ಬುಧವಾರ, ಅಕ್ಟೋಬರ್ 16, 2019
°C

ನಗರದಲ್ಲಿ ಇಂದು: ಜನವರಿ 8, ಭಾನುವಾರ

Published:
Updated:

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ: ನ್ಯಾಷನಲ್ ಕಾಲೇಜು ಮೈದಾನ, ವಿ.ವಿ.ಪುರ.ಅಮೃತ ಮಹೋತ್ಸವ ಆಚರಣೆ. ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಡಾ.ವಿ.ಎಸ್.ಆಚಾರ್ಯ, ಆರ್.ಅಶೋಕ. ಸಂಜೆ 5.ಶಿಯಾ ಅರ‌್ಮಘ: ಬಾಲ್ಡ್‌ವಿನ್ ಬಾಲಕರ ಶಾಲೆಯ ಸಮೀಪ, ಹೊಸೂರು ರಸ್ತೆ,  ಹುಸೇನ್ ದಿನಾಚರಣೆ ಪ್ರಯುಕ್ತ `ಇಮಾಮ್ ಹುಸೇನ್- ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ~ ಕುರಿತು ವಿಚಾರ ಸಂಕಿರಣ. ಅತಿಥಿಗಳು- ಕೇಂದ್ರ ನವೀಕರಣ ಇಂಧನ ಸಚಿವ ಡಾ.ಫಾರುಕ್ ಅಬ್ದುಲ್ಲ, ಚಿತ್ರನಿರ್ದೇಶಕ ಮಹೇಶ್ ಭಟ್. ಸಂಜೆ 4.ಭಗವದ್ಗೀತ ಅಭಿಯಾನ ಕರ್ನಾಟಕ: ತ್ರಿಪುರವಾಸಿನಿ, ಅರಮನೆ ಮೈದಾನ. ಮಹಾಸಮರ್ಪಣೆ. ಅತಿಥಿಗಳು- ಸಚಿವರಾದ ಆರ್.ಅಶೋಕ, ಬಿ.ಎನ್.ಬಚ್ಚೇಗೌಡ, ಶೋಭಾ ಕರಂದ್ಲಾಜೆ, ಶಾಸಕ ಡಿ.ಕೆ.ಶಿವಕುಮಾರ್. ಬೆಳಿಗ್ಗೆ 10.30.ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ ಅಭಿನಂದನಾ ಸಮಿತಿ: ಬಾಲಕಿಯರ ಸರ್ಕಾರಿ ವಿದ್ಯಾಲಯ, 4ನೇ ಮುಖ್ಯರಸ್ತೆ, ಮಲ್ಲೇಶ್ವರ. ರಾಷ್ಟ್ರೀಯ ವಿಚಾರ ಸಂಕಿರಣ. ಅತಿಥಿಗಳು- ಶಾಸಕ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ, ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಇಂದ್ರನಾಥ ಚೌಧರಿ, ಪ್ರಾಧ್ಯಾಪಕಿ ಡಾ.ಸುಪ್ರಿಯಾ ಸಹಸ್ರಬುದ್ದೆ. ಅಧ್ಯಕ್ಷತೆ- ಶತಾವಧಾನಿ ಡಾ.ಆರ್.ಗಣೇಶ್. ಬೆಳಿಗ್ಗೆ 10.ಬೆಂಗಳೂರು ದೂರದರ್ಶನ ಕೇಂದ್ರ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಸನ್ಮಾನ ಸಮಾರಂಭ. ಅತಿಥಿಗಳು-ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ಕುಮಾರ್, ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ.ಜೈರಾಜ್, ನಟಿ ತಾರಾ. ಮಧ್ಯಾಹ್ನ 3.ಸಮ್ಮಿಲನ: ವಲ್ಲಭನಿಕೇತನ, ಶೇಷಾದ್ರಿಪುರ. ಪತ್ತೆದಾರಿ ಕಾದಂಬರಿಕಾರ ಎನ್.ನರಸಿಂಹಯ್ಯ ಅವರಿಗೆ ನುಡಿ ನಮನ ಮತ್ತು ಕವಿಗೋಷ್ಠಿ. ಬೆಳಿಗ್ಗೆ 10.30.ಸಪ್ತಕ: ಹವ್ಯಕ ಸಭಾ ಭವನ, ಮಲ್ಲೇಶ್ವರ. ಸಂಗೀತ ಕಾರ್ಯಕ್ರಮ. ಸಂಜೆ 5.30.ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿ: ಬಿ.ಎಸ್.ವೆಂಕಟರಾಮ ಕಲಾಭವನ, 4ನೇ ಮುಖ್ಯರಸ್ತೆ, ಚಾಮರಾಜಪೇಟೆ. 38ನೇ ಘಟಿಕೋತ್ಸವ. ಅತಿಥಿ- ಸೂರ್ಯ ಪ್ರಸಾದ ದೀಕ್ಷಿತ. ಬೆಳಿಗ್ಗೆ 10.ಆನಂದ ಪ್ರಕಾಶನ: ಭಾರತೀಯ ಸಂಸ್ಕೃತಿ ವಿದ್ಯಾಪೀಠ, ವಿಜಯನಗರ. ನ್ಯಾಯವಾದಿ ಜಿ.ನಾರಾಯಣ ಮೂರ್ತಿ ಅವರ ಮೂರು ಕೃತಿ ಬಿಡುಗಡೆ. ಅತಿಥಿಗಳು- ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎನ್.ಪುಷ್ಪಲತಾ, ಲೇಖಕಿ ಪ್ರೇಮಾಭಟ್, ಕವಿ ಎಲ್.ಎನ್.ಮುಕುಂದರಾಜ್. ಬೆಳಿಗ್ಗೆ 10.ಉದಯಭಾನು ಕಲಾಸಂಘ: ಕೆಂಪೇಗೌಡ ನಗರ. ನೇತ್ರ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ. ಬೆಳಿಗ್ಗೆ 10.ಸಹ್ಯಾದ್ರಿ ಸಂಘ ಬೆಂಗಳೂರು: ವೈಎಂಸಿಎ ಕ್ರೀಡಾಂಗಣ, ನೃಪತುಂಗ ರಸ್ತೆ. ಪ್ರಶಸ್ತಿ ವಿತರಣಾ ಸಮಾರಂಭ. ಅತಿಥಿಗಳು- ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಪತ್ರಕರ್ತ ಎಚ್.ಆರ್.ರಂಗನಾಥ್. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಕೆ.ವಿ.ಆರ್.ಟ್ಯಾಗೋರ್. ಸಂಜೆ 6.30.ಬಸವನಗುಡಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು: ಪಿಇಎಸ್ ಕಾಲೇಜು, ಹನುಮಂತನಗರ. ಉದ್ಘಾಟನೆ- ಸಂಸದ ಅನಂತ್‌ಕುಮಾರ್. ಅತಿಥಿಗಳು- ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಜಾನಪದ ತಜ್ಞ ಪ್ರೊ.ಡಿ.ಲಿಂಗಯ್ಯ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ. ಬೆಳಿಗ್ಗೆ 10.30.ಶ್ವೇತಪ್ರಿಯ ಪ್ರಕಾಶನ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಬೇಲೂರು ರಘುನಂದನ್ ಅವರ `ಕವಿಶೈಲದ ಕವಿತೆಗಳು~ ಪುಸ್ತಕ ಬಿಡುಗಡೆ- ಸಾಹಿತಿ ಡಾ.ದೇ.ಜವರೇಗೌಡ. ಅತಿಥಿಗಳು- ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಹಂಪ ನಾಗರಾಜಯ್ಯ, ಡಾ.ಮಳಲಿ ವಸಂತಕುಮಾರ್. ಬೆಳಿಗ್ಗೆ 10.ಶ್ರೀಕೃಷ್ಣದೇವರಾಯ ಬಲಿಜ ಸಾಂಸ್ಕೃತಿಕ ಸಂಘ: ಕನ್ನಡ ಭವನ, ಜೆ.ಸಿ.ರಸ್ತೆ.ಬಲಿಜಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿ- ಸಂಸದ ಪಿ.ಸಿ.ಮೋಹನ್, ಸಂಜೆ 5.ಬರಹ ಪಬ್ಲಿಷಿಂಗ್ ಹೌಸ್: ಕನ್ನಡ ಭವನ, ಜೆ.ಸಿ.ರಸ್ತೆ. ರಂಗಭೂಮಿ ಕಲಾವಿದ ಬಿ.ಎನ್.ಚಿನ್ನಪ್ಪ ಅವರ ಆತ್ಮಕಥೆ `ಬಣ್ಣದ ಬೆಳಕು~  ಪುಸ್ತಕ ಬಿಡುಗಡೆ- ವಿಮರ್ಶಕ ಪ್ರೊ.ಕೆ.ಮರುಳಸಿದ್ದಪ್ಪ, ಗಾಂಧಿ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ. ಬೆಳಿಗ್ಗೆ 11.ಪ್ರಜಾಪ್ರಭುತ್ವ ಜನರ ರಕ್ಷಣೆ ಮತ್ತು ಅಭಿವೃದ್ಧಿ ಸಂಸ್ಥೆ: ಸ್ವಾಮಿ ವಿವೇಕಾನಂದ ಬಯಲು ರಂಗಮಂದಿರ, ಶಂಕರ ಮಠ ಉದ್ಯಾನ, ಮೋದಿ ರಸ್ತೆ. ಉದ್ಘಾಟನಾ ಸಮಾರಂಭ ಮತ್ತು ಜನಜಾಗೃತಿ ಸಮಾವೇಶ. ಅತಿಥಿಗಳು- ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಸಾಹಿತಿ ಬಿ.ಟಿ.ಲಲಿತಾನಾಯಕ್, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ಸಂಜೆ 5. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ. ಡಿ.ವಿ.ಜಿ. ಸಪಾದ ಶತೋತ್ಸವ ವರ್ಷ ಕಾರ್ಯಕ್ರಮದಲ್ಲಿ ಅಷ್ಟಾವಧಾನ- ಶತಾವಧಾನಿ ಡಾ.ಆರ್.ಗಣೇಶ್. ಸಂಜೆ 5.ವಿದ್ಯಾ ವಿಕಾಸ ಟ್ರಸ್ಟ್: ರಾಮ ಮಂದಿರ ಛತ್ರ, ರಾಜಾಜಿನಗರ. ವಾರ್ಷಿಕೋತ್ಸವ. ಅತಿಥಿಗಳು- ರಾಜಾಜಿನಗರ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಡಿ.ಜಯರಾಂ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ.ಎನ್.ಸಿ.ಶಿವಪ್ರಕಾಶ್. ಸಂಜೆ 4.ಧಾರ್ಮಿಕ ಕಾರ್ಯಕ್ರಮ

ಬಸವೇಶ್ವರನಗರ ಬ್ರಾಹ್ಮಣ ಸಭಾ: ಶಂಕರ ಸೇವಾ ಸಮಿತಿ, ಡಾ.ರಾಜ್‌ಕುಮಾರ್ ರಸ್ತೆ, ರಾಜಾಜಿನಗರ ಮಹಾ ಸುದರ್ಶನ ಹೋಮ. ಬೆಳಿಗ್ಗೆ 7.30.ಯಶಸ್ವಿನಿ ಚಾರಿಟಬಲ್ ಟ್ರಸ್ಟ್: ಮಹಾಲಕ್ಷ್ಮಿ ಬಡಾವಣೆ. ವೆಂಕಟೇಶ್ವರ ಸ್ವಾಮಿಯ ಕಲ್ಯಾಣೋತ್ಸವ. ಬೆಳಿಗ್ಗೆ 6.

ತಿರುಮಲ ತಿರುಪತಿ ದೇವಸ್ಥಾನ ಹಿಂದೂ ಧರ್ಮ ಪ್ರಚಾರ ಪರಿಷತ್: ಮಹಾಲಕ್ಷ್ಮಿ ಲೇಔಟ್ ಆಟದ ಮೈದಾನ. ಶ್ರೀನಿವಾಸ ಕಲ್ಯಾಣೋತ್ಸವ. ಬೆಳಿಗ್ಗೆ 9.ಮಹಾಗಣಪತಿ ದೇವಸ್ಥಾನ: ಮಲ್ಲೇಶ್ವರ. ಗಣಪತಿ ಪೂಜೆ, ಗಂಗಾಪೂಜೆ. ಬೆಳಿಗ್ಗೆ  8.ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ. ಭಜನೆ. ಸಂಜೆ 6.

Post Comments (+)