ಬುಧವಾರ, ಮೇ 19, 2021
27 °C

ನಗರದಲ್ಲಿ ಇಂದು ಏಪ್ರಿಲ್ 22, ಭಾನುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ: ಸೆನೆಟ್ ಸಭಾಂಗಣ, ದ ಕ್ಯಾಪಿಟಲ್ ಹೋಟೆಲ್, ರಾಜಭವನ ರಸ್ತೆ. ಸಂಸ್ಥಾಪಕರ ದಿನಾಚರಣೆ. ಉದ್ಘಾಟನೆ-ಸಚಿವ ಉಮೇಶ್ ವಿ.ಕತ್ತಿ. ಅಧ್ಯಕ್ಷತೆ-ಕೃಷಿ ಇಲಾಖೆಯ ಕಾರ್ಯದರ್ಶಿ ಡಾ.ಬಾಬುರಾವ್ ಮುಡಬಿ. ಅತಿಥಿಗಳು-ಕರ್ನಾಟಕ ಕೃಷಿ ಮಿಷನ್‌ನ ಡಾ.ಎಸ್.ಎ.ಪಾಟೀಲ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾ. ಬೆಳಿಗ್ಗೆ 9.30.



ದಿ ಗ್ರೀನ್ ಪಾತ್: ದಿ ಗ್ರೀನ್ ಪಾತ್ ಸಾವಯವ ಅಂಗಡಿ, ಡಾಲರ್ಸ್‌ ಕಾಲೋನಿ, ಆರ್.ಎಂ.ವಿ.ಕ್ಲಬ್, ಡಬಲ್ ರೋಡ್, ಆರ್.ಎಂ.ವಿ. ಎರಡನೇ ಹಂತ. ಭೂಮಿ ಹಬ್ಬ-ಹಲಸಿನ ಆಹಾರ ಮೇಳ ಮತ್ತು ಸಾವಯವ ಸಂತೆ. ಮುಖ್ಯ ಅತಿಥಿಗಳು-ಹೈಕೋರ್ಟಿನ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ. ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ನಾರಾಯಣಗೌಡ, ನಟಿ ಭಾವನಾ, ಸಾವಯವ ಕೃಷಿಕ ಎಲ್.ನಾರಾಯಣ ರೆಡ್ಡಿ. ಸಾಂಸ್ಕೃತಿಕ ಕಾರ್ಯಕ್ರಮ-ಕಥಕ್ ನೃತ್ಯ, ಹಸಿರು ಗೀತೆಗಳು, ತಮಟೆವಾದನ. ಪ್ರಸ್ತುತಿ-ನಂದಿನಿ ಕೆ ಮೆಹ್ತಾ ಮತ್ತು ಕೆ.ಮುರಳಿ, ಮೋಹನ್‌ರವರ ನಾದಂ ತಂಡ. ಬೆಳಿಗ್ಗೆ 11.



ಬೆಂಗಳೂರು ಅಯೋಧ್ಯಾನಗರದ ಶಿವಾಚಾರ ವೈಶ್ಯ (ನಗರ್ತ) ಸಮಿತಿ: ಜೆಎಸ್‌ಎಸ್ ಸಭಾಂಗಣ (ಶಿವರಾತ್ರೀಶ್ವರ ಕೇಂದ್ರ), 8 ನೇ ಬಡಾವಣೆ, ಜಯನಗರ. ಸಮಿತಿಯ 60 ನೇ ವಾರ್ಷಿಕೋತ್ಸವ ಸಮಾರಂಭ. ಆಕಾಶವಾಣಿ ಕಲಾವಿದರಾದ ಕುಮಾರ ಕಣವಿ ಮತ್ತು ತಂಡದವರಿಂದ ವಚನ ಸಂಗೀತ ಕಾರ್ಯಕ್ರಮ. ಸಂಜೆ 4.15. ಉದ್ಘಾಟನೆ-ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ್.ವಿ. ಪಾಟೀಲ್. ಶಿವಸ್ತುತಿ ಪುಸ್ತಕ ಬಿಡುಗಡೆ-ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್. ಅತಿಥಿಗಳು-ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ನಿರ್ದೇಶಕ ಡಾ.ಸಿ.ಸೋಮಶೇಖರ್, ಬಿಎಎಸ್‌ವಿ (ನಗರ್ತ) ಸಮಿತಿ ಮಾಜಿ ಅಧ್ಯಕ್ಷ ಎನ್.ಪುಟ್ಟರುದ್ರ, ಕರ್ನಾಟಕ ರಾಜ್ಯ ಉಗ್ರಾಣ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಡಿ.ಬಸವರಾಜ್, ಬಿಎಎಸ್‌ವಿ (ನಗರ್ತ) ಸಮಿತಿ ಮಾಜಿ ಅಧ್ಯಕ್ಷ ಕೆ.ರುದ್ರಪ್ಪ. ಅಧ್ಯಕ್ಷತೆ-ಬಿಎಎಸ್‌ವಿ (ನಗರ್ತ) ಸಮಿತಿ ಅಧ್ಯಕ್ಷ ಪಿ.ವಿಜಯಕುಮಾರ್. ಸಂಜೆ 5.30.



ಶರಣರ ಬಳಗ: ಸಿದ್ದಲಿಂಗೇಶ್ವರ ಸಮುದಾಯ ಭವನ, 16 ನೇ ಮುಖ್ಯರಸ್ತೆ, ಬಿಟಿಎಂ 2 ನೇ ಹಂತ. ಬಸವೇಶ್ವರ ಜಯಂತಿ. ಉಪನ್ಯಾಸ-ಶಿವಬಸವ ಸೇನೆ ಕಾಯಾಧ್ಯಕ್ಷ ಎಸ್.ಪಿನಾಕಪಾಣಿ. ವಿಷಯ-ಜನಪದದಲ್ಲಿ ಬಸವಣ್ಣ. ಅತಿಥಿಗಳು-ಜನಪದ ಗಾಯಕ ಟಿ.ತಿಮ್ಮೇಶ್, ಕನ್ನಡ ಶ್ರೀ ಸಾಮಾನ್ಯರ ಕೂಟದ ಶ್ರ.ದೇ.ಪಾರ್ಶ್ವನಾಥ್. ಅಧ್ಯಕ್ಷತೆ-ಶರಣರ ಬಳಗದ ಅಧ್ಯಕ್ಷ ಶಕುಂತಲ ಜಯದೇವ್. ಸಂಜೆ 4.30.



ಜೆಸಿಇ ಇಂಡಿಯಾ: ಕಬ್ಬನ್ ಉದ್ಯಾನವನದ ಗ್ರಂಥಾಲಯದ ಹತ್ತಿರ. `ಇರುವುದೊಂದೇ ಭೂಮಿ, ಬನ್ನಿ ಸಂರಕ್ಷಿಸೋಣ~ - ಭೂಮಿ ದಿನ ಆಚರಣೆ. ಒಂದು ಕಿಲೋ ಮೀಟರ್‌ಗಿಂತ ಉದ್ದವಾದ ಕಾಟನ್ ಬ್ಯಾನರ್ ಪ್ರದರ್ಶನ. ಉದ್ಘಾಟನೆ-ಪೊಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿ. ಅತಿಥಿ-ಶಾಸಕರಾದ ನರೇಂದ್ರಬಾಬು ಹಾಗೂ ದಿನೇಶ್ ಗುಂಡೂರಾವ್. ಬೆಳಿಗ್ಗೆ 8.



ಪ್ರೇರಣಾ: ಡಿಸೈರ್ ಸೊಸೈಟಿ, ನಂ.35, ಜಂಬೂ ಸವಾರಿ ದಿಣ್ಣೆ, 8 ನೇ ಹಂತ, ಜೆ.ಪಿ.ನಗರ. ವಾರ್ಷಿಕೋತ್ಸವ ಸಮಾರಂಭ. ಅತಿಥಿಗಳು-ನಟ ರಮೇಶ್ ಭಟ್, ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನ ಕಾರ್ಯನಿರ್ವಾಹಕ ಪ್ರಾಧ್ಯಾಪಕ ಎಂ.ಪಾಂಡುರಂಗಾಚಾರ್, ಎಸ್‌ಎಸ್‌ಎಂಆರ್‌ವಿ ಪದವಿ ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಆರ್.ಎನ್.ಸುಬ್ಬಾರಾವ್, ಎಸ್‌ಎಸ್‌ಎಂಆರ್‌ವಿ ಪದವಿ ಕಾಲೇಜು ಮುಖ್ಯ ಗ್ರಂಥಪಾಲಕ ಎಂ.ವಿ.ದಿನೇಶ್. ಅಧ್ಯಕ್ಷತೆ-ಡಿಸೈರ್ ಸೊಸೈಟಿ ಉಪಾಧ್ಯಕ್ಷ ಇ.ಎಂ.ಸುಭಾಷ್. ಬೆಳಿಗ್ಗೆ 11.



ಬಸವೇಶ್ವರ ಸೇವಾ ಸಮಿತಿ: ಮೂಡಲಪಾಳ್ಯ ವೃತ್ತ. ಶಿವಕುಮಾರ ಸ್ವಾಮೀಜಿಗೆ ಗುರುವಂದನಾ ಕಾರ್ಯಕ್ರಮ. ಸಾನ್ನಿಧ್ಯ-ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ. ಉದ್ಘಾಟನೆ-ಶಾಸಕ ಬಿ.ಎಸ್.ಯಡಿಯೂರಪ್ಪ. ಅಧ್ಯಕ್ಷತೆ-ಸಚಿವ ವಿ.ಸೋಮಣ್ಣ. ಭಾವಚಿತ್ರ ಅನಾವರಣ-ಶಾಸಕ ಪ್ರಿಯ ಕೃಷ್ಣ. ಅತಿಥಿಗಳು-ಸಚಿವರಾದ ಆರ್.ಅಶೋಕ, ಬಸವರಾಜ್ ಬೊಮ್ಮಾಯಿ. ಬೆಳಿಗ್ಗೆ 10.



ಉದಯಭಾನು ಕಲಾಸಂಘ ಹಾಗೂ ನಾರಾಯಣ ನೇತ್ರಾಲಯ: ಸಾಂಸ್ಕೃತಿಕ ಭವನ, ಗವಿಪುರ ಸಾಲು ಛತ್ರಗಳ ಎದುರು, ಕೆಂಪೇಗೌಡನಗರ. ಅವಕಾಶ ವಂಚಿತರು ಹಾಗೂ ಅಶಕ್ತರಿಗಾಗಿ ಉಚಿತ ಕಣ್ಣು ಪರೀಕ್ಷೆ-ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ. ಉದ್ಘಾಟನೆ-ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಎಚ್.ಆರ್.ಸುರೇಶ್. ಅತಿಥಿಗಳು-ಕಮ್ಯೂನಿಟಿ ಸೆಂಟರ್ ಶಿಕ್ಷಣ ಸಂಸ್ಥೆಗಳ ಸಮೂಹದ ಚಿಕ್ಕಯ್ಯ. ಬೆಳಿಗ್ಗೆ 10.



ಪ್ರಜಾಪತಿ ಬ್ರಹ್ಮಕುಮಾರಿಯರ ಈಶ್ವರೀಯ ವಿಶ್ವ ವಿದ್ಯಾಲಯ: ಸಂಗಮತೀರ್ಥ, ಬ್ರಹ್ಮಕುಮಾರೀಸ್, ನಂ.1103/1, ಓಟಿಸಿ ರಸ್ತೆ. `ವರ್ತಮಾನದಲ್ಲಿ ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆ~ ಕುರಿತು ವಿಚಾರ ಸಂಕಿರಣ. ಅಧ್ಯಕ್ಷತೆ-ಏಜೀಸ್ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೆ.ಶ್ರೀಕಂಠಯ್ಯ. ಅತಿಥಿಗಳು-ವಿನಾಯಕ ಪ್ರೌಢಶಾಲೆ ಅಧ್ಯಕ್ಷ ಜಿ.ಶಂಕರಪ್ಪ, ಟೆಕ್ಸಟೈಲ್ಸ್ ಕೋ ಬ್ಯಾಂಕ್‌ನ ಅಧ್ಯಕ್ಷ ಉಮಾಶಂಕರ್, ರೇಷ್ಮೆ ಸೀರೆ ತಯಾರಕ ಶ್ರೀಕಂಠಪ್ಪ. ಬೆಳಿಗ್ಗೆ 11.



ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಫೇಡರೇಷನ್ (ಸಿಐಟಿಯು): ವರದಾಚಾರ್ ಮೆಮೋರಿಯಲ್ ಹಾಲ್, ನಟರಾಜ ಥಿಯೇಟರ್ ಹಿಂಭಾಗ, ಶೇಷಾದ್ರಿಪುರಂ. ಪೌರ ಕಾರ್ಮಿಕರ ರಾಜ್ಯ ಸಮಾವೇಶ. ಬೆಳಿಗ್ಗೆ 11.



ದಿ ಜಯನಗರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್: ಬಿ.ವೆಂಕಟರಾವ್ ಎಸ್.ಸಜ್ಜನ್‌ರಾವ್ ಮರಾಠ ವಿದ್ಯಾರ್ಥಿ ನಿಲಯ, ನಂ.4, ಬಸವೇಶ್ವರ ದೇವಸ್ಥಾನ ರಸ್ತೆ, ಶಂಕರಪುರ. ವಜ್ರ ಮಹೋತ್ಸವ ಸಮಾರಂಭ. ಉದ್ಘಾಟನೆ-ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ. ಸ್ಮರಣ ಸಂಚಿಕೆ ಬಿಡುಗಡೆ-ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ.ಅರ್ಕೇಶ್. ಅಧ್ಯಕ್ಷತೆ-ದಿ ಜಯನಗರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಅಧ್ಯಕ್ಷ ಬಿ.ಆರ್.ವಾಸುದೇವ್. ಅತಿಥಿಗಳು-ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಉಮೇಶ್. ಬೆಳಿಗ್ಗೆ 11.30.



ಭಾರತೀಯ ವೈದ್ಯಕೀಯ ಸಂಸ್ಥೆ ಮತ್ತು ಭಾರತದ ಹೃದಯ ರೋಗ ತಜ್ಞರ ಸಂಸ್ಥೆ: ಐಎಂಎ ಸಭಾಂಗಣ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ. ಸಾರ್ವಜನಿಕ ಆರೋಗ್ಯದ ಬಗ್ಗೆ ವೈದ್ಯಕೀಯ ಉಪನ್ಯಾಸ. ಉಪನ್ಯಾಸಕರು-ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ನಿರ್ದೇಶಕ ಡಾ.ರಾಮಮೂರ್ತಿ ಬಿಂಗಿ. ದತ್ತಿ ಉಪನ್ಯಾಸ-ಕೊಲಂಬಿಯಾ ಏಷ್ಯ ಆಸ್ಪತ್ರೆಯ ಡಾ.ಎಚ್.ವಿ.ಶಿವರಾಮ್. ವಿಷಯ-ತೂಕ ಕಡಿಮೆ ಮಾಡಿಕೊಳ್ಳುವ ವಿಧಾನಗಳು. ಸಂಜೆ 6.



ಭಾರತೀಯ ಸಮಾಜ ಸೇವಾ ಟ್ರಸ್ಟ್: ಅಖಿಲ ಕರ್ನಾಟಕ ಮಕ್ಕಳ ಕೂಟ ಸಭಾಂಗಣ, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ವಿಶ್ವಭೂಮಿ ದಿನಾಚರಣೆ. ಅಧ್ಯಕ್ಷತೆ- ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ. ಉದ್ಘಾಟನೆ-ಪರಿಸರ ತಜ್ಞ ಡಾ.ಅ.ನ.ಯಲ್ಲಪ್ಪರೆಡ್ಡಿ, ಪರಿಸರವಾದಿ ಶಿವಮಲ್ಲು. ಅತಿಥಿ-ಮಳೆ ನೀರು ಸಂರಕ್ಷಣಾ ತಜ್ಞ ಪ್ರೊ.ಕೆ.ಪಾಂಡರಂಗಯ್ಯ, ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸಿದ್ದೇಗೌಡ, ಇನ್ನರ್‌ವೀಲ್ ಕ್ಲಬ್ ಆಫ್ ಬೆಂಗಳೂರು ಮಂಜುಳಾ ಜಗದೀಶ್, ಕನ್ನಡ ಕಟ್ಟೆ ಅಧ್ಯಕ್ಷ ಕೆ.ಎನ್.ಲಕ್ಷ್ಮಣಗೌಡ, ಅಖಿಲ ಕರ್ನಾಟಕ ಮಕ್ಕಳ ಕೂಟದ ಅಧ್ಯಕ್ಷ ಟಿ.ವಿ.ಮಾರುತಿ, ಅಖಿಲ ಕರ್ನಾಟಕ ಮಕ್ಕಳ ಕೂಟದ ಪ್ರಧಾನ ಕಾರ್ಯದರ್ಶಿ ಎ.ಆರ್.ಗೋಪಾಲ್. ಬೆಳಿಗ್ಗೆ 10.30.



ಮಾರುತಿ ಸುಜುಕಿ: ಲಿಯೋ ಮೋಟಾರ್ಸ್‌ ಪ್ರೈವೇಟ್ ಲಿಮಿಟೆಡ್, 100 ಫೀಟ್ ರಸ್ತೆ, ಇಂದಿರಾನಗರ. ಲಿಯೋ ಮೋಟಾರ್ಸ್‌ ಉದ್ಘಾಟನೆ. ಬ್ಯಾಂಕ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಎನ್.ಶೇಷಾದ್ರಿ. ಅತಿಥಿಗಳು-ಮಾರುತಿ ಸುಜುಕಿ ಇಂಡಿಯಾ ಲಿ. ಮುಖ್ಯ ಪ್ರಧಾನ ವ್ಯವಸ್ಥಾಪಕ ಪಾರ್ಥೋ ಬಂಜೇರಿ, ಪಿಇಎಸ್ ಸಂಸ್ಥೆಯ ಸಂಸ್ಥಾಪಕ ಎಂ.ಆರ್.ದೊರೆಸ್ವಾಮಿ ನಾಯ್ಡು, ಬ್ಯಾಂಕ್ ಆಫ್ ಇಂಡಿಯಾದ ವಿಭಾಗ ವ್ಯವಸ್ಥಾಪಕ ಚರಣ್ ಸಿಂಗ್. ಬೆಳಿಗ್ಗೆ 11.



ಅಂಬೇಡ್ಕರ್ ಯುವಸೇನೆ: ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ಬಸವೇಶ್ವರನಗರ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ. ಅಂಬೇಡ್ಕರ್ ಉತ್ಸವ. ಆರೋಗ್ಯ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ-ಸಚಿವ ವಿ.ಸೋಮಣ್ಣ. ಭಾವಚಿತ್ರಕ್ಕೆ ಮಾಲಾರ್ಪಣೆ-ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಸಿ.ಮೈಲಾರಪ್ಪ. ಅತಿಥಿಗಳು-ಬಿಬಿಎಂಪಿ ಸದಸ್ಯರಾದ ಗಂಗ ಭೈರಯ್ಯ, ಎಚ್.ರವೀಂದ್ರ, ಮಂಜುನಾಥ್, ಕೆ.ಉಮೇಶ್ ಶೆಟ್ಟಿ. ಬೆಳಿಗ್ಗೆ 10.30.



ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್: ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನಂ.49, ಅರಮನೆ ರಸ್ತೆ. ವಿಶ್ವ ಪರಂಪರೆ ದಿನಾಚರಣೆ. ಅತಿಥಿ-ರಾಮ್‌ಸನ್ಸ್ ಕಲಾ ಪ್ರತಿಷ್ಠಾನದ ಆರ್.ಜಿ.ಸಿಂಗ್. ಸಂಜೆ 5.30.



ಫಾರೆವರ್ ಮಾರ್ಕ್ ಮತ್ತು ದಿ ಮ್ಯಾನೇಜಮೆಂಟ್ ಆಫ್ ನೀಲಕಂಠ ಜ್ಯುವೆಲ್ಲರ್ಸ್‌: ನಂ.5, ರಿಚಮಂಡ್ ಪ್ಲಾಜಾ, ರಿಚಮಂಡ್ ರಸ್ತೆ. ಮಳಿಗೆ ಉದ್ಘಾಟನಾ ಕಾರ್ಯಕ್ರಮ. ಮಧ್ಯಾಹ್ನ 3.



ಸುನಂದಾ ಸಾಹಿತ್ಯ ವೇದಿಕೆ: ವಲ್ಲಭನಿಕೇತನ, ಶಿವಾನಂದ ವೃತ್ತ ಬಳಿ, ಮೆಲುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟನೆ-ಚಿತ್ರನಟ ಮಲ್ಲಿಕಾ ಪ್ರಸಾದ್. ಅಧ್ಯಕ್ಷತೆ-ಟಿ.ಪಿ.ಪ್ರಭುದೇವ್. ಬೆಳಿಗ್ಗೆ 10.30.



ಸಂತ ಆ್ಯಂಡ್ರಿವ್ಸ್ ಚರ್ಚ್: ಚರ್ಚಿನ ಆವರಣ, ಕಬ್ಬನ್ ರಸ್ತೆ. ಭೂಮಿ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ. ಬೆಳಿಗ್ಗೆ 11.



ಕನ್ನಡ ವೇದಿಕೆ-ಕರ್ನಾಟಕ: ಶಾಸಕರ ಭವನದ ಸಮ್ಮೇಳನ ಸಭಾಂಗಣ. ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರಿಗೆ ಸನ್ಮಾನ ಸಮಾರಂಭ. ಉದ್ಘಾಟನೆ-ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್. ಅಧ್ಯಕ್ಷತೆ-ಸಾಹಿತಿ ಭಗವಾನ್. ಪ್ರಸ್ತಾವನೆ-ಕನ್ನಡ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ. ಅತಿಥಿಗಳು-ಸಾಹಿತಿ ಹರಿಹರಪ್ರಿಯ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಶಿವರಾಮೇಗೌಡ, ವೇದಿಕೆಯ ಕಾಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ. ಬೆಳಿಗ್ಗೆ 11.



ಅಭಿಮಾನಿ ಬಳಗ ಸೇವಾ ಟ್ರಸ್ಟ್: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ನಂ.177/1, ಫ್ಲಾಟ್ ಫಾರಂ ರಸ್ತೆ, ರಾಜೀವ್‌ಗಾಂಧಿ ವೃತ್ತ ಹತ್ತಿರ, ಶೇಷಾದ್ರಿಪುರಂ. `ಡಾ.ರಾಜ್‌ಕುಮಾರ್ ಜೀವನ ಚರಿತ್ರೆಯ ಮಾಹಿತಿ ನೀಡುವ ಡಿವಿಡಿ ಬಿಡುಗಡೆ ಕಾರ್ಯಕ್ರಮ~. ಹಾಲುಜೇನು ದಂಪತಿ ಶ್ರೀರಾಮಕುಮಾರ್ ಮತ್ತು ಪದ್ಮಶ್ರೀ. ಅಧ್ಯಕ್ಷತೆ-ಅಭಿಮಾನಿ ಬಳಗ ಸೇವಾ ಟ್ರಸ್ಟ್‌ನ ಬೆಂ.ರಾ.ನವೀನ್‌ಕುಮಾರ್. ಅತಿಥಿಗಳು-ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಆರ್.ಮರಿಸ್ವಾಮಿ. ಬೆಳಿಗ್ಗೆ 11.



ಅಖಿಲ ಕರ್ನಾಟಕ ಮಕ್ಕಳ ಕೂಟ: ಶ್ರೀಮತಿ ಆರ್.ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ. ಅಮೃತ ಮಹೋತ್ಸವ ವರ್ಷ. `ನಿತ್ಯ ಜೀವನದಲ್ಲಿ ಆಯುರ್ವೇದದ ಪಾತ್ರ~ ಕುರಿತು ಉಪನ್ಯಾಸ- ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ. ಅತಿಥಿಗಳು-ಪ್ರೇರಣಾ ಮೋಟಾರ್ಸ್‌ ಪ್ರೈ.ಲಿ. ಪ್ರಧಾನ ವ್ಯವಸ್ಥಾಪಕ ಜಿ.ಆರ್.ಶ್ಯಾಂ ಪ್ರಸಾದ್. ಅಧ್ಯಕ್ಷತೆ-ಅಖಿಲ ಕರ್ನಾಟಕ ಮಕ್ಕಳ ಕೂಟದ ಅಧ್ಯಕ್ಷ ಟಿ.ವಿ.ಮಾರುತಿ. ಸಂಜೆ 4.



ಲೂಸಿಡ್ ಮೆಡಿಕಲ್ ಡಯಾಗ್ನೋಸ್ಟಿಕ್ ಕೇಂದ್ರ: ನಂ.46, 27 ನೇ ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ. ಜಯನಗರ. ಕೇಂದ್ರದ ಉದ್ಘಾಟನೆ-ಸಚಿವ ಆರ್.ಅಶೋಕ. ಅತಿಥಿಗಳು-ಸಚಿವ ಎಸ್.ಎ.ರಾಮದಾಸ್, ಜಿಇ ಹೆಲ್ತ್‌ಕೇರ್ ಅಧ್ಯಕ್ಷ ಟೆರ‌್ರಿ ಬ್ರೆಸೆನ್‌ಹ್ಯಾಮ್. ಬೆಳಿಗ್ಗೆ 10.



ಕಲರ್ ಹ್ಯಾಂಡ್ಸ್ ಮತ್ತು ಬ್ರೇನ್ ವೇವ್ಸ್ ಮೀಡಿಯಾ: 5 ನೇ ಅಡ್ಡರಸ್ತೆ, ಮಲ್ಲೇಶ್ವರಂ ವೃತ್ತ. ಅರ್ಥ ಡೆ ಕಲರ್ ಫೆಸ್ಟ್. ಅತಿಥಿಗಳು-ಸಚಿವ ಸುರೇಶ್ ಕುಮಾರ್, ಕಲಾವಿದ ಬಿ.ಜಿ.ಗುಜ್ಜಾರಪ್ಪ, ನಟಿ ಟೀನಾ ಪೊನ್ನಪ್ಪ. ಬೆಳಿಗ್ಗೆ 10.30.



ಕರ್ನಾಟಕ ಲೇಖಕಿಯರ ಸಂಘ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ನವಕರ್ನಾಟಕ ಪ್ರಕಾಶನದ ವನಿತಾ ಚಿಂತನ ಮಾಲೆಯ ಮೂರು ಕೃತಿಗಳ ಲೋಕಾರ್ಪಣೆ. ಅಧ್ಯಕ್ಷತೆ- ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ. ಕೃತಿಗಳ ಪರಿಚಯ-ಡಾ.ಡಿ.ಮಂಗಳಾ ಪ್ರಿಯದರ್ಶಿನಿ. ಅತಿಥಿಗಳು-ಸಾಹಿತಿ ನಾಗಮಣಿ ಎಸ್.ರಾವ್, ಡಾ.ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್, ಡಾ.ಗೀತಾ ಶೆಣೈ. ಬೆಳಿಗ್ಗೆ 10.



ಸಾಂಸ್ಕೃತಿಕ ಕಾರ್ಯಕ್ರಮ

ಜಂಗಮ ರಂಗ: ವಿಶ್ವಾಲಯ, ರಾಂ.ರಾಂ.ಆಶ್ರಮ, ರಾವುಗೋಡ್ಲು, ಕನಕಪುರ ರಸ್ತೆ, ಬೆಂಗಳೂರು ದಕ್ಷಿಣ. ಮಲೆಮಾದೇಶ್ವರ ಚರಿತ್ರೆ ಹಾಡುಗಾರಿಕೆ-ಕೊಳ್ಳೇಗಾಲ ತಾಲ್ಲೂಕಿನ ಹಾಡುಗಾರರಿಂದ. ಸಂಜೆ 7.



ಶ್ರೀ ರಾಮ ಲಲಿತಕಲಾ ಮಂದಿರ: 9 ನೇ ಮುಖ್ಯ ರಸ್ತೆ, ಬನಶಂಕರಿ 2 ನೇ ಹಂತ. ಅಭಯಾಂಬ ನವಾವರ್ಣ ಕೃತಿಗಳ ರೂಪಕ. ಭಾಗವಹಿಸುವ ಕಲಾವಿದರು-ವೀಣಾ ವಿದುಷಿ ಜಯಲಕ್ಷ್ಮಿ ಶೇಖರ್ ಮತ್ತು ವಿದ್ವಾನ್ ವಿ.ವಿ.ಚೆಲ್ಲಪ್ಪ ಮತ್ತು ವೃಂದ. ಸಂಜೆ 5.30.



ದಶಪ್ರಮಥಿ ಸಂಗೀತ ಸಭಾ: ಮಲ್ಲೇಶ್ವರಂ ರಾಮಮಂದಿರ, ವಂಶೀಧರ್ (ವೇಣುವಾದನ), ಎಂ.ಆರ್.ಶ್ರೀನಿಧಿ (ಪಿಟೀಲು) ಆರ್.ಅದಮ್ಯ (ಮೃದಂಗ), ಭಾರ್ಗವ ಹಾಲಂಬಿ (ಖಂಜಿರ). ಸಂಜೆ 5.30.



ಗಣಪತಿ ಸೇವಾ ಟ್ರಸ್ಟ್: ಶಾರದಾ ಕಾಲೋನಿ, ಬಸವೇಶ್ವರನಗರ, ಬೆಳಿಗ್ಗೆ 8ಕ್ಕೆ `ಅಖಂಡ ಪಾರಾಯಣ~. ಲಕ್ಷ್ಮಿ ಅನಂತನಾರಾಯಣ ಅವರಿಂದ `ವಿಷ್ಣು ಸಹಸ್ರನಾಮ ಮಹಿಮೆ~ ಕುರಿತು ಉಪನ್ಯಾಸ. ಮಧ್ಯಾಹ್ನ 12.30.



ಕಲಾತರಂಗ: 5ನೇ ಕ್ರಾಸ್, ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಕವಿನಮನದಲ್ಲಿ ಎಂ.ಎಸ್.ಮೂರ್ತಿ ಹಾಗೂ ಎ.ಎಸ್. ಮೂರ್ತಿ ಅವರಿಂದ ಕವನ ವಾಚನ. ಸಂಜೆ 7.



ಸುಚಿತ್ರ ಕಲಾಕೇಂದ್ರ: ಸುಚಿತ್ರ ಸಭಾಂಗಣ, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ, ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾ ತಜ್ಞ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ `ಯಕ್ಷಗಾನ ಕೋವಿದ ಪಾರ್ತಿಸುಬ್ಬ~ ವಿಷಯ ಕುರಿತು ಉಪನ್ಯಾಸ, ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯಿಂದ `ಕಂಸವಧೆ~ ಯಕ್ಷಗಾನ ಪ್ರಸಂಗ. ಸಂಜೆ 6.



ಹೊಂಬಾಳೆ ಪ್ರತಿಭಾರಂಗ: ರವೀಂದ್ರ ಕಲಾಕ್ಷೇತ್ರ ಜೆ.ಸಿ.ರಸ್ತೆ, `ಪ್ರತಿಭೋತ್ಸವ-15~ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಹೊಂಬಾಳೆ, ಉಪಾಸನಾ ಮತ್ತು ಪಂಚಾಮೃತದ ವಿದ್ಯಾರ್ಥಿಗಳಿಂದ ಸಮೂಹ ಗಾಯನ, ವಾದ್ಯ ಸಹಕಾರ-ರಾಜೀವ್ ಜೋಯಿಸ್, ಎಲ್.ಎನ್. ವಸಂತ್ ಕುಮಾರ್, ಆರ್.ಲೋಕೇಶ್, ವಿ.ವಾದಿ. ಸಂಜೆ 5.



ಶ್ರೀ ಶೇಷಾದ್ರಿಪುರಂ ರಾಮಸೇವಾ ಸಮಿತಿ: ರಾಷ್ಟ್ರಕವಿ ಕುವೆಂಪು ರಂಗಮಂದಿರ, ಶೇಷಾದ್ರಿಪುರಂ ಕಾಲೇಜು ಆವರಣ, ನಾಗಪ್ಪ ರಸ್ತೆ, ಶೇಷಾದ್ರಿಪುರಂ. 64ನೇ ಶ್ರೀ ರಾಮನವಮಿ ಸಂಗೀತೋತ್ಸವದಲ್ಲಿ ಹಿರೇಮಗಳೂರು ಕಣ್ಣನ್ ಅವರಿಂದ  ಶ್ರೀ ರಾಮಾಯಣದಲ್ಲಿನ ಸ್ವಾರಸ್ಯಕರವಾದ ಸಂಗತಿಗಳು~ ವಿಷಯದ ಕುರಿತು ಪ್ರವಚನ. ಬೆಳಿಗ್ಗೆ 10.15.



ಶ್ರೀ ವಾಣೀ ವಿದ್ಯಾ ಕೇಂದ್ರ: ಶಾಮವನ, ಸಿ. ಎ. ಸೈಟ್ ನಂ 1, 4 `ಬಿ~ ಮುಖ್ಯರಸ್ತೆ, 3ನೇ ಹಂತ, ಬಸವೇಶ್ವರ ನಗರ. ಶ್ರೀ ರಾಮನವಮಿ ಸಂಗೀತೋತ್ಸವದಲ್ಲಿ ಎಚ್.ಎನ್.ಮೀರಾ, ಎಂ.ಎಸ್.ಅನಂತಪದ್ಮನಾಭ ಅವರಿಂದ (ಗಾಯನ), ಪರಮಶಿವನ್ ಆರ್. (ಹಾರ್ಮೋನಿಯಂ), ಎಸ್.ನಟರಾಜಮೂರ್ತಿ (ಪಿಟೀಲು), ಅಚ್ಯುತ ಎನ್. ಹೊಸಹಳ್ಳಿ (ಮೃದಂಗ), ಸಾಯಿತೇಜಸ್ ಚಂದ್ರಶೇಖರ್ (ತಬಲ)  ಸಂಜೆ 6.30.



ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ: ಅತಿಥಿ ಕಲಾವಿದರು: ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ, ಮಹಾಲಕ್ಷ್ಮೀಪುರಂ. ತೋಟಿಮನೆ ಯಕ್ಷಸಪ್ತಮಿಯಲ್ಲಿ `ಶಬರಾರ್ಜುನ~ ಪೌರಾಣಿಕ ಪ್ರಸಂಗ. ಸಂಜೆ 6.



ಶ್ರೀ ಶಂಕರ ಜಯಂತಿ ಮಂಡಳಿ: ನಂ.45, ಶ್ರೀ ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ, ಸಂಜೆ 6ಕ್ಕೆ  ವೆಂಕಟಸುಬ್ಬಯ್ಯ ಅವರಿಂದ ಶ್ರೀ ಶಂಕರ ಜಯಂತಿ ಉತ್ಸವ ಉದ್ಘಾಟನೆ.  ಪ್ರೊ.ಎಸ್.ರಾಮಚಂದ್ರ ಶಾಸ್ತ್ರಿ ಅವರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ. ಸಂಜೆ 6.15.



 ಶ್ರೀ ರಾಮ ಸೇವಾ ಮಂಡಳಿ: ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು ಕೋಟೆ ಹೈಸ್ಕೂಲ್ ಆವರಣ. ಶ್ರೀರಾಮನವಮಿ ರಾಷ್ಟ್ರೀಯ ಸಂಗೀತೋತ್ಸವದಲ್ಲಿ  ಆರ್.ಕಾರ್ತಿಕ್ ನಾರಾಯಣನ್ ಮತ್ತು ತಂಡ. ಸಂಜೆ 5.15.



ಶ್ರೀ ರಾಮ ಕಲಾ ವೇದಿಕೆ: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ, `ನಾದ ನಮನ~ ಕಾರ್ಯಕ್ರಮದಲ್ಲಿ ಗಣಪತಿ ಭಟ್ (ಗಾಯನ), ವ್ಯಾಸಮೂರ್ತಿ ಕಟ್ಟಿ ( ಹಾರ್ಮೋನಿಯಂ), ಶಶಿಕಾಂತ್ ಕುಲಕರ್ಣಿ (ತಬಲಾ), ಮಹಾಲಕ್ಷ್ಮಿ ಶೆಣೈ (ಗಾಯನ), ದೀಪಕ್ ಜಿ.ಜಿ.ದೇಸಾಯಿ (ತಬಲಾ), ಕುಮಾರ್ ಪೃಥ್ವೀಶ ಕಾಂಬಳೆ (ತಬಲ ಸೊಲೊ). ಸಂಜೆ 5.15. 



ಸಂಗೀತ ಕೃಪಾ ಕುಟೀರ: ದತ್ತಾತ್ರೇಯ ದೇವಸ್ಥಾನ, ನಂ.59, 3ನೇ ಬ್ಲಾಕ್, 6ನೇ ಮುಖ್ಯರಸ್ತೆ, ತ್ಯಾಗರಾಜನಗರ, 28ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ-ಹಿರಿಯ ಸಾಹಿತಿ ಎಂ.ಚಿದಾನಂದ ಮೂರ್ತಿ, ಸನ್ಮಾನ-ಕರ್ನಾಟಕ ಸಂಗೀತ ಕಲಾವಿದರು ಕನಕಾ ಸ್ವಾಮಿ, ಹಿಂದೂಸ್ತಾನಿ ಗಾಯಕರು ರಾಘವೇಂದ್ರ ಗುಡಿ. ಸಂಜೆ 5.

ಕರ್ನಾಟಕ ಶಾಸ್ತ್ರೀಯ ಸಂಗೀತ ಸೌರಭದಲ್ಲಿ ಕನಕಾ ಸ್ವಾಮಿ (ಗಾಯನ), ಟಿ.ಎಸ್.ಕೃಷ್ಣಮೂರ್ತಿ (ಪಿಟೀಲು), ಅವಿನಾಶ್ ಕೃಷ್ಣ (ಮೃದಂಗ), ಭಾರದ್ವಾಜ್ ಆರ್.ಸಾತವಲ್ಲಿ (ಮೋರ್ಚಿಂಗ್) ಸಂಜೆ 7.



ದಿ.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ನಂ.6, ವಾಡಿಯಾ ಸಭಾಂಗಣ, ವಾಡಿಯಾ ರಸ್ತೆ, ಎಸ್. ಸೂರ್ಯಪ್ರಕಾಶ್ ಪಂಡಿತ್ ಅವರಿಂದ `ಆರ್ಟ್ ಅಂಡ್ ಲೈಫ್~ ಕುರಿತು ಉಪನ್ಯಾಸ. ಸಂಜೆ 6.15.



ಪೊನ್ನಯ್ಯ ಲಲಿತಕಲಾ ಅಕಾಡೆಮಿ: ಪದ್ಮಿನಿರಾವ್ ಪರಂಪರಾ ಕಲೆ ಮತ್ತು ಸಂಸ್ಕೃತಿ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ನಂ.8, 3ನೇ ಮುಖ್ಯರಸ್ತೆ, 8ನೇ ಕ್ರಾಸ್, ಬನಶಂಕರಿ 3ನೇ ಹಂತ, 3ನೇ ಫೇಸ್ (ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಿಂಬದಿ), ಸಂಜೆ 6.15ಕ್ಕೆ ಸಾಹಿತಿ ಪ್ರೊ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಂದ ಡಿ.ವಿ.ಜಿ. ಸಾಹಿತ್ಯಾಂಶ ಕುರಿತು ವಿಚಾರ ಮಂಡನೆ, 7.15ಕ್ಕೆ ವಸುಧಾ ಬಾಲಕೃಷ್ಣ ಅವರಿಂದ ಡಿವಿಜಿ ಗೀತಗಾಯನ. ಅಕಾಡೆಮಿ ಕಲಾವಿದರಿಂದ ಆಯ್ದ ಅಂತಃಪುರ ಗೀತೆಗಳಿಗೆ ನೃತ್ಯ, ಅಧ್ಯಕ್ಷತೆ-ಕಲಾ ವಿಮರ್ಶಕ ಎಂ.ಸೂರ್ಯಪ್ರಸಾದ್, ಅತಿಥಿ-ಎಂ.ಆರ್. ಸತ್ಯನಾರಾಯಣ. ಸಂಜೆ 8.

ವಿಮೂವ್ ಥಿಯೇಟರ್ ತಂಡದಿಂದ ಭಾನುವಾರ `ಮಿರರ್ ಮಿರರ್~ ನಾಟಕ ಪ್ರದರ್ಶನ. ರಚನೆ, ನಿರ್ದೇಶನ ಜಿ.ಮಧುವಂತಿ. ಅಭಿಷೇಕ್ ನಾರಾಯಣ್ ನಾಟಕಕ್ಕೆ ಸಂಗೀತ ನೀಡಿದ್ದಾರೆ. ವಿನ್ಯಾಸ: ಅಭಿಷೇಕ್ ಅಯ್ಯಂಗಾರ್, ಬೆಳಕು: ಹನುರಾಮ ಸಂಜೀವ್. ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ. ಸಂಜೆ 7.30. 



ಎಂಇಎಸ್ ಕಲಾವೇದಿಕೆ: ವಿದ್ಯಾಸಾಗರ ಪ್ರೊ.ಎಂಪಿಎಲ್ ಶಾಸ್ತ್ರಿ ಸಭಾಂಗಣ, ಎಂಇಎಸ್ ಕಾಲೇಜು, ವಿದ್ಯಾಸಾಗರ ಪ್ರೊ.ಎಂಪಿಎಲ್ ಶಾಸ್ತ್ರಿ ರಸ್ತೆ, 15 ನೇ ಅಡ್ಡ ರಸ್ತೆ, ಮಲ್ಲೇಶ್ವರಂ. ಭರತನಾಟ್ಯ ಕಾರ್ಯಕ್ರಮ. ಸಂಜೆ 6.30.

ಧಾರ್ಮಿಕ ಕಾರ್ಯಕ್ರಮ

ಹೋಲಿ ರೋಸರಿ ಚರ್ಚ್
: ವಿಮಾನ ನಿಲ್ದಾಣ ರಸ್ತೆ, ವೆಂಕಟಾಲ, ಯಲಹಂಕ. ನೂತನ ದೇವಾಲಯದ ಪವಿತ್ರೀಕರಣ ಮತ್ತು ಉದ್ಘಾಟನೆ. ರೆವೆರೆಂಡ್ ಡಾ.ಬರ್ನಾಡ್ ಮೋರಾಸ್. ಸಂಜೆ 4.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.