ್ಯಾಲರಿ: ಕಸ್ತೂರ ಬಾ ರಸ್ತೆ. ಅನುರಾಧ ನಲಪತ್ ಮತ್ತು ಗಿರಿಧರ್ ಖಾಸನೀಸ್ ಅವರ ಚಿತ್ರಕಲೆಗಳ ಪ್ರದರ್ಶನ. ಸಂಜೆ 6.ಬೆಂಗಳೂರು ಲಲಿತಾ ಕಲಾ ಪರಿಷತ್: ನ್ಯಾಷನಲ್ ಕಾಲೇಜು ಆವರಣ, ಜಯನಗರ 7ನೇ ಬ್ಲಾಕ್. ಸಂಗೀತಧಾಮ ವಿದ್ಯಾರ್ಥಿನಿಯರಿಂದ ದೇವರನಾಮ, ವಚನ ಮತ್ತು ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ. ಸಂಜೆ 6ಶ್ರೀರಾಮಮಂದಿರ ಅಸೋಸಿಯೇಷನ್: ಮಾಡೆಲ್ ಹೌಸ್ ಬ್ಲಾಕ್, ಬಸವನಗುಡಿ. ಸುಮನಾ ರಂಜಕಲ್ ಅವರಿಂದ ಭರತನಾಟ್ಯ ಪ್ರದರ್ಶನ. ಸಂಜೆ 6.ವ್ಯಾಸಮಧ್ವ ಸಂಶೋಧನಾ ಪ್ರತಿಷ್ಠಾನ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ತರಗುಪ್ಪೆ ಮುಖ್ಯರಸ್ತೆ. `ಸುಮಧ್ವವಿಜಯ~ ಕನ್ನಡ ಅನುವಾದಿತ ಪುಸ್ತಕ ಬಿಡುಗಡೆ-ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ. ಸಂಜೆ 6.ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘ: ಕಂಟೋನ್ಮೆಂಟ್ ರೋಟರಿ ಟ್ರಸ್ಟ್, ಕೋಲ್ಸ್ ಪಾರ್ಕ್ ಹಿಂಭಾಗ, ಫ್ರೇಜರ್ ಟೌನ್. ಆಟೊರಿಕ್ಷಾ ಚಾಲಕರಿಂದ ರಕ್ತದಾನ ಶಿಬಿರ ಮತ್ತು ಅಂತರರಾಷ್ಟ್ರೀಯ ರಸ್ತೆ ಕಾರ್ಮಿಕರ ಸುರಕ್ಷತಾ ಸಪ್ತಾಹ. ಬೆಳಿಗ್ಗೆ 10.30.

ರಂಗದರ್ಶಿ

ರಂಗಶಂಕರ:
ಜೆ.ಪಿ.ನಗರ 2ನೇ ಹಂತ. ಸಿನಿಮ್ಯಾಟೋಗ್ರಾಫ್ ತಂಡದಿಂದ `ಹ್ಯಾಮ್ಲೆಟ್- ದಿ ಕ್ರೌನ್ ಪ್ರಿನ್ಸ್~ ನಾಟಕ ಪ್ರದರ್ಶನ. ಮೂಲ- ಶೇಕ್ಸ್‌ಪಿಯರ್. ನಿರ್ದೇಶನ-ರಜತ್ ಕಪೂರ್. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ

ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳ ಟ್ರಸ್ಟ್: ಜಯನಗರ 9ನೇ ಬ್ಲಾಕ್. ಅಮೃತ್ ಯೋಗಿ ಅವರಿಂದ ಗುರು ಕಾರುಣ್ಯ ಕುರಿತು ಉಪನ್ಯಾಸ. ಸಂಜೆ 6.30.ತಿರುಮಲ ತಿರುಪತಿ ದೇವಸ್ಥಾನ: ವೈಯಾಲಿಕಾವಲ್. ಮಂಗಳಾ ಬಾಲಚಂದ್ರ ಅವರಿಂದ ಹರಿಕಥೆ. ಸಂಜೆ 6.

ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್: ಜ್ಞಾನ ಭಾರತಿ ಬಡಾವಣೆ, ನಾಗದೇವನಹಳ್ಳಿ. ಅನ್ನಪೂಣೇಶ್ವರಿ ಸ್ವರ್ಣ ಅಲಂಕಾರ. ಸಂಜೆ 10.ದೇವಗಿರಿ ಶ್ರೀಗುರುಸೇವಾ ಸಮಿತಿ: ಬನಶಂಕರಿ 2ನೇ ಹಂತ. ಡಾ.ಮಾಳಗಿ ರಾಮಾಚಾರ್ಯ ಅವರಿಂದ ಮಹಾಭಾರತ ಕುರಿತು ಪ್ರವಚನ. ಸಂಜೆ 6.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry