ನಗರದಲ್ಲಿ ಇಂದು: ಭಾನುವಾರ 14 ಅಕ್ಟೋಬರ್

7

ನಗರದಲ್ಲಿ ಇಂದು: ಭಾನುವಾರ 14 ಅಕ್ಟೋಬರ್

Published:
Updated:

ಆಯುರಾಶ್ರಮ: ಆದಿಚುಂಚನಗಿರಿ ಸಮುದಾಯ ಭವನ, ವಿಜಯನಗರ. ವಿಶ್ವಸಂತೋಷ ಭಾರತಿ ಸ್ವಾಮೀಜಿ ಜನ್ಮದಿನೋತ್ಸವ ಅಂಗವಾಗಿ ಗುರುವಂದನಾ ಕಾರ್ಯಕ್ರಮ. ಸಾನ್ನಿಧ್ಯ- ಆದಿಚುಂಚನಗಿರಿ ಮಹಾಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿ, ಉಡುಪಿ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ, ಉದ್ಘಾಟಕರು- ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅಧ್ಯಕ್ಷತೆ- ಶಾಸಕ ಎಂ.ಕೃಷ್ಣಪ್ಪ, ಮುಖ್ಯ ಅತಿಥಿಗಳು- ಸಂಸದ ಜಯಪ್ರಕಾಶ್ ಹೆಗ್ಡೆ, ಕಾನೂನು ಸಚಿವ ಎಸ್.ಸುರೇಶ್ ಕುಮಾರ್, ವಸತಿ ಸಚಿವ ವಿ.ಸೋಮಣ್ಣ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ಮಧ್ಯಾಹ್ನ 2.30ರಿಂದ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ : ಅಶೋಕ್ ಲೈಲ್ಯಾಂಡ್ ಗ್ರೌಂಡ್, ಪುಷ್ಪಾಂಜಲಿ ಚಿತ್ರಮಂದಿರ ಎದುರು, ಎ.ನಾರಾಯಣಪುರ, ಕೆ.ಆರ್.ಪುರ ರೈಲ್ವೆ ನಿಲ್ದಾಣದ ಹತ್ತಿರ. `ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ~ ಬೃಹತ್ ಸಮಾವೇಶ. ಉದ್ಘಾಟಕರು- ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಅಧ್ಯಕ್ಷತೆ- ಶಾಸಕ ಎ.ಕೃಷ್ಣಪ್ಪ, ಮುಖ್ಯಅತಿಥಿಗಳು- ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಶಾಸಕ ಎಸ್.ಆರ್.ರಾಮಲಿಂಗಾರೆಡ್ಡಿ, ಶಾಸಕ ಕೆ.ಜಿ.ಜಾರ್ಜ್. ಬೆಳಿಗ್ಗೆ 10.30.ವೇದಭಾಷ್ಯ ಪ್ರಕಾಶನ ಸಮಿತಿ: ಆರ್.ವಿ. ಶಿಕ್ಷಕರ ಕಾಲೇಜು ಸಭಾಂಗಣ, ಆರ್.ವಿ. ರಸ್ತೆ, ಅಶೋಕ ಪಿಲ್ಲರ್ ಹತ್ತಿರ, ಜಯನಗರ 2ನೇ ಬ್ಲಾಕ್. ಸ್ವಾಮಿ ದಯಾನಂದ ಸರಸ್ವತಿ ಅವರ ಕನ್ನಡ ವೇದಭಾಷ್ಯ ಹದಿನೆಂಟನೆಯ ಸಂಪುಟ `ಋಗ್ವೇದ ಭಾಷ್ಯ~ (ಭಾಗ-6) ಲೋಕಾರ್ಪಣೆ- ಕಾನೂನು ಸಚಿವ ಎಸ್. ಸುರೇಶ್ ಕುಮಾರ್, ಅಧ್ಯಕ್ಷತೆ- ತಪಸೀಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ಸ್ವಾಮಿ ದಿವ್ಯ ಜ್ಞಾನಾನಂದ. ಅತಿಥಿ-ಸ್ವಾತಂತ್ರ್ಯ ಹೋರಾಟಗಾರ  ಎಚ್.ಎಸ್. ದೊರೆಸ್ವಾಮಿ. ಬೆಳಿಗ್ಗೆ 10.ಮಹಾವೀರ ಮಿಷನ್: ಎಚ್. ಬಿ. ಸಮಾಜ ಸಭಾಂಗಣ, ಗಾಂಬಜಾರ್, ಬಸವನಗುಡಿ. ಬೆಳಿಗ್ಗೆ 10ಕ್ಕೆ ಉದ್ಘಾಟನೆ ಹಾಗೂ ಗ್ರಂಥಗಳ ಲೋಕಾರ್ಪಣೆ ಸಮಾರಂಭ. ಉದ್ಘಾಟನೆ- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ. ಅಧ್ಯಕ್ಷತೆ- ವಿಮರ್ಶಕ ಡಾ. ಪಿ.ವಿ. ನಾರಾಯಣ, ಹೊ.ಶ್ರೀ. ವಸಂತಕುಮಾರ್ ಅವರ `ಜೈನ ರಾಮಾಯಣ: ಭಾಗ-1~, `ಹೊಳಲ್ಕೆರೆ ಜಿನಮಂದಿರದ ಜೀರ್ಣೋದ್ಧಾರದ ಕಥೆ~ ಕೃತಿಗಳ ಲೋಕಾರ್ಪಣೆ ಬೆಂಗಳೂರು ದೂರದರ್ಶನ ಕೇಂದ್ರದ ಉಪಮಹಾನಿರ್ದೇಶಕ ಡಾ.ಮಹೇಶ ಜೋಷಿ ಅವರಿಂದ. ಅತಿಥಿ-ಅತ್ತಿಮಬ್ಬೆ ಪ್ರತಿಷ್ಠಾನದ ಸಂಸ್ಥಾಪಕರಾದ ಮನೋಹರಿ ಪಾರ್ಥಸಾರಥಿ. ಮಧ್ಯಾಹ್ನ 12.30ಕ್ಕೆ `ಭರತ-ಬಾಹುಬಲಿ ಪ್ರಸಂಗ~ ಗೋಷ್ಠಿ. ಅಧ್ಯಕ್ಷತೆ, ನಾಟ್ಯರಾಣಿ ನೀಲಾಂಜನೆ ಪ್ರಸಂಗ ಕುರಿತು ಉಪನ್ಯಾಸ- ಸಾಹಿತಿ ಡಾ. ಸಾ.ಶಿ. ಮರುಳಯ್ಯ, ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೋ.ವೆಂ. ರಾಮಕೃಷ್ಣೇಗೌಡ. ಮಧ್ಯಾಹ್ನ 2ಕ್ಕೆ ಡಾ. ಎ.ವಿ. ಪ್ರಸನ್ನ ಮತ್ತು ನಿರ್ಮಲಾಪ್ರಸನ್ನ ಅವರಿಂದ ಗಮಕ ವಾಚನ- ವ್ಯಾಖ್ಯಾನ. ಕಾವ್ಯಭಾಗ- ಪಂಪಸಾಹಿತ್ಯ. ಮಧ್ಯಾಹ್ನ 3ಕ್ಕೆ ಗೋಷ್ಠಿಯಲ್ಲಿ ಪಂಪನ ಕೃತಿಗಳ ಸಮೀಕ್ಷೆ. ಸಂಜೆ 5ಕ್ಕೆ ಸಮಾರೋಪ ಸಮಾರಂಭ. ಅಧ್ಯಕ್ಷತೆ- ಸಾಹಿತಿ ಚಂದ್ರಶೇಖರ ಪಾಟೀಲ. ಅತಿಥಿ- ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್.ವಿನೋದ ಸಾಂಸ್ಕೃತಿಕ ವೇದಿಕೆ: ಕೆನ್ ಕಲಾ ಶಾಲೆ, ಶೇಷಾದ್ರಿಪುರ ಪೊಲೀಸ್ ಠಾಣೆ ಹಿಂಭಾಗ, ಶೇಷಾದ್ರಿಪುರ. ಗಾಂ ಜಯಂತಿ ಪ್ರಯುಕ್ತ ರಾಷ್ಟ್ರಪಿತನಿಗೆ ನುಡಿ-ಗೀತ ನಮನ ಹಾಗೂ ಕವಿಗೋಷ್ಠಿ. ಕುಮಾರ್ ಕಲ್ಚರಲ್ ಅಕಾಡೆಮಿ ತಂಡದವರಿಂದ ಗಾಂ ಕುರಿತ ಗೀತೆಗಳು. ಅಧ್ಯಕ್ಷತೆ- ಕವಿ ರವಿಕಿರಣ್. `ಗಾಂಧೀಜಿ ಜೀವನ ಮತ್ತು ಸಾಧನೆ~ ಕುರಿತು ಸಾಹಿತಿ ಡಿ.ಎ. ಲಕ್ಷ್ಮೀನಾಥ್ ಅವರಿಂದ ಉಪನ್ಯಾಸ. ಬೆಳಿಗ್ಗೆ 10.30.ಸಂಧ್ಯಾದೀಪ ಟ್ರಸ್ಟ್: ಜ್ಯೋತಿ ಸಭಾಂಗಣ, ಸಂಧ್ಯಾದೀಪ ವೃದ್ಧಾಶ್ರಮ, 39ನೇ ಕ್ರಾಸ್, ಪೂರ್ಣಪ್ರಜ್ಞಾ ಬಡಾವಣೆ. ನವೀಕೃತ ಕೊಠಡಿಗಳ ಲೋಕಾರ್ಪಣೆ ಮತ್ತು `ಅಕ್ಕರೆಯ ಅಮ್ಮಯ್ಯ~ (ದಿ. ಸರೋಜಮ್ಮ ಅವರ ನೆನಪು) ಪುಸ್ತಕ ಬಿಡುಗಡೆ- ಚಿಂತಕ ಡಾ.ಕೆ. ಮರುಳಸಿದ್ದಪ್ಪ, ಅಧ್ಯಕ್ಷತೆ- ಪತ್ರಕರ್ತೆ ಡಾ. ವಿಜಯಾ, ಉದ್ಘಾಟನೆ- ಶಾಸಕ ಎಂ. ಕೃಷ್ಣಪ್ಪ, ಕೃತಿ ಕುರಿತು- ಸಾಹಿತಿ ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ, ಗೀತಗಾಯನ- ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ. ಬೆಳಿಗ್ಗೆ 10.30.ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್: ಡಾ. ಡಿ. ವೀರೇಂದ್ರ ಹೆಗ್ಗಡೆ ಸಭಾಭವನ, ಕರ್ನಾಟಕ ಜೈನ ಭವನ, ಕೆ.ಆರ್. ರಸ್ತೆ. 24ನೇ ವಾರ್ಷಿಕೋತ್ಸವ, ಸುಧಾರ್ಥಿ ಹಾಸನ ಅವರ `ಸಿರಿಭೂವಲಯದ ಒಳನೋಟ~ ಕೃತಿ ಲೋಕಾರ್ಪಣೆ- ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಸಾನಿಧ್ಯ- ಮುನಿಶ್ರೀ ಪುಣ್ಯಸಾಗರಜಿ ಮಹಾರಾಜ, ಉದ್ಘಾಟನೆ - ಹಿರಿಯ ಸಂಶೋಧಕ ಪ್ರೊ. ಹಂಪ ನಾಗರಾಜಯ್ಯ, ಅಧ್ಯಕ್ಷತೆ- ಟ್ರಸ್ಟ್‌ನ ಅಧ್ಯಕ್ಷ ಎಸ್. ನಾಗಕುಮಾರ್. ಮಧ್ಯಾಹ್ನ 3.ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ:  ಪೀರ್ ಬಯಲು ರಂಗಸ್ಥಳ, ನಂ.36, ಬಿ.ವಿ.ಕಾರಂತ ರಸ್ತೆ, ಬನಶಂಕರಿ, 2ನೇ ಹಂತ. ಡಾ.ಹೊ.ಮ. ಪಂಡಿತಾರಾಧ್ಯ ಅವರಿಂದ `ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ~ ಕುರಿತು ಉಪನ್ಯಾಸ. `ಕಿನ್ನೂರಿ ಬೆಳಕಲ್ಲಿ~ ನಾಟಕ ಪ್ರದರ್ಶನ. ರಚನೆ- ಡಾ. ಬೈರೇಗೌಡ. ನಿರ್ದೇಶನ- ರಾಮಕೃಷ್ಣ ಬೆಳ್ತೂರು. ಸಂಜೆ 5.30.ಅಕ್ಷರದಾಹ: ಪೇಜ್‌ವರ್ಲ್ಡ್ ಇಂಡಿಯಾ, ನಂ.9, 1ನೇ ಮುಖ್ಯರಸ್ತೆ, 1ನೇ ಕ್ರಾಸ್, ಸಂತೃಪ್ತಿನಗರ, ಕೊತ್ತನೂರು ದಿನ್ನೆ ಮುಖ್ಯರಸ್ತೆ, ಜೆ.ಪಿ. ನಗರ 7ನೇ ಹಂತ (ಕಾಕಾಲ್ ಕೈರುಚಿ ಹಿಂದೆ/ಬಿಗ್ ಬಜಾರ್ ಎದುರು). `ಪ್ರಜಾವಾಣಿ~ ಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರೊಡನೆ ಒಂದು ಸಂಜೆ. ನಂತರ ಕನ್ನಡ ಹಾಗೂ ಹಿಂದಿ ಲಘುಸಂಗೀತ. ಗಾಯನ- ರವಿ ಮೂರೂರು, ತಬಲಾ- ತ್ರಿಲೋಚನ ಕಂಪ್ಲಿ. ಸಂಜೆ 5.15.ಅಂಕಿತ ಪುಸ್ತಕ: ಗಾಂಬಜಾರ್, ಹನಿಗವಿ `ಡುಂಡಿರಾಜ್ ಅವರೊಡನೆ ಒಂದು ಸಂಡೆ~ ಬೆಳಿಗ್ಗೆ 10.30.ಸರಸ್ವತಿ ಗಾಯನ ಸಭಾ: ಉನ್ನತಿ ಕೇಂದ್ರ, ನಂ. 1, ಗಣೇಶ ದೇವಸ್ಥಾನ ರಸ್ತೆ, ಎನ್‌ಜಿಇಎಫ್ ಲೇಔಟ್, ಸದಾನಂದನಗರ. ಮೋಹನ್ ಸಂತಾನಮ್, ವಿಠಲ್ ರಂಗನ್, ಕೆ.ಯು. ಜಯಚಂದ್ರ ರಾವ್ ಅವರಿಂದ ತಿಂಗಳ ಸಂಗೀತ ಕಾರ್ಯಕ್ರಮ. ಸಂಜೆ 5.ಬೆಂಗಳೂರು ರೋಟರಿ ಹೈಗ್ರೌಂಡ್ಸ್: ಸೋಫಿಯಾ ಸ್ಕೂಲ್ ಸಭಾಂಗಣ, ಚಾಲುಕ್ಯ ಹೋಟೆಲ್ ಬಳಿ ಹೈ ಗ್ರೌಂಡ್ಸ್. ಬಾಲಿವುಡ್ ನಟ ದಿ. ರಾಜೇಶ್ ಖನ್ನಾ ಅವರ ಸ್ಮರಣಾರ್ಥ ಬಾಬುಲ್ ಸುಪ್ರಿಯೊ ಅವರಿಂದ `ಆರಾಧನಾ~ ಕಾರ್ಯಕ್ರಮ. ಸಂಜೆ 6.15.ಸುಚೇತನಾ ಕಲಾವಿದರು: ಎ.ಜೀಸ್ ಕಲಾಶ್ರೀ ಸಭಾಂಗಣ, ನಂ 12, 14ನೇ ಮುಖ್ಯರಸ್ತೆ, 9ನೇ ಬ್ಲಾಕ್, ನಾಗರಬಾವಿ 2ನೇ ಹಂತ, ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಂದ `ಮಕ್ಕಳ ಲಾಲನೆ-ಪಾಲನೆ ಮತ್ತು ಪೋಷಕರ ಪಾತ್ರ~ ಕುರಿತು ವಿಚಾರ ವಿನಿಮಯ. ಅತಿಥಿ- ಕಿರುತೆರೆ ನಟಿ ಮಾಲತಿ ಸರದೇಶಪಾಂಡೆ. ಸಂಜೆ 4.30ಕೆನ್ ಶಾಲೆ: ಕೆನ್ ಶಾಲೆಯ ಆವರಣ, ಶೇಷಾದ್ರಿಪುರಂ. 3ಡಿ ಛಾಯಾಚಿತ್ರ ಪ್ರದರ್ಶನ ಬೆಳಿಗ್ಗೆ 10.30ರಿಂದ

ಶಂಕರ ಜಯಂತಿ ಮಂಡಳಿ : ಶಂಕರಕೃಪಾ, ನಂ.45, ಶಂಕರ ಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಶಿವರಾಮ ಅಗ್ನಿಹೋತ್ರಿ ಅವರಿಂದ `ಸಮಾರೋಪ ಮತ್ತು ಸಾಧನ ಸಿದ್ಧಾಂತ ಪ್ರಕ್ರಿಯಾ~ ಕುರಿತು ಉಪನ್ಯಾಸ. ಸಂಜೆ 6.30.ಸಮ್ಮಿಲನ: ವಲ್ಲಭವ ನಿಕೇತನ, ಗಾಂಧಿಭವನದ ಬಳಿ ಶಿವಾನಂದ ವೃತ್ತ, ಶೇಷಾದ್ರೀಪುರ. ಮಾಸಿಕ ಕವಿಗೋಷ್ಠಿ. ಅತಿಥಿಗಳು- ಕನ್ನಡ ಪ್ರಾಧ್ಯಾಪಕ ಆರ್.ವಾದಿರಾಜ್, ಶಿಕ್ಷಕ ಉದಂತ ಶಿವಕುಮಾರ್, ಅಧ್ಯಕ್ಷತೆ- ಕವಿ ಬಿ.ಎಸ್.ಶ್ರೀನಾಥ್, ಉಪಸ್ಥಿತಿ - ಸಮ್ಮಿಲನ ಪ್ರಧಾನ ಸಂಚಾಲಯ ಕುವರ ಯಲ್ಲಪ್ಪ. ಬೆಳಿಗ್ಗೆ 10.30.ಸೋಲ್ ಆರ್ಟ್ ಗ್ಯಾಲರಿ: ಕರ್ನಾಟಕ ಚಿತ್ರಕಲಾ ಪರಿಷತ್ತು, ಗ್ಯಾಲರಿ ನಂ. 4, ಆರ್ಟ್ ಕಾಂಪ್ಲೆಕ್ಸ್, ಕುಮಾರಕೃಪಾ ರಸ್ತೆ. ಸುರೇಖಾ ಎಚ್.ಎಂ. ಅವರ ಚಿತ್ರಕಲಾ ಪ್ರದರ್ಶನ. ಸಂಜೆ 6.ಸಾಂಸ್ಕೃತಿಕ ಕಾರ್ಯಕ್ರಮಗಳು

ಶ್ರೀರಾಮ ಲಲಿತಕಲಾ ಮಂದಿರ: ಗಾಯನ ಸಮಾಜ ಸಭಾಂಗಣ, ಕೆ.ಆರ್. ರಸ್ತೆ, ಬಸವನಗುಡಿ. `ಇಂಡಿಯನ್ ನ್ಯಾಷನಲ್ ಆರ್ಕೆಸ್ಟ್ರಾ~ ಎಂಬ ಕಾರ್ಯಕ್ರಮ. ಡಾ. ಜಯಂತಿ ಕುಮಾರೇಶ್ (ವೀಣೆ), ಚಾರುಲತಾ ರಾಮಾನುಜಂ, ಅಕ್ಕರೈ ಎಸ್. ಶುಭಲಕ್ಷ್ಮೀ, ಅಕ್ಕರೈ ಎಸ್. ಸ್ವರ್ಣಲತಾ (ವಯೊಲಿನ್), ಉಸ್ತಾದ್ ರಫೀಕ್ ಖಾನ್, ಉಸ್ತಾದ್ ಶಫೀಕ್ ಖಾನ್ (ಸಿತಾರ್), ಡಾ. ರವೀಂದ್ರ ಕಟೋಟಿ (ಹಾರ್ಮೋನಿಯಂ), ಆನಂದ ಪ್ರಸನ್ನ ಪಟ್ನಾಯಕ್ ಭುಟ್ಟೊ ಮತ್ತು ಸಿಕ್ಕಿಲ್ ಮಾಲಾ ಚಂದ್ರಶೇಖರ್ (ಕೊಳಲು), ಅನಂತ ಆರ್. ಕೃಷ್ಣನ್ (ಮೃದಂಗ), ಜಿ. ಗುರುಪ್ರಸನ್ನ (ಖಂಜಿರ), ಉದಯರಾಜ್ ಕರ್ಪೂರ್ (ತಬಲಾ), ಡಾ. ಎಸ್. ಕಾರ್ತಿಕ್ (ಘಟಂ), ಪ್ರಮಥ್ ಕಿರಣ್ (ವಿಶೇಷ ಪಕ್ಕವಾದ್ಯ), ಗಿರೀಶ್ ಗೋಪಾಲಕೃಷ್ಣನ್ (ಕೀಬೋರ್ಡ್), ಅಂಬರೀಶ್ ಅಮರವಾಡಿ ಮತ್ತು ರಮ್ಯಾ ರಾಘವನ್ (ವೀಣೆ). ಸಂಜೆ 6.ರಾಗ ಸಂಗಮ: ಕರ್ನಾಟಕ ಟೆಲಿಕಾಂ, ಅಫಸೋವ ವೆಲ್‌ಫೇರ್ ಅಸೋಸಿಯೇಷನ್, `ಸಿ~ ಬ್ಲಾಕ್, ಕೊಡಿಗೇಹಳ್ಳಿ ರೈಲ್ವೆ ಸ್ಟೇಷನ್ ಹತ್ತಿರ, ಸಹಕಾರನಗರ. ಕೌಶಿಕ್ ಐತಾಳ್ ಅವರಿಂದ ಗಾಯನ, ಉಮಾಕಾಂತ್ ಪುರಾಣಿಕ್ (ಹಾರ್ಮೋನಿಯಂ), ಗುರುಚರಣ್ ಗರುಡ್ (ತಬಲ). ಸಂಜೆ 6.ಸಂಗೀತಾ ಕೃಪಾ ಕುಟೀರ: ದತ್ತಾತ್ರೇಯ ದೇವಸ್ಥಾನ, 3ನೇ ಬ್ಲಾಕ್, 6ನೇ ಮುಖ್ಯರಸ್ತೆ, ತ್ಯಾಗರಾಜನಗರ. ಕವಿತಾ ಟಿ.ಎಸ್. ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ. ಹಾರ್ಮೋನಿಯಂ-ಕೆ.ಗುರುರಾಜ್, ಎಲ್.ಎಸ್. ಸುದತ್ತ (ತಬಲ). ಸಂಜೆ 5.45.

 

ರಂಗಭೂಮಿ

ರಂಗಶಂಕರ: 2ನೇ ಹಂತ, ಜೆ.ಪಿ.ನಗರ. `ದಿ ಕಟ್ಕತಾ ಪೊಪೆಟ್ ಆರ್ಟ್ಸ್ ಟ್ರಸ್ಟ್~ ತಂಡದಿಂದ `ಬಾಲಿವುಡ್ ಬ್ಯಾಂಡ್‌ವ್ಯಾಗನ್~ ನಾಟಕ ಪ್ರದರ್ಶನ. ನಿರ್ದೇಶನ- ಅನುರೂಪ ರಾಯ್. ಮಧ್ಯಾಹ್ನ 3.30, ರಾತ್ರಿ 7.30.ರಿನೈಸನ್ಸ್: ರಿನೈಸನ್ಸ್ ಗ್ಯಾಲರಿ, ನಂ 104, ಕನ್ನಿಂಗ್‌ಹ್ಯಾಮ್ ರಸ್ತೆ. ಅಶ್ವಿನಿ ರಾವ್, ದೀಪ್ತಿ ರಘುರಾಮ್, ಭಾಸ್ಕರ್ ರಾವ್, ಜಿ. ಜಗದೀಶ್, ಮಿಲಿಂದ್ ನಾಯಕ್, ಸ್ವಾಮಿ ನಾಯಕ್ ಅವರ ಕಲಾ ಪ್ರದರ್ಶನ. ಬೆಳಿಗ್ಗೆ 11.ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ: ಕಿ.ರಂ. ನುಡಿಮನೆ, ನಂ.36, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಪ್ರಕಾಶ್ ಬೆಳವಾಡಿ ನಿರ್ದೇಶನದ `ಬಿಯಾಂಡ್ ದಿ ಲ್ಯಾಂಡ್ ಆಫ್ ಹತ್ತಮಾಲಾ~ ನಾಟಕ ಪ್ರದರ್ಶನ. ಸಂಜೆ 7.30.ಭಾರತೀಯ ವಿದ್ಯಾಭವನ, ಪ್ರಯೋಗ ಭವನ: ಭವನದ ಸಭಾಂಗಣ, ರೇಸ್‌ಕೋರ್ಸ್ ರಸ್ತೆ. ಡಾ. ಚಂದ್ರಶೇಖರ ಕಂಬಾರ ಅವರ `ಶಿವರಾತ್ರಿ~ ನಾಟಕ ಪ್ರದರ್ಶನ. ನಿರ್ದೇಶನ- ಕೃಷ್ಣಮೂರ್ತಿ ಕವತ್ತಾರ್. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮಗಳು

ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡರಸ್ತೆ, ಅಮರಜ್ಯೋತಿ ನಗರ. ಕಲ್ಲಾಪುರ ಪವಮಾನಾಚಾರ್ಯ ಅವರಿಂದ `ಗರುಡ ಪುರಾಣ~ ಪ್ರವಚನ. ಸಂಜೆ 7.ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತ ಮಂಡಳಿ: ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್ ಜಯನಗರ. ವಸುಧಾ ಅವರಿಂದ ದೇವರ ನಾಮಗಳು. ಸಂಜೆ 6.30.ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ನಂ. 6, ಎ.ಪಿ.ಕೆ.ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ. ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ ಅವರಿಂದ `ಶ್ರೀಮದ್ಭಗವದ್ಗೀತೆಯ 11ನೇ ಅಧ್ಯಾಯ~ ಪ್ರವಚನ. ಬೆಳಿಗ್ಗೆ 9.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry