ನಗರದಲ್ಲಿ ಇಂದು, ನಾಳೆ- ಫೆ.18-19

7

ನಗರದಲ್ಲಿ ಇಂದು, ನಾಳೆ- ಫೆ.18-19

Published:
Updated:

ಇಂದು ಮತ್ತು ನಾಳೆ

ಸುಚೇತನಾ ಕಲಾವಿದರು: 45ನೇ ವಾರ್ಷಿಕೋತ್ಸವ ಅಂಗವಾಗಿ ಭಾರತದ ಅಪೂರ್ವ ಚೇತನಗಳು ವಿಶೇಷ ಉಪನ್ಯಾಸ ಸಪ್ತಾಹ ಹಾಗೂ ಭಕ್ತಿಭಾವ ಗೀತೆಗಳ ಗಾಯನದಲ್ಲಿ ಶನಿವಾರ ರಮಣಮಹರ್ಷಿಗಳು ವಿಷಯದ ಕುರಿತು ಡಾ.ಎಸ್.ರಾಮಸ್ವಾಮಿ ಅವರಿಂದ ಉಪನ್ಯಾಸ. ಅರುಣಾ ಗೋಪಿನಾಥ್ ಅವರಿಂದ ಗಾಯನ. ಭಾನುವಾರ ಸಮಾಜ ಶೋಧಕ ಆಚಾರ್ಯ ರಾಮಾನುಜರು ವಿಷಯದ ಕುರಿತು ರಮಾ ಶ್ರೀನಿವಾಸನ್ ಅವರಿಂದ ಉಪನ್ಯಾಸ. ವಾಣಿ ಪುರಾಣಿಕ್ ಹಾಗೂ ಮಂಜುನಾಥ್ ನಾಯಕ್ ಅವರಿಂದ ಗಾಯನ. ಸ್ಥಳ: ವಿನಾಯಕ, ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ, 2ನೇ ಬ್ಲಾಕ್, ರಾಜಾಜಿನಗರ. ಸಂಜೆ 6.ಕಾರಂಜಿ ಶ್ರೀರಾಮ ಸೇವಾ ಸಮಿತಿ ಟ್ರಸ್ಟ್: ಪುರಂದರದಾಸ ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ ಶನಿವಾರ ಶಂಕರ್ ರಾವ್ (ಕೊಳಲು), ದಯಾನಂದ್ ಮೋಹಿತೆ (ಘಟಂ), ರಾಧಾ ಶ್ರೀಧರ್, ಸಂಪಂಗೋಡು ವಿಘ್ನರಾಜ್ ಅವರಿಗೆ ಪದ್ಮಾಸಿನಿ ನರಸಿಂಹಾಚಾರ್ ಪ್ರಶಸ್ತಿ ಪ್ರದಾನ. ಅತಿಥಿ: ಆಸ್ಥಾನ ವಿದ್ವಾನ್ ರಾ.ಸತ್ಯನಾರಾಯಣ. ಸಂಜೆ 5.ಭಾನುವಾರ ಸಂಜೆ 5.30ಕ್ಕೆ ರಂಜಿನಿ ಹಾಗೂ ತಂಡದರಿಂದ ಪುರಂದರದಾಸರ ದೇವರನಾಮ. ಸಂಜೆ 7ಕ್ಕೆ ವಿಜಯ ಲಕ್ಷ್ಮಿ ಹಾಗೂ ತಂಡದವರಿಂದ ತ್ಯಾಗರಾಜ ಉತ್ಸವ ಸಂಪ್ರದಾಯ ಕೀರ್ತನಾ. ಸ್ಥಳ: ದೇವಸ್ಥಾನದ ಆವರಣ, ಬಸವನಗುಡಿ.ರೈಟರ್ಸ್‌ ಬ್ಲಾಕ್ ಉತ್ಸವ: ಶನಿವಾರ `ಪೆರಿರಾ ಬೇಕರಿ ಅಟ್ 76 ಚಾಪೆಲ್ ರೋಡ್~ ಆಂಗ್ಲ ನಾಟಕ ಪ್ರದರ್ಶನ. ಭಾನುವಾರ `ಮಹುವಾ~ ನಾಟಕ ಪ್ರದರ್ಶನ.

ಸ್ಥಳ: ರಂಗಶಂಕರ, ಜೆ.ಪಿ.ನಗರ. ಮಧ್ಯಾಹ್ನ 3.30 ಹಾಗೂ ಸಂಜೆ 7.30.ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಶನಿವಾರ ಸಂಜೆ 6.30ಕ್ಕೆ

ರಾಮದಾಸ್ ಹಾಗೂ ತಂಡದವರಿಂದ ಗಾಯನ. ಭಾನುವಾರ  ಬೆಳಿಗ್ಗೆ9ಕ್ಕೆ ಲಲಿತ ಪಂತುಲು ಹಾಗೂ ತಂಡದಿಂದ ಭಜನೆ. ಸ್ಥಳ:ಮಹಾಲಕ್ಷ್ಮಿಪುರ.ಭೈರಸಂದ್ರ ಭೋವಿ ಜನಾಂಗದ ದೇವಾಲಯಗಳ ಅಭಿವೃದ್ಧಿ ಸಂಘ: ಮಹಾಗಣಪತಿ ಪಾರ್ವತಿ ಸಮೇತಾ, ಅಖಂಡೇಶ್ವರ ಸ್ವಾಮಿ ಜೀರ್ಣೋದ್ಧಾರ ಕಲಾಕರ್ಷಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಶನಿವಾರ ಯೋಗೇಶ್ವರ ಆರಾಧನೆ, ಪ್ರಾತರ್ದೀಕ್ಷಾ ಹೋಮ, ಮಹಾಗಣಪತಿ ಹೋಮ, ನವಗ್ರಹ ಹೋಮ, ಪುಣ್ಯಾಹುತಿ.  ಭಾನುವಾರದ ಸಭಾ ಕಾರ್ಯಕ್ರಮಗಳ ಅತಿಥಿಗಳು: ಅನಿತಾ ಕುಮಾರಸ್ವಾಮಿ,  ಹೇಮಚಂದ್ರ ಸಾಗರ್. ಸ್ಥಳ: ನಂ.7, ಈಶ್ವರ ಸ್ವಾಮಿ ದೇವಾಲಯ, ನಿರ್ವಾಣಿ ಭಗವತಿ ಕಾಂಪೌಂಡ್, ಭೈರಸಂದ್ರ, ಜಯನಗರ 1ನೇ ಬ್ಲಾಕ್ ಪೂರ್ವ. ಬೆಳಿಗ್ಗೆ 7.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry