ಬುಧವಾರ, ಏಪ್ರಿಲ್ 14, 2021
32 °C

ನಗರದಲ್ಲಿ ಇಂದು: ಆಗಸ್ಟ್ 13, ಸೋಮವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಸ್ಥೆ: ಕ್ಯಾಬಿನೆಟ್ ಸಭಾಂಗಣ, ಎಫ್‌ಕೆಸಿಸಿಐ, ಕೆ.ಜಿ. ರಸ್ತೆ. ಟ್ರಾಯ್ ಅಧ್ಯಕ್ಷ ಡಾ. ರಾಹುಲ್ ಖುಲ್ಲಾರ್ ಅವರೊಂದಿಗೆ ಸಂವಾದ. ಸಂಜೆ 5.ಪಿಎಂಸಿ ಬ್ಯಾಂಕ್: ವಿಜಯನಗರ ಕ್ಲಬ್, 1ನೇ ಮುಖ್ಯರಸ್ತೆ, ಆರ್‌ಪಿಸಿ ಲೇಔಟ್. ಉದ್ಯಮಿ ಕೆ.ಕೆ. ಸ್ವಾಮಿ ಅವರಿಂದ ವಿಜಯನಗರ ಹಾಗೂ ಬಸವೇಶ್ವರ ನಗರದ ಶಾಖೆಗಳ ಉದ್ಘಾಟನೆ. ಬೆಳಿಗ್ಗೆ 11.30.ಎಸ್.ಜೆ.ಆರ್. ರಾಜಾಜಿನಗರ ಇಂಡಿಪೆಂಡೆಂಟ್ ಪಿಯು ಕಾಲೇಜು: 4ನೇ `ಎಂ~ ಬ್ಲಾಕ್, ಡಾ.ರಾಜ್‌ಕುಮಾರ್ ರಸ್ತೆ, ರಾಜಾಜಿನಗರ. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ. ಅಧ್ಯಕ್ಷತೆ- ಕಾಲೇಜಿನ ಪ್ರಾಂಶುಪಾಲರಾದ ಸರಸ್ವತಿ ಟಿ. ಅತಿಥಿ- ಎಂಇಎಸ್ ವಿದ್ಯಾಸಾಗರ ಕಾಲೇಜಿನ ಪ್ರಾಂಶುಪಾಲ ಕೆ. ಬಾಲಸುಬ್ರಹ್ಮಣ್ಯ. ಬೆಳಿಗ್ಗೆ 10.ದಾನಪ್ರಕಾಶ ಎನ್.ತಿಮ್ಮಪ್ಪ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಾಟ್ರಸ್ಟ್: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಾಂಸ್ಕೃತಿಕ ಸೌರಭ ಮತ್ತು ಪ್ರತಿಭಾ ಪುರಸ್ಕಾರ. ಸೀತಾ ಡಿ. ಛಪ್ಪರ, ಗೀತಾ ಶ್ರೀನಾಥ್ ಶಿಷ್ಯವೃಂದದಿಂದ ಜಾನಪದ ನೃತ್ಯ ರೂಪಕ, ಸಾಧನಾ ವನಿತಾ ಮಂಡಳಿ ಅವರಿಂದ ಗೀತ ರೂಪಕ. ಆರ್. ಸೋನಾಲ್, ಸಿ.ಚಿನ್ಮಯಿ, ಎಂ.ಬಿಂದು ಯಾದವ್, ವರ್ಷ ಕುಮಾರ ಅವರಿಂದ ಭರತನಾಟ್ಯ. ಮಧ್ಯಾಹ್ನ 3.ಸಂಜೆ 6ಕ್ಕೆ ವಾರ್ಷಿಕೋತ್ಸವದಲ್ಲಿ ಸಾನ್ನಿಧ್ಯ  ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ. ಉದ್ಘಾಟನೆ: ಗುರುಬಸವ ಸ್ವಾಮೀಜಿ. ಅಧ್ಯಕ್ಷತೆ: ಮಾಜಿ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್. ಗೀತಾ ಶೇಷಾದ್ರಿ ರಚಿಸಿದ ಗೀತಗುಚ್ಛ (ಕವನ ಸಂಕಲನ), ಬದುಕಿನ ಆಟ (ಕಿರುನಾಟಕಗಳು) ಕೃತಿ ಲೋಕಾರ್ಪಣೆ- ಸಾಹಿತಿ ಲೀಲಾದೇವಿ ಆರ್. ಪ್ರಸಾದ್. ಅತಿಥಿಗಳು- ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಸುಗಮ ಸಂಗೀತ ಗಾಯಕ ಶಶಿಧರ ಕೋಟೆ, ವಕೀಲ ಬಿ.ಪಿ. ಪುಟ್ಟಸಿದ್ಧಯ್ಯ, ಗಂಗಾಧರಯ್ಯ, ಸಿ. ಬಾಲಕೃಷ್ಣ.

ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಹಾಗೂ ಸಾಯಿ ಗೋಲ್ಡ್ ಪ್ಯಾಲೆಸ್: ಪುರಭವನ, ಜೆ.ಸಿ.ರಸ್ತೆ. ಸುಗಮ ಸಂಗೀತ ಹಾಗೂ ವಾದ್ಯ ಸಂಗೀತ ರಸಸಂಜೆ ಮತ್ತು `ಆದರ್ಶ ರತ್ನ~ ಪ್ರಶಸ್ತಿ ಪ್ರದಾನ. ಉದ್ಘಾಟನೆ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ. ಅಧ್ಯಕ್ಷತೆ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ. ಅತಿಥಿ: ಸಂಸದ ಎನ್. ಚಲುವರಾಯಸ್ವಾಮಿ, ಶಾಸಕ ಸಿ.ಎಸ್. ಪುಟ್ಟರಾಜು, ಹಿರಿಯ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ, ಕವಿ ಡಾ. ದೊಡ್ಡರಂಗೇಗೌಡ. ಸಂಜೆ 5.30.ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ `ಆದರ್ಶ ರತ್ನ~ ಪ್ರಶಸ್ತಿ ಪ್ರದಾನ. ಅಭಿನಂದನೆ- ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ. ಆದರ್ಶ ವಾರ್ಷಿಕ ಪ್ರಶಸ್ತಿ ಪುರಸ್ಕಾರ- ಗಿಟಾರ್ ವಾದಕ ಬಿ. ಸುದರ್ಶನ್. ಸಂಜೆ 7.ರೇವಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್‌ಮೆಂಟ್: ಕಾಲೇಜು ಆವರಣ. ಅತಿಥಿ: ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ಅಧ್ಯಕ್ಷತೆ: ರೇವಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ. ಶ್ಯಾಮ ರಾಜು. ಬೆಳಿಗ್ಗೆ 10.ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್: ರಾಷ್ಟ್ರೀಯ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲಾ ಆವರಣ, ಟಾಟಾ ಸಿಲ್ಕ್ ಫಾರಂ, ತ್ಯಾಗರಾಜನಗರ. ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಉಚಿತ ಸಮವಸ್ತ್ರ ವಿತರಣೆ. ಉದ್ಘಾಟನೆ- ಬಿಬಿಎಂಪಿ ಸದಸ್ಯ ಎನ್.ಆರ್. ರಮೇಶ್. ಮಧ್ಯಾಹ್ನ 1.30.ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ: ಗಾಂಧಿ ಭವನ, ಕುಮಾರ ಪಾರ್ಕ್. `ಮಂಗಳೂರು ಹೋಂ ಸ್ಟೇ ಪ್ರಕರಣ: ಮದ್ಯ ಹಾಗೂ ಮಾದಕ ವಸ್ತುಗಳ ಪಾತ್ರ~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ- ಡಾ.