ಭಾನುವಾರ, ನವೆಂಬರ್ 17, 2019
29 °C

ನಗರದಲ್ಲಿ ಇಂದು - ಜುಲೈ 19, ಗುರುವಾರ

Published:
Updated:

ಜುಲೈ 19, ಗುರುವಾರ

ಕನ್ನಡ ಯುವಜನ ಸಂಘ: ಸಂಘದ ಸಭಾಂಗಣ, ನಂ 1. ಎಚ್. ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ. ಪ್ರಾಧ್ಯಾಪಕ ಚಂದ್ರಾಜು ಅವರಿಂದ `ಆರೋಗ್ಯಕ್ಕಾಗಿ ಹಾಸ್ಯ~ ಉಪನ್ಯಾಸ. ಅತಿಥಿ- ಸಾಹಿತಿ ಕಾಕೋಳು ರಾಮಯ್ಯ. ಅಧ್ಯಕ್ಷತೆ- ಕನ್ನಡ ಪರ ಚಿಂತಕ ಡಿ. ಎನ್. ಹರಿದಾಸ್. ಸಂಜೆ 6.30.ನ್ಯೂ ಹೊರೈಜನ್ ಕಾಲೇಜು: ಮೂರನೇ `ಎ~ ಅಡ್ಡರಸ್ತೆ, 2ನೇ `ಎ~ ಮುಖ್ಯ ರಸ್ತೆ, ಕಸ್ತೂರಿ ನಗರ. ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಿಂದ `ಭ್ರಷ್ಟಾಚಾರ ವಿರುದ್ಧ ಹೋರಾಟ-ಜಾಗೃತಿ~ ಉಪನ್ಯಾಸ. ಮಧ್ಯಾಹ್ನ 3.ಸಚಿವಾಲಯ ಗ್ರಂಥಾಲಯ ಮತ್ತು ಸಚಿವಾಲಯ ನೌಕರರ ಸಂಘ: ವಿಕಾಸಸೌಧದ ಸಮ್ಮೇಳನ ಸಭಾಂಗಣ, ಕೊಠಡಿ ಸಂಖ್ಯೆ 419. `ವಿರಾಮದ ವೇಳೆಯಲ್ಲಿ ವಿಚಾರ ಲಹರಿ ಮಾಲಿಕೆ-20~ರಲ್ಲಿ ಸೈಬರ್ ಅಪರಾಧಗಳ ಕುರಿತು ಉಪನ್ಯಾಸ ಕಾರ್ಯಕ್ರಮ. ಮಧ್ಯಾಹ್ನ 1.30.ಅರವಿಂದ ಕಾಂಪ್ಲೆಕ್ಸ್ ಟ್ರಸ್ಟ್: ಅರವಿಂದ ಸಂಕೀರ್ಣ, ಸಾಂಸ್ಕೃತಿಕ ಸಭಾ ಭವನ, ಅರವಿಂದ ಮಾರ್ಗ, ಜೆ.ಪಿ. ನಗರ ಒಂದನೇ ಹಂತ. ಪ್ರೊ. ಕಿಟ್ಟು ರೆಡ್ಡಿ ಅವರಿಂದ `ದ ಐಡಿಯಲ್ ಆಫ್ ಹ್ಯೂಮನ್ ಯೂನಿಟಿ~ ಉಪನ್ಯಾಸ. ಸಂಜೆ 5.ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: ಎಂಬಿಎ ಸೆಮಿನಾರ್ ಹಾಲ್, 27ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. `ಫ್ಯಾಕಲ್ಟಿ ಡೆವಲೆಪ್‌ಮೆಂಟ್~ ಕಾರ್ಯಕ್ರಮ. ಬೆಳಿಗ್ಗೆ 9.ಸದ್ಗುರು ಶ್ರೀ ಬಾಬಾ ಮಹಾರಾಜ ಸೇವಾ ಸಮಿತಿ: ಸರ್ಪಭೂಷಣ ಮಠ, ಶಾರದಾ ಹೋಟೆಲ್ ಎದುರು, ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಹಿಂಭಾಗ, ಕೆ. ಜಿ. ರಸ್ತೆ. ಬಸವರಾಜ ಮುಗಳಕೋಡ್ ಅವರಿಂದ ವಚನಗಾಯನ. ಸಂಜೆ 5.30.ವಿದ್ವಾನ್ ಸಿದ್ಧೇಶ್ವರ ದೇವರು ರಚಿಸಿರುವ `ಬಸವಣ್ಣನವರ ಸಪ್ತಶೀಲ ಸೂತ್ರಗಳು~ ಪುಸ್ತಕ ಲೋಕಾರ್ಪಣೆ. ಲೋಕಾರ್ಪಣೆ- ಕೃಷಿ ಇಲಾಖೆ ನಿರ್ದೇಶಕ ಡಾ. ಸಿ. ಸೋಮಶೇಖರ್, ಅಧ್ಯಕ್ಷತೆ- ಬೇಲಿಮಠದ ಶಿವರುದ್ರ ಸ್ವಾಮೀಜಿ, ಸಾನ್ನಿಧ್ಯ- ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅತಿಥಿಗಳು- ಬಸವ ಸಮಿತಿಯ ಅರವಿಂದ ಜತ್ತಿ, ರಮಣಶ್ರೀ ಗ್ರೂಪ್‌ನ ಎಸ್.ಷಡಕ್ಷರಿ. ಸಂಜೆ 6.ಧಾರ್ಮಿಕ ಕಾರ್ಯಕ್ರಮಗಳು

ಬನಶಂಕರಿ ದೇವಸ್ಥಾನ: ನಂ 6/6, ಬನಶಂಕರಿ ದೇವಸ್ಥಾನದ ರಸ್ತೆ, (ಕೆಂಪಣ್ಣ ಕ್ರಾಸ್), ದೊಡ್ಡಮಾವಳ್ಳಿ. 74ನೇ ವರ್ಷದ ಭೀಮನ ಅಮಾವಾಸ್ಯೆ ಮಹೋತ್ಸವದಲ್ಲಿ ಬೆಳಿಗ್ಗೆ 5ಕ್ಕೆ ಗಂಗೆ ಪೂಜೆ, ಬೆಳಿಗ್ಗೆ 6.30ಕ್ಕೆ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ.ಮುನೇಶ್ವರ ಸೇವಾ ಮಂಡಳಿ: ಮಾರುತಿ ಬಡಾವಣೆ, ಹರಿಶ್ಚಂದ್ರ ಘಾಟ್ ಬಳಿ. ಶ್ರೀಶಕ್ತಿ ಕರುಮಾರಿಯಮ್ಮನ 30ನೇ ವರ್ಷದ ಮಲ್ಲಿಗೆ ಪುಷ್ಪ ಕರಗೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಮಹೋತ್ಸವ. ಬೆಳಿಗ್ಗೆ 5.ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ನಂ 6, ಎ.ಪಿ.ಕೆ. ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ. ಅನಂತಶರ್ಮಾ ಭುವನಗಿರಿ ಅವರಿಂದ `ಶುದ್ಧ ವೇದಾಂತ ಸಾರ~ ಉಪನ್ಯಾಸ. ಬೆಳಿಗ್ಗೆ 9.30.ಶ್ರೀರಾಮಾಶ್ರಮ: ದುರ್ಗಾಪರಮೇಶ್ವರಿ ಕ್ರೀಡಾಂಗಣ, ಆರ್.ವಿ. ಡೆಂಟಲ್ ಕಾಲೇಜು ಎದುರು, ಜೆ.ಪಿ. ನಗರ 2ನೇ ಹಂತ. ರಾಘವೇಶ್ವರಭಾರತೀ ಸ್ವಾಮೀಜಿಯವರ ವಾಲ್ಮೀಕಿ ರಾಮಾಯಣದ ಪುನರವತರಣ ಶ್ರೀ ರಾಮಕಥಾ ಪ್ರವಚನ- ಪೂಜನ, ಗಾಯನ, ವಾದನ, ನರ್ತನ, ಚಿತ್ರ ರೂಪಕಗಳ ಸಮ್ಮಿಲನ ಕಾರ್ಯಕ್ರಮ. ಸಂಜೆ 6.ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಕ್ಷಿಪ್ರ ಫಲ ಪ್ರಸಾದ ಗಣಪತಿ ದೇವಸ್ಥಾನ, 6ನೇ ಅಡ್ಡರಸ್ತೆ, ಸತ್ಯ ಸಾಯಿಬಾಬಾ ಬಡಾವಣೆ, ದೇವಸಂದ್ರ, ಕೆ. ಆರ್‌ಪುರಂ. ಸ್ವಾಮಿ ಚಂದ್ರೇಶಾನಂದಜೀ ಅವರಿಂದ `ಸಂಕೀರ್ತನಾ ಸಂದೇಶ~. ಸಂಜೆ 6.ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯ ರಸ್ತೆ, 7ನೇ ಕ್ರಾಸ್, ಜೆ.ಪಿ.ನಗರ. ಭಜನೆ, ಸಂಜೆ 6.15.ಶಂಕರ ಜಯಂತಿ ಮಂಡಳಿ: ಶಂಕರ ಕೃಪಾ, ನಂ 45, ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಸುದರ್ಶನ ಶರ್ಮಾ ಅವರಿಂದ ದಕ್ಷಿಣಾಮೂರ್ತಿ ಸ್ತೋತ್ರ. ಸಂಜೆ 6.30.ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಕುಚಲಾಂಬ ಸಾಂಸ್ಕ್ರತಿಕ ಮಂದಿರ, 9ನೇ ಬ್ಲಾಕ್ ಜಯನಗರ. ಶಿವರಾಮ ಅಗ್ನಿಹೋತ್ರಿ ಅವರಿಂದ `ಬ್ರಹ್ಮ ಸೂತ್ರ ಭಾಷ್ಯ~ ಕುರಿತು ಉಪನ್ಯಾಸ. ಸಂಜೆ 6.30.ಶ್ರೀಮದಾನಂದ ತೀರ್ಥ ಪ್ರವಚನ ಸಮಿತಿ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡರಸ್ತೆ, ಅಮರಜ್ಯೋತಿ ನಗರ. ರಾಮವಿಠಲಾಚಾರ್ಯ ಅವರಿಂದ `ವರಾಹ ಪುರಾಣ~. ಸಂಜೆ 7.

ಸಂಜಯನಗರ ರಾಯರ ಮಠ: ಸತ್ಯಾತ್ಮತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ಪ್ರವಚನ. ಸಂಜೆ 6.30.ಸಾಂಸ್ಕೃತಿಕ ಕಾರ್ಯಕ್ರಮಗಳು

ಸಿರಿಕಲಾ ಮೇಳ: ಮಹಾಗಣಪತಿ ದೇವಸ್ಥಾನ, ರಾಜರಾಜೇಶ್ವರಿ ಸಭಾಂಗಣ, ಹೊಯ್ಸಳ ಸರ್ಕಲ್ ಹತ್ತಿರ, ಕೆಂಗೇರಿ ಉಪನಗರ. ಸಿರಿಕಲಾ ಯಕ್ಷಸಪ್ತಾಹದಲ್ಲಿ `ಸುಧನ್ವಾರ್ಜುನ~. ಸಂಜೆ 5.ರಂಗದರ್ಶನ ಪ್ರದರ್ಶನ ಕಲಾ ಕೇಂದ್ರ: ಸೇವಾ ಸದನ, 14ನೇ ಮುಖ್ಯರಸ್ತೆ, ಮಲ್ಲೇಶ್ವರ. ರಂಗನಿರಂತರ ಪ್ರಸ್ತುತ ಪಡಿಸುವ `ನೀರು ತಂದವರು~ ನಾಟಕ ಪ್ರದರ್ಶನ. ಅಧ್ಯಕ್ಷತೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ. ಆರ್. ರಾಮಕೃಷ್ಣ, ಅತಿಥಿ-ರಂಗತಜ್ಞ ಎಲ್. ಕೃಷ್ಣಪ್ಪ. ರಂಗರೂಪ- ಶಶಿಧರ ಭಾರೀಘಾಟ್, ನಿರ್ದೇಶನ- ಎಂ.ರವಿ. ಸಂಜೆ 7.ರಂಗಶಂಕರ: ಜೆ.ಪಿ. ನಗರ 2ನೇ ಹಂತ. ಕ್ರಿಯೇಟಿವ್ ಥಿಯೇಟರ್ ತಂಡದಿಂದ `ರತ್ನನ್ ಪರ್ಪಂಚ~ ನಾಟಕ ಪ್ರದರ್ಶನ. ರಚನೆ- ಜಿ.ಪಿ. ರಾಜರತ್ನಂ, ನಿರ್ದೇಶನ- ಜೋಸೆಫ್. ಸಂಜೆ 7.30.

 

ಪ್ರತಿಕ್ರಿಯಿಸಿ (+)