ಗುರುವಾರ , ಮೇ 13, 2021
18 °C

ನಗರದಲ್ಲಿ ಇಂದು -ಏಪ್ರಿಲ್ 26, ಗುರುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಪ್ರಿಲ್ 26, ಗುರುವಾರ

 
ಶ್ರೀ ರಾಮಾಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್: ಚಲ್ಲಘಟ್ಟ, ಹಳೇ ವಿಮಾನ ನಿಲ್ದಾಣ ರಸ್ತೆ. ಅಭಯ ಆಂಜನೇಯ ಸ್ವಾಮಿ ನೂತನ 27 ಅಡಿ ಏಕಶಿಲಾ ಸ್ಥಿರಬಿಂಬ ಪ್ರತಿಷ್ಠಾಪನಾ ಮಹಾ ಕುಂಭಾಭಿಷೇಕದ ಪ್ರಯುಕ್ತ ಗುರುವಾರ ವೇದ ಪಾರಾಯಣ. ದ್ವಾರತೋರಣ ಪೂಜೆ, ಪ್ರಾಣ ಪ್ರತಿಷ್ಠಾಪನಾ ಹೋಮ, ಶಾಂತಿ ಹೋಮ, ಕುಂಭಾಭಿಷೇಕ. ಪಂಚಾಮೃತ ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 8.

ಸಂಜೆ 6ಕ್ಕೆ ಅಮೃತ ವರ್ಷಿಣಿ ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಎಂ. ಎಸ್. ರಾಮಯ್ಯ ಅಡ್ವಾನ್ಸ್‌ಡ್ ಲರ್ನಿಂಗ್ ಸೆಂಟರ್: ಕಾಲೇಜು ಸಭಾಂಗಣ, ಎಂ.ಎಸ್. ರಾಮಯ್ಯ ಅಡ್ವಾನ್ಸ್‌ಡ್ ಲರ್ನಿಂಗ್ ಸೆಂಟರ್‌ನ ಉದ್ಘಾಟನಾ ಸಮಾರಂಭ. ಉದ್ಘಾಟನೆ- ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್. ಅತಿಥಿಗಳು- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸೈನ್ಸ್ ನಿರ್ದೇಶಕ ಡಾ.ಪಿ. ಸತೀಶ್ ಚಂದ್ರ, ಇಂಡಿಯನ್ ಸೊಸೈಟಿ ಫಾರ್ ಸರ್ಜರಿ ಆಫ್ ದಿ ಹ್ಯಾಂಡ್ ಅಧ್ಯಕ್ಷ ಡಾ.ಎಸ್. ರಾಜಾ ಸಭಾಪತಿ. ಅಧ್ಯಕ್ಷತೆ- ಜಿಇಎಫ್ ಅಧ್ಯಕ್ಷ ಡಾ.ಎಂ.ಆರ್. ಜಯರಾಮ್. ಬೆಳಿಗ್ಗೆ 11.ಕೆನರಾ ಬ್ಯಾಂಕ್ ಕನ್ನಡ ಸಂಘ: ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣ, ಜೆ.ಸಿ. ರಸ್ತೆ. ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಎಸ್.ಕೆ. ಭಗವಾನ್ ಅವರಿಂದ `ಮನದಾಳದ ಮಾತು~ ಸಂವಾದ. ಸಂಜೆ 5.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ಶಾಂತಿನಗರ ಟಿಟಿಎಂಸಿ. ಹೊಸ ಬಿಎಂಟಿಸಿ ಕಚೇರಿ ಉದ್ಘಾಟನೆ. ಅತಿಥಿ- ಸಾರಿಗೆ ಮತ್ತು ಗೃಹ ಸಚಿವ ಆರ್. ಅಶೋಕ. ಬೆಳಿಗ್ಗೆ 10.30.ಬೆಂಗಳೂರು ವಿಶ್ವವಿದ್ಯಾಲಯ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಅರಮನೆ ರಸ್ತೆ. ಪರೀಕ್ಷಾ ಅದಾಲತ್ ಉದ್ಘಾಟನಾ ಸಮಾರಂಭ. ಉದ್ಘಾಟನೆ- ಬೆಂಗಳೂರು ವಿವಿ. ಕುಲಪತಿ ಪ್ರೊ. ಎನ್. ಪ್ರಭುದೇವ್. ಅತಿಥಿಗಳು- ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಎಂ.ಟಿ. ನಾಣಯ್ಯ, ಹೈಕೋರ್ಟ್ ಮಾಜಿ ರಿಜಿಸ್ಟ್ರಾರ್ ಬಸವಾರ್ಯ. ಬೆಳಿಗ್ಗೆ 11.ಕಮ್ಯುನಿಟಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್:  ನಂ 2/1, 9ನೇ ಅಡ್ಡರಸ್ತೆ, 2ನೇ ಬ್ಲಾಕ್, ಜಯನಗರ. `ಸಮ್ಮಿತ್-12~ ರಾಷ್ಟ್ರೀಯ ಮ್ಯಾನೇಜ್‌ಮೆಂಟ್ ಉತ್ಸವ. ಉದ್ಘಾಟನೆ- ಸಿಗಂದು ರಾಜೇಶ್ವರಿ ಎಜುಕೇಶನ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕಿ ಸುಧಾ ಬರಗೂರು. ಅಧ್ಯಕ್ಷತೆ- ಶಾಲೆ ನಿರ್ದೇಶಕ ಡಾ. ಬಿ. ಎಸ್. ಸುರೇಶ್ ಬಾಬು. ಬೆಳಿಗ್ಗೆ 9.30.ಧಾರ್ಮಿಕ ಕಾರ್ಯಕ್ರಮಗಳು

ದೇವಾಂಗ ಸಂಘ: ಸಿಲ್ವರ್ ಜುಬ್ಲಿ ಕಲ್ಯಾಣ ಭವನ, ದೇವಾಂಗ ಹಾಸ್ಟೆಲ್ ರಸ್ತೆ, ಸಂಪಂಗಿರಾಮನಗರ. ಗಾಯತ್ರಿ ಜಯಂತಿ ಆಚರಣೆ. ಬೆಳಿಗ್ಗೆ 7.ಜಗದ್ಗುರ ಶ್ರೀ ಮನ್ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ಶ್ರೀ ಉತ್ತರಾದಿಮಠ: ಉತ್ತರಾದಿಮಠ, ಬಸವನಗುಡಿ. ಲಕ್ಷ್ಮೀನರಸಿಂಹದೇವರ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಉತ್ತರಾದಿಮಠದ ಶತಮಾನೋತ್ಸವ ಭವನದ ಉದ್ಘಾಟನಾ ಸಮಾರಂಭ. ಶ್ರೀಮನ್ಮೂಲರಾಮ ದೇವರ ಮಹಾಪೂಜೆ ಬೆಳಿಗ್ಗೆ 5. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 5.30. ಸಾನ್ನಿಧ್ಯ- ಉತ್ತರಾದಿಮಠದ ಸತ್ಯಾತ್ಮತೀರ್ಥರು, ಪೇಜಾವರ ಮಠದ ವಿಶ್ವೇಶ್ವತೀರ್ಥರು, ಕೂಡಲೀ ಆರ್ಯ ಅಕ್ಷೀಭ್ಯತೀರ್ಥ ಮಠದ ರಘುವಿಜಯತೀರ್ಥರು, ಪರಿಮಾರು ಮಠದ ವಿದ್ಯಾಧೀಶತೀರ್ಥರು. ಸಂಜೆ 6.30ಕ್ಕೆ ಉಪನ್ಯಾಸ.ಗುರು ಶನೇಶ್ವರ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್: ಪೈಪ್ ಲೈನ್ ರಸ್ತೆ, ಮಲ್ಲಸಂದ್ರ, ಟಿ. ದಾಸರಹಳ್ಳಿ. 24ನೇ ವರ್ಷದ ಕುಂಭಾಭಿಷೇಕ ಮಹೋತ್ಸವದಲ್ಲಿ ಮೆರವಣಿಗೆ. ಸಂಜೆ 5.30.ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ನಂ 68, ಎ.ಪಿ.ಕೆ ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ. ಶ್ರೀ ಶಂಕರ ಜಯಂತಿ ಸಪ್ತಾಹ ಮಹೋತ್ಸವದಲ್ಲಿ ಸುದರ್ಶನ ಶರ್ಮಾ ಅವರಿಂದ ಶಾಂಕರ ವೇದಾಂತಪ್ರಕ್ರಿಯೆ. ಬೆಳಿಗ್ಗೆ 9.30.ಪರಮಾರ್ಥ ವಿಚಾರ ಸಂಘ ಟ್ರಸ್ಟ್: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಕೆ.ಜಿ. ಸುಬ್ರಾಯಶರ್ಮಾ ಅವರಿಂದ `ಸಮನ್ವಯ ಶಾಂಕರ ಭಾಷ್ಯಂ~ ಉಪನ್ಯಾಸ. ಬೆಳಿಗ್ಗೆ 7. 45.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ನಂ. 6, ವಾಡಿಯಾ ರಸ್ತೆ, ಬಸವನಗುಡಿ. ಆನಂದ ತೀರ್ಥರಿಂದ ಭಕ್ತಿ ಗೀತೆ ಮತ್ತು ದಾಸರ ಪದಗಳು. ಸಂಜೆ 6.

ಭೀಮನಕಟ್ಟೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ: ಭೀಮಸೇತು ವೇದಿಕೆ, ದೊಡ್ಡ ಬೊಮ್ಮಸಂದ್ರ, ವಿದ್ಯಾರಣ್ಯಪುರ ಮುಖ್ಯ ರಸ್ತೆ. ದಶಮಾನೋತ್ಸವ ಸಮಾರಂಭ ಪ್ರಯುಕ್ತ ಗುರುರಾಘವೇಂದ್ರ ಭಜನಾಮಂಡಳಿ ಮತ್ತು ಲಕ್ಷ್ಮಿಶೋಭಾನೆ ಭಜನಾಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಮತ್ತು ಸಂಗೀತ ಕಾಖಂಡಕಿ ಅವರಿಂದ ದಾಸವಾಣಿ. ಸಂಜೆ 4.ತ್ಯಾಗರಾಜ ಗಾನಸಭಾ ಟ್ರಸ್ಟ್: ಶ್ರೀ ವಾಣಿ ವಿದ್ಯಾ ಕೇಂದ್ರ, ನಂ 1246, 4ನೇ ಮುಖ್ಯರಸ್ತೆ, 2ನೇ ಹಂತ, ಇ ಬ್ಲಾಕ್, ರಾಜಾಜಿನಗರ. ಶಂಕರ ಜಯಂತಿ, 41ನೇ ಸಂಗೀತೋತ್ಸವದಲ್ಲಿ ಚಿಂತಲಪಲ್ಲಿ ಶ್ರೀನಿವಾಸ ಅವರಿಂದ ಗಾಯನ ಕಛೇರಿ. ಬಿ. ಎಸ್. ಮಧುಸೂದನ್ (ಪಿಟೀಲು), ಎಚ್. ಎಸ್. ಕೃಷ್ಣಮೂರ್ತಿ (ಮೃದಂಗ), ವಿ. ಶ್ರೀಧರ (ಖಂಜರಿ). ಸಂಜೆ 6.ಶ್ರೀ ಶುಕ್ಲಯಜುಃ ಶಾಖಾ ಟ್ರಸ್ಟ್: ನಂ 27, 3ನೇ ಮುಖ್ಯರಸ್ತೆ, ಚಾಮರಾಜಪೇಟೆ. ಯಾಜ್ಞವಲ್ಕ್ಯ ಆಶ್ರಮದ ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಸುದರ್ಶನ ಹೋಮ ಬೆಳಿಗ್ಗೆ 11.30. ಸಾನ್ನಿಧ್ಯ- ಪೇಜಾವರ ಮಠದ ವಿಶ್ವೇಶ್ವತೀರ್ಥ, ಅತಿಥಿಗಳು- ಶಾಸಕ ಎಲ್. ಎ. ರವಿಸುಬ್ರಮಣ್ಯ, ವಕೀಲ ಕೆ. ದಿವಾಕರ್. ಸಂಜೆ 4 ರಿಂದ ಕಾತ್ಯಾಯಿನಿ ಮಹಿಳಾ ಮಂಡಳಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸೌಮ್ಯ ಅಭಿಜಿತ್ ಅವರಿಂದ ಭರತನಾಟ್ಯ. ಅತಿಥಿಗಳು- ವಿವೇಕಾನಂದ ಯೋಗ ವಿವಿಯ ಡೀನ್ ಡಾ. ಆರ್. ನಾಗರತ್ನ, ಬಿಬಿಎಂಪಿ ಸದಸ್ಯೆ ಲಲಿತಾ ವಿಜಯಕುಮಾರ್.ಸಾಂಸ್ಕೃತಿಕ ಕಾರ್ಯಕ್ರಮಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕನ್ನಡ ಭವನ, ಜೆ. ಸಿ. ರಸ್ತೆ. ಶಂಕರ ಜಯಂತಿ ಮತ್ತು ತತ್ವಶಾಸ್ತ್ರಜ್ಞರ ದಿನಾಚರಣೆ. ಉದ್ಘಾಟನೆ- ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಕಾರ್ಯದರ್ಶಿ ಬಸವರಾಜು. ಉಪನ್ಯಾಸ- ಕೈ.ಪ. ಶೇಷಾದ್ರಿ. ಹಿಂದೂಸ್ತಾನಿ ಸಂಗೀತ- ಕಾಶಿನಾಥ್‌ಪತ್ತಾರ್. ಕೀರ್ತನ ಗಾಯನ-ಸುಕನ್ಯ ಪ್ರಭಾಕರ್. ಬೆಳಿಗ್ಗೆ 10. 30.ಕನ್ನಡ ಯುವಜನ ಸಂಘ: ನಂ. 1, ಎಚ್. ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ (ವಿಲ್ಸನ್ ಗಾರ್ಡನ್), ಪೂರ್ಣಿಮಾ ಹೋಟೆಲ್ ಮುಂಭಾಗ. `ಸಮಕಾಲೀನ ಕಾವ್ಯ~ದ ಬಗ್ಗೆ ಚಿಂತನೆ. ಚಿಂತಕ- ಕವಿ ಡಾ. ಹುಲಿಕುಂಟೆ ಮೂರ್ತಿ, ಅಧ್ಯಕ್ಷತೆ- ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ ಮತ್ತು ಡಾ. ರಾಜ್ ಕುಮಾರ್ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಎಸ್. ಸುರೇಶ್ ಮತ್ತು ತಂಡದವರಿಂದ ಗೀತ ಗಾಯನ. ಸಂಜೆ 6.ಪ್ರೆಸ್ ಕ್ಲಬ್: ಕಬ್ಬನ್ ಪಾರ್ಕ್. ಪ್ರೆಸ್‌ಕ್ಲಬ್ ಪ್ರಕಾಶನ ಪ್ರಕಟಿಸಿರುವ ಈಶ್ವರ ದೈತೋಟ ಅವರ `ಮಾಧ್ಯಮ ಬ್ರಹ್ಮಾಂಡ~ ಕೃತಿ ಬಿಡುಗಡೆ. ಬೆಳಿಗ್ಗೆ11.ಮಿಥಿಕ್ ಸೊಸೈಟಿ; ಇತಿಹಾಸ ತಜ್ಞ ಡಾ. ಸೂರ್ಯನಾಥ ಕಾಮತ್ ಅವರ `ಇತಿಹಾಸದ ಆಚೆ ಈಚೆ~ ಪುಸ್ತಕವನ್ನು ಕರ್ನಾಟಕ ಕಾನೂನು ಆಯೋಗದ ಆಯುಕ್ತ ನ್ಯಾಯಮೂರ್ತಿ ವಿ. ಎಸ್. ಮಳೀಮಠ ಲೋಕಾರ್ಪಣೆ ಮಾಡಲಿದ್ದಾರೆ. ಸ್ಥಳ: ಮಿಥಿಕ್ ಸೊಸೈಟಿ, ನೃಪತುಂಗಾ ರಸ್ತೆ. ಮಧ್ಯಾಹ್ನ 12. 30.ಬಿಟಿಎಂ ಕಲ್ಚರಲ್ ಅಕಾಡೆಮಿ: ಶ್ರೀ ರಮಣ ಮಹರ್ಷಿ ಅಕಾಡೆಮಿ, 3ನೇ ಅಡ್ಡರಸ್ತೆ, 3ನೇ ಹಂತ, ಜೆ. ಪಿ. ನಗರ. 20ನೇ ವಾರ್ಷಿಕೋತ್ಸವದಲ್ಲಿ ಮಂಟಪ ಪ್ರಭಾಕರ ಉಪಾಧ್ಯ ಅವರಿಂದ ಏಕವ್ಯಕ್ತಿ ಸ್ತ್ರೀ ಪಾತ್ರ ಯಕ್ಷ ನೃತ್ಯ. ವ್ಯಾಖ್ಯಾನ- ಡಾ. ಆರ್. ಗಣೇಶ್. ಸಂಜೆ 6.

ರಂಗಶಂಕರ: ಜೆ.ಪಿ.ನಗರ 2ನೇ ಹಂತ. `ಸಂತೆಯೊಳಗೊಂದು ಮನೆಯ ಮಾಡಿ~ ನಾಟಕ. ರಚನೆ-ವಿನ್ಯಾಸ- ನಿರ್ದೇಶನ- ಎಂ.ಸಿ.ಆನಂದ್. ಸಂಜೆ 6.30.ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್: ಸೇವಾ ಸದನ, ಮಲ್ಲೇಶ್ವರಂ. ಗುರು ಕೆಲುಚರಣ್ ಮೊಹಾಪಾತ್ರ ಅವರ ಸ್ಮರಣಾರ್ಥ ಸುಜಾತಾ ಮೊಹಾಪಾತ್ರ, ಶರ್ಮಿಳಾ ಮುಖರ್ಜಿ ಮತ್ತು ದೇವ್‌ಜನಿ ಸೆನ್ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ. ಸಂಜೆ 7.ಶ್ರೀ ಬ್ರಹ್ಮ ಚೈತನ್ಯ ಮಂದಿರ: ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ ಮಂದಿರ, ನಂ 1692, 16ನೇ ಮುಖ್ಯ ರಸ್ತೆ, ಬನಶಂಕರಿ 1ನೇ ಹಂತ, 2ನೇ ಘಟ್ಟ. ಶಂಕರಜಯಂತಿ ಅಂಗವಾಗಿ ಡಾ. ಎಸ್. ನಾಗರಾಜ ಶರ್ಮಾ ಅವರಿಂದ `ಆಚಾರ್ಯ ಶಂಕರರ ಜೀವನ- ಸಾಧನೆ ಮತ್ತು ಕೊಡುಗೆ~ ಕುರಿತು ಪ್ರವಚನ. ಸಂಜೆ 5.30.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.