ಎಂ. ಚಿದಾನಂದ ಮೂರ್ತಿ, ವಿಚಾರ ಮಂಡನೆ: ಹೃದಯ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಹಿರಿಯ ವಕೀಲೆ ಪ್ರಮಿಳಾ ನೇಸರ್ಗಿ, ಪತ್ರಕರ್ತ ಅರಕೆರೆ ಜಯರಾಮ. ಅತಿಥಿಗಳು- ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ. ಅಧ್ಯಕ್ಷತೆ- ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ. ಶ್ರೀನಿವಾಸಯ್ಯ. ಬೆಳಿಗ್ಗೆ 9.30.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಸಾಹಿತ್ಯ ಅಕಾಡೆಮಿ: ಕನ್ನಡ ಭವನ, ಜೆ.ಸಿ.ರಸ್ತೆ. ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ. ಉದ್ಘಾಟನೆ- ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ. ಅಧ್ಯಕ್ಷತೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು. ಬೆಳಿಗ್ಗೆ 11. ಬಹುಭಾಷಾ ಕವಿಗೋಷ್ಠಿ ಉದ್ಘಾಟನೆ- ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ. ಅಧ್ಯಕ್ಷತೆ ಡಾ.ಎಚ್.ಎಸ್. ವೆಂಕಟೇಶಮೂರ್ತಿ. ಸಂಜೆ 4.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10ಕ್ಕೆ ಜಾನಪದ ವೈವಿಧ್ಯ. ಬೂದ್ಯಪ್ಪ ಮತ್ತು ತಂಡದಿಂದ ಡೊಳ್ಳು ಕುಣಿತ. ಸವಿತಾ ಬೀರ್‌ಕುನ್ನಯ್ಯ ಹಾಗೂ ತಂಡದಿಂದ ಪೂಜಾ ಕುಣಿತ. ನಾಗಚಂದ್ರಿಕಾ ಭಟ್ ಹಾಗೂ ತಂಡದಿಂದ ಭಾವಗೀತೆ ಗಾಯನ. ಮಧ್ಯಾಹ್ನ 2.30ರಿಂದ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ತಂಡದಿಂದ ಜನಪದ ಗೀತಗಾಯನ.ಪೈ ಗ್ರೂಪ್ ಆಫ್ ಹೋಟೆಲ್ಸ್: `ದಿ ಪ್ರೆಸಿಡೆಂಟ್ ಹೋಟೆಲ್~, ಡಯಗ್ನಲ್ ರಸ್ತೆ, 3ನೇ ಹಂತ, ಜಯನಗರ. ಸ್ವಯಂಪ್ರೇರಿತ ರಕ್ತದಾನ ಶಿಬಿರ. ಬೆಳಿಗ್ಗೆ 10.ಆಂಧ್ರ ಬ್ಯಾಂಕ್: ದೇವತಾ ಮ್ಯಾನ್‌ಶನ್, ನಂ.26, 5ನೇ ಮುಖ್ಯರಸ್ತೆ, ಗಾಂಧಿನಗರ. ಗಾಂಧಿನಗರ ಶಾಖೆ ಉದ್ಘಾಟನೆ- ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಬಿ.ಎ. ಪ್ರಭಾಕರ್. ಅತಿಥಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಭಾಗದ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್. ಬೆಳಿಗ್ಗೆ 10.ಎರ್.ಎನ್. ಶೆಟ್ಟಿ ಟ್ರಸ್ಟ್: ಕಾಲೇಜು ಆವರಣ, ಚನ್ನಸಂದ್ರ. `ಪರ್ವ~ ಇಂಟರ್ ಕಾಲೇಜು ಫೆಸ್ಟ್. ಅತಿಥಿಗಳು- ಗಾಯಕ ಶಿವಮೊಗ್ಗ ಸುಬ್ಬಣ್ಣ, ನಟ ಅರುಣ್ ಸಾಗರ್, ವಿಷ್ಣು ಪ್ರಸನ್ನ, ಅಧ್ಯಕ್ಷತೆ-ಡಾ.ಆರ್.ಎನ್. ಶೆಟ್ಟಿ. ಬೆಳಿಗ್ಗೆ 9.15.ಧಾರ್ಮಿಕ ಕಾರ್ಯಕ್ರಮಗಳು

ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಕುಚಲಾಂಬಾ ಸಾಂಸ್ಕೃತಿಕ ಮಂದಿರ. ಕಮಲ ಶ್ರೀನಿವಾಸ್ ಮತ್ತು ಪ್ರೊ. ಅಶ್ವತ್ಥನಾರಾಯಣ ಅವರಿಂದ `ರಾಷ್ಟ್ರಕವಿ ಕುವೆಂಪು ಕಂಡ ಭಾರತ ಮಹಾದರ್ಶನ~ ಕುರಿತು ಪ್ರವಚನ. ಸಂಜೆ 6.30.ಶಂಕರ ಜಯಂತಿ ಮಂಡಲಿ: ಶಂಕರಕೃಪಾ, ನಂ.45, ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಮಂಜುನಾಥ ಭಟ್ ವಿನಾಯಕ ಅವರಿಂದ `ಛಾಂದೋಗ್ಯೋಪನಿಷತ್~ ಕುರಿತು ಪ್ರವಚನ. ಸಂಜೆ 6.30.ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾಕ್ಷೇತ್ರ 21ನೇ ಮುಖ್ಯರಸ್ತೆ, 7ನೇ ಕ್ರಾಸ್, ಜೆ.ಪಿ. ನಗರ 2ನೇ ಕ್ರಾಸ್. ಭಜನೆ ಕಾರ್ಯಕ್ರಮ. ಸಂಜೆ 6.15.ಬೆಂಗಳೂರು ಗಾಯನ ಸಮಾಜ: ಕೃಷ್ಣರಾಜೇಂದ್ರ ರಸ್ತೆ. ಆನೂರ್ ಅನಂತಕೃಷ್ಣ ಶರ್ಮಾ ಮತ್ತು ತಂಡದವರಿಂದ ಲಯ-ಲಾವಣ್ಯ. ಸಂಜೆ 6.ವಚನ ಜ್ಯೋತಿ ಬಳಗ: ಎಚ್.ಬಿ.ಸಾವಿತ್ರ-ಡಾ ಎಸ್. ಚನ್ನಬಸಪ್ಪನವರ ಸ್ವಗೃಹ, 9ನೇ `ಎ~ ಮುಖ್ಯರಸ್ತೆ, 5ನೇ ತಿರುವು, ಹಂಪಿನಗರ. ಪ್ರೊ. ಎಲ್.ಆರ್.ಶಿವಕುಮಾರ್ ಅವರಿಂದ `ಅನುಭಾವದಡಿಗೆಯ ಮಾಡಿ ಅದಕನುಭಾವಿಗಳು ಬಂದು ನೀವೆಲ್ಲ ಕೂಡಿ~ ಕುರಿತು ಉಪನ್ಯಾಸ. ಸಂಜೆ 6.ಗಾಂಧಿ ಸಾಹಿತ್ಯ ಸಂಘ: 8ನೇ ಕ್ರಾಸ್, ಮಲ್ಲೇಶ್ವರ. `ಸಂಸ್ಕೃತ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳು~ ವಿಷಯದ ಕುರಿತು ಡಾ. ಗಣೇಶ್ ಅವಧಾನಿಗಳಿಂದ ಉಪನ್ಯಾಸ. ಸಂಜೆ 6.30.ರಾಮಕೃಷ್ಣ ಧ್ಯಾನ ಮಂದಿರ: 26ನೇ ಅಡ್ಡರಸ್ತೆ, ಕಬ್ಬನ್‌ಪೇಟೆ, ಧ್ಯಾನ ಮತ್ತು ಪ್ರವಚನ. ಸಂಜೆ 5.30.ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಕಾಶಿ ವಿಶ್ವನಾಥ ದೇವಸ್ಥಾನ, 4ನೇ ಕ್ರಾಸ್, ರಿಂಗ್ ರಸ್ತೆ, ಬಿ.ಚನ್ನಸಂದ್ರ. ಚಂದ್ರೇಶಾನಂದಜಿ ಅವರಿಂದ ಶಿವಾನಂದ ಲಹರಿ ಸ್ತೋತ್ರ ಕುರಿತು ಉಪನ್ಯಾಸ. ಸಂಜೆ 6.ವಿ.ಎಸ್. ಕೃಷ್ಣಯ್ಯರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ. ಅಧ್ಯಕ್ಷತೆ-ಗಾಂಧಿ ಸ್ಮಾರಕ ನಿಧಿಯ ಹೋ. ಶ್ರೀನಿವಾಸಯ್ಯ, ಅತಿಥಿಗಳು: ಮಾಜಿ ಸಚಿವ ಪಿ.ಜಿ. ಆರ್. ಸಿಂಧ್ಯಾ, ಮೇಯರ್ ಡಿ. ವೆಂಕಟೇಶ್ ಮೂರ್ತಿ, ಸಚಿವರಾದ ಎಸ್. ಸುರೇಶ್ ಕುಮಾರ್, ಸೋಮಣ್ಣ. ಬೆಳಿಗ್ಗೆ 10.30.

 

ಇಂದು `ಶೋಭಾಯಾತ್ರೆ~
ಅನೇಕ ರಂಗತಂಡ ಸೋಮವಾರ ಶೋಭಾಯಾತ್ರೆ ನಾಟಕ ಪ್ರದರ್ಶನ ಆಯೋಜಿಸಿದೆ.  (ಮೂಲ: ಷಫಾತ್‌ಖಾನ್).

ತಮ್ಮದಲ್ಲದ ವ್ಯಕ್ತಿತ್ವ, ವಿಚಾರ ವಿಶೇಷಗಳನ್ನು ತಮ್ಮದೇ ಎಂದು ಜಗತ್ತಿಗೆ ತೋರಿಸಿಕೊಳ್ಳುವ ಜನಗಳ ಬದುಕು! ಸಾರ್ವಜನಿಕ ಬದುಕಿನಲ್ಲಿ, ಕಾರ್ಪೊರೇಟ್ ರಂಗದಲ್ಲಿ, ಸರಕಾರಿ ಕಚೇರಿಗಳಲ್ಲಿ, ರಾಜಕೀಯ ಕ್ಷೇತ್ರದ ಗಣ್ಯರು ಗಾಂಧಿ, ನೆಹರು, ಸುಭಾಷ್ ಚಂದ್ರ ಬೋಸ್, ವಿವೇಕಾನಂದ. ಬುದ್ಧ, ಮಹಾವೀರ ಮುಂತಾದವರ ಹೆಸರು ಹೇಳುತ್ತಾ ಹಾಗೂ ಅವರ ವಿಚಾರಧಾರೆ ಬೋಧಿಸುತ್ತಾ... ತಾವೂ ಅವರಂತೆಯೇ ಎಂಬ ಮುಖವಾಡ ಧರಿಸಿಕೊಂಡು ನಡೆಸುವ ಹೊಲಸು ಬದುಕಿನ ಶೋಭಾಯಾತ್ರೆಯನ್ನು ನಾವೆಲ್ಲರೂ ನೋಡುತ್ತಲೇ ಇದ್ದೇವೆ ಎಂಬುದು ನಿರ್ದೇಶಕ ರಾಜೇಂದ್ರ ಕಾರಂತ್ ಅವರ ಅಭಿಪ್ರಾಯ. ಈ ಕಥಾನಕವನ್ನು ರಂಗದ ಮೇಲೆ ತಂದಿದ್ದಾರೆ. ನಾಟಕ ಭ್ರಮೆ ವಾಸ್ತವ, ನಿಜ -ಸುಳ್ಳು, ಸ್ವಪ್ನ ಜಾಗ್ರತ ಅವಸ್ತೆಗಳ ನಡುವೆ ನಡೆಯುವ ಮನುಷ್ಯನ ಹಿಂಸಾಪ್ರವೃತ್ತಿಯ ಶೋಭಾಯಾತ್ರೆಯ ನಡುವೆಯೂ ನಾಟಕ ಹೊಸ ಆಶೋತ್ತರಗಳನ್ನು ಅರಸುತ್ತದೆ.ಸ್ಥಳ: ಎಡಿಎ ರಂಗ ಮಂದಿರ, ಜೆ.ಸಿ.ರಸ್ತೆ. ಸಂಜೆ 7. ಟಿಕೆಟ್ ದರ 40 ರೂಪಾಯಿ. ಮಾಹಿತಿಗೆ: 94480 50950.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.