ಬುಧವಾರ, ಜೂನ್ 16, 2021
28 °C

ನಗರದಲ್ಲಿ ಇಂದು ಭಾನುವಾರ 16 ಮಾರ್ಚ್ 2014

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಲೀಗಲ್ ಲಿಟರಸಿ: ಬ್ಯಾಂಕ್ವೆಟ್‌ ಸಭಾಂಗಣ, ರಾಜಭವನ. ರಾಜ್ಯಪಾಲ ಎಚ್‌.ಆರ್.ಭಾರದ್ವಾಜ್‌ ಅವರಿಂದ ಪ್ರೊ.ಬಿ.ಎನ್.ಸಂಪತ್‌ ಅವರ ‘ಹಿಂದೂ ಲಾ’ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಅತಿಥಿ– ರಾಜ್ಯಸಭಾ ಸದಸ್ಯ ಎಂ.ರಾಮಾ ಜೋಯಿಸ್‌. ಸಂಜೆ 6.ಚಾಮರಾಜಪೇಟೆ ಬಿಜೆಪಿ ಘಟಕ: ಮನಿದಾರಿ ಅಪಾರ್ಟ್‌ಮೆಂಟ್‌, ಚಾಮರಾಜಪೇಟೆ ಪೊಲೀಸ್‌ ಠಾಣೆ ಪಕ್ಕ. ಮತದಾರರ ಜೊತೆಗೆ ಮಾತುಕತೆ ಕಾರ್ಯಕ್ರಮ. ಉಪಸ್ಥಿತಿ– ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್‌, ಪಾಲಿಕೆ ಸದಸ್ಯ ಬಿ.ವಿ.ಗಣೇಶ್‌. ಬೆಳಿಗ್ಗೆ 9.ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌: ಗಾಯನ ಸಮಾಜ, ಕೆ.ಆರ್.ರಸ್ತೆ. ‘ಮರೆಯಲಾಗದ ಮಹನೀಯರು’ ಸಿ.ಎಸ್‌.ಅಶ್ವತ್ಥ್‌, ಡಾ.ಜಿ.ಎಸ್‌.ಶಿವರುದ್ರಪ್ಪ, ಆರ್‌.ಕೆ.ಶ್ರೀಕಂಠನ್‌, ಯಶವಂತ ಹಳಿಬಂಡಿ ಅವರಿಗೆ ನುಡಿನಮನ, ಗೀತ ಗಾಯನ, ನೃತ್ಯ ಸಮರ್ಪಣ  ಕಾರ್ಯಕ್ರಮ. ಉದ್ಘಾಟನೆ– ಮೈಸೂರು ವಿ.ಸುಬ್ರಹ್ಮಣ್ಯ. ಅಧ್ಯಕ್ಷತೆ – ಕವಿ ಎಚ್‌.ಎಸ್.ವೆಂಕಟೇಶಮೂರ್ತಿ. ಅತಿಥಿಗಳು– ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ.ಪ್ರಸಾದ್, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ರತ್ನಮಾಲಾ ಪ್ರಕಾಶ್‌. ಬೆಳಿಗ್ಗೆ 10.30. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಎಚ್.ಎ.ಎಲ್‌ ಕೇಂದ್ರೀಯ ಕನ್ನಡ ಸಂಘ: ಕೇಂದ್ರೀಯ ಕನ್ನಡ ಗ್ರಂಥಾಲಯ, ಎಚ್‌.ಎ.ಎಲ್‌. ಕನ್ನಡ ಸಂಸ್ಕೃತಿ ಶಿಬಿರ. ಪ್ರಸ್ತಾವನೆ– ಸಂಘದ ಅಧ್ಯಕ್ಷ ಎಂ.ಗೌಡಯ್ಯ. ಉದ್ಘಾಟನೆ – ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ. ಅಧ್ಯಕ್ಷತೆ – ಸಂಘದ ಗೌರವ ಅಧ್ಯಕ್ಷ ಬಿ.ವಿಜಯಕುಮಾರ್‌. ಬೆಳಿಗ್ಗೆ 9.30.ಜೈವಿಕ್‌ ಕೃಷಿಕ್‌ ಸೊಸೈಟಿ ಮತ್ತು ತೋಟಗಾರಿಕೆ ಇಲಾಖೆ: ಜೈವಿಕ್‌ ಮಾಲ್‌, ನಂದಿನಿ ಬಡಾವಣೆ. ‘ಜೈವಿಕ್‌ ಮಾಲ್‌’ ಸಾವಯವ ಪದಾರ್ಥಗಳ ಮಾರಾಟ ಮಳಿಗೆ ಉದ್ಘಾಟನಾ ಕಾರ್ಯಕ್ರಮ. ಅತಿಥಿಗಳು– ಪರಿಸರವಾದಿ ಡಾ.ಎ.ಎನ್‌.ಯಲ್ಲಪ್ಪರೆಡ್ಡಿ, ನಟ ರಮೇಶ್‌ ಭಟ್‌. ಬೆಳಿಗ್ಗೆ 10.ಫೋರ್ಟಿಸ್‌ ಆಸ್ಪತ್ರೆಗಳು: ಆಸ್ಪತ್ರೆಯ ಸಭಾಂಗಣ, ಬನ್ನೇರುಘಟ್ಟ ರಸ್ತೆ. ‘40 ವರ್ಷದ ನಂತರ ಆರೋಗ್ಯ ರಕ್ಷಣೆ’ ಕುರಿತು ಹೃದಯ ತಜ್ಞ ಡಾ.ರಾಜಪಾಲ್‌ ಸಿಂಗ್‌ ಮತ್ತು ಸ್ತ್ರೀರೋಗ ತಜ್ಞೆ ಡಾ.ಮನೀಶಾ ಸಿಂಗ್‌ ಅವರಿಂದ ಉಪನ್ಯಾಸ. ಬೆಳಿಗ್ಗೆ 10.30.ಗೌಡಾಸ್ ಕೂಟ: ಹುಚ್ಚಯ್ಯ ಮನೆಯ ಸಭಾಂಗಣ, ಶ್ರೀನಗರ. ಹಟ್ಟಿಯಿಂದ ಹಟ್ಟಿಗೆ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ‘ಶಾಂತವೇರಿ ಗೋಪಾಲಗೌಡ ಅವರ ಬದುಕು ಮತ್ತು ಆದರ್ಶ’ ಕುರಿತು ಲೇಖಕಿ ನಳಿನಿ ವೆಂಕಪ್ಪ ಅವರಿಂದ ಉಪನ್ಯಾಸ. ಬೆ. 11.ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ: ಜಗಜ್ಯೋತಿ ಬಸವೇಶ್ವರ ಪ್ರೌಢಶಾಲೆ ಮೈದಾನ, ರಾಜಾಜಿನಗರ 2ನೇ ಹಂತ. ಹೋಳಿಹಬ್ಬ ಆಚರಣೆ ಕಾರ್ಯಕ್ರಮ. ಬೆಳಿಗ್ಗೆ 10.ಬಿ.ಕೆ.ಮರಿಯಪ್ಪ ಧರ್ಮಸಂಸ್ಥೆ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಬಿ.ಕೆ.ಮರಿಯಪ್ಪ ಅವರ 136ನೇ ಜಯಂತ್ಯುತ್ಸವ ಹಾಗೂ ಬಿ.ಕೆ.ಮರಿಯಪ್ಪ ವಿದ್ಯಾರ್ಥಿನಿಲಯದ ಹಿರಿಯ ವಿದ್ಯಾರ್ಥಿಗಳ ಸಮಾವೇಶ. ಉದ್ಘಾಟನೆ – ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ. ಅಧ್ಯಕ್ಷತೆ – ಧರ್ಮಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿ ಎನ್‌.ಪುಟ್ಟರುದ್ರ. ಮಧ್ಯಾಹ್ನ 3.ಶ್ರೀ ಮಾ ಶಾರದಾ ಸೇವಾ ಟ್ರಸ್ಟ್‌: ಪ್ರಾರ್ಥನಾ ಮಂದಿರ, ಜಯನಗರ 1ನೇ ಹಂತ. ‘ಮರ್ಯಾದಾ ಪುರುಷೋತ್ತಮ ಶ್ರೀರಾಮ’ ಕುರಿತು ಅಕಾಡೆಮಿ ಫಾರ್ ಕ್ರಿಯೇಟಿವ್‌ ಟೀಚಿಂಗ್‌ನ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ ಅವರಿಂದ ಉಪನ್ಯಾಸ. ಸಂಜೆ 4.ಬಸವನಗುಡಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು: ಬಿಎಂಶ್ರೀ ಪ್ರತಿಷ್ಠಾನದ ಸಭಾಂಗಣ, ಎನ್‌.ಆರ್.ಕಾಲೋನಿ. ‘ಬಸವನಗುಡಿ ಉತ್ಸವ–2014’. ಉದ್ಘಾಟನೆ – ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ. ಅಧ್ಯಕ್ಷತೆ – ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಶ್‌. ಸಂಜೆ 4.30.ಭಾರತೀಯ ವೈದ್ಯಕೀಯ ಸಂಸ್ಥೆ ಮತ್ತು ಭಾರತೀಯ ಹೃದಯ ರೋಗ ತಜ್ಞರ ಸಂಸ್ಥೆ: ಐಎಂಎ ಸಭಾಂಗಣ, ಚಾಮರಾಜಪೇಟೆ. ಸಾರ್ವಜನಿಕ ಆರೋಗ್ಯದ ಬಗ್ಗೆ ವೈದ್ಯಕೀಯ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಹೃದಯ ನಿಂತಾಗ’ ಕುರಿತು ಹೃದ್ರೋಗ ತಜ್ಞ ಡಾ.ಎಸ್.ವೆಂಕಟೇಶ್‌ ಮತ್ತು ‘ಹಲ್ಲಿನ ತೊಂದರೆಗಳು’ ಕುರಿತು ಡಾ.ವಿಫುಲ್‌ ಮಲಖನ್‌ ಅವರಿಂದ ಉಪನ್ಯಾಸ. ಸಂಜೆ 6.ಸಾಹಿತ್ಯ ಕಾರ್ಯಕ್ರಮ

ಪ್ರಜ್ಞೆ ಪ್ರಕಾಶನ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಟಿ.ಯಲ್ಲಪ್ಪ ಅವರ ‘ನವಿಲಿಗೆ ಬಿದ್ದ ಕತ್ತಲ ಕನಸು’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ. ಬಿಡುಗಡೆ– ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ. ಪುಸ್ತಕ ಕುರಿತು– ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್. ಅಧ್ಯಕ್ಷತೆ – ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ. ಬೆಳಿಗ್ಗೆ 10.ಹೇಮಂತ ಸಾಹಿತ್ಯ: ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣ, ಬಸವನಗುಡಿ. ಡಾ.ಕಮಲಾದಾಸ್‌ ಅವರ ‘ಸಮಗ್ರ ಕಥೆಗಳು’ (ಕನ್ನಡಕ್ಕೆ– ಕೆ.ಕೆ.ಗಂಗಾಧರ್), ‘ಸಮಗ್ರ ಕಾದಂಬರಿಗಳು’ (ಕನ್ನಡಕ್ಕೆ –ಡಾ.ಅಶೋಕ್ ಕುಮಾರ್), ಮುನ್ಶೀ ಪ್ರೇಮಚಂದ್‌ ಅವರ  ‘ಆಯ್ದ ಮೂವತ್ತು ಕಥೆಗಳು’ (ಕನ್ನಡಕ್ಕೆ– ಎಚ್‌.ವಿ. ರಾಮಚಂದ್ರರಾವ್‌), ಆಚಾರ್ಯ ಚತುರಸೇನ ಅವರ ‘ವೈಶಾಲಿಯ ನಗರವಧು’ (ಕನ್ನಡಕ್ಕೆ– ಎಚ್‌.ವಿ. ರಾಮಚಂದ್ರ ರಾವ್‌), ಚಿತ್ರಾ ಮುದ್‌ಗಲ ಅವರ ‘ಆದಿ–ಅನಾದಿ ಸಂಪುಟ –1’ ಮತ್ತು ‘ಆದಿ –ಅನಾದಿ  ಸಂಪುಟ –2’ (ಕನ್ನಡಕ್ಕೆ– ಆರ್‌.ಪಿ. ಹೆಗಡೆ) ಪುಸ್ತಕ ಬಿಡುಗಡೆ ಕಾರ್ಯಕ್ರಮ. ಅಧ್ಯಕ್ಷತೆ – ವಿಮರ್ಶಕ ಪ್ರೊ.ಎಂ.ಎಚ್‌.ಕೃಷ್ಣಯ್ಯ. ಪುಸ್ತಕಗಳ ಬಿಡುಗಡೆ– ಎಚ್.ಎಸ್‌.ವಿ. ಅತಿಥಿಗಳು– ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಹಂಪಿ ಕನ್ನಡ ವಿವಿಯ ಅನುವಾದ ವಿಭಾಗದ ಮುಖ್ಯಸ್ಥ ಡಾ. ಮೋಹನ್‌ ಕುಂಟಾರ್, ನಿವೃತ್ತ ಪ್ರಾಧ್ಯಾಪಕಿ ಬಿ.ವೈ.ಲಲಿತಾಂಬ. ಬೆ. 10.30.ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌, ಬಸವನಗುಡಿ: ಡಾ.ನಾಗರಾಜ್‌ ನೀರಗುಂದ ಅವರ ‘ತಿರುಪತಿ ಮಲ್ಲಿಗೆ ರಾಮ, ದುರ್ಗದ ಸಂಪಿಗೆ ರಾಮ’ ನಾಟಕ ಮತ್ತು ಡಾ.ಅನಸೂಯಾದೇವಿ ಅವರ ‘ಎದೆ ಹಾಸಿನ ಭಾವ ಹೂಗಳು’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ. ಅಧ್ಯಕ್ಷತೆ– ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. ಬಿಡುಗಡೆ– ಕವಿ ಎನ್‌.ಎಸ್.ಲಕ್ಷ್ಮೀನಾರಾಯಣ ಭಟ್ಟ ಮತ್ತು ಸಾಹಿತಿ ಡಾ.ಸಿ.ವೀರಣ್ಣ. ಬೆಳಿಗ್ಗೆ 10.30.ಭಾರತ ಯಾತ್ರಾ ಕೇಂದ್ರ: ಸ್ವಾತಂತ್ರ್ಯ ಉದ್ಯಾನ. ಡಾ.ವಸುಂಧರಾ ಭೂಪತಿ ಅವರ ‘ಆರೋಗ್ಯ ಸಂಗಾತಿ –ಸಂಪುಟ 3’ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಅಧ್ಯಕ್ಷತೆ – ಭಾರತ ಯಾತ್ರಾ ಕೇಂದ್ರದ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌. ಪುಸ್ತಕ ಬಿಡುಗಡೆ– ವಿಮರ್ಶಕ ಪ್ರೊ.ಎಂ.ಎಚ್‌.ಕೃಷ್ಣಯ್ಯ. ಅತಿಥಿ– ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು. ಪುಸ್ತಕದ ಕುರಿತು– ಸಾಹಿತಿ ಸುಮಂಗಲಾ ಮುಮ್ಮಿಗಟ್ಟಿ. ಸಂಜೆ 5.30.ಸಾಂಸ್ಕೃತಿಕ ಕಾರ್ಯಕ್ರಮ

ಬಂಟರ ಸಂಘ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಂಗಣ, ವಿಜಯನಗರ. ‘ಯಕ್ಷವೈಭವ’ ಕಾರ್ಯಕ್ರಮದಲ್ಲಿ ‘ಸುದರ್ಶನ ವಿಜಯ’, ‘ವಾಲಿ ಮೋಕ್ಷ’, ‘ವೀರ ಅಭಿಮನ್ಯು’, ‘ಸಂಧಾನ–ಭೇದನ’, ‘ಮಾಗದ ವಧೆ’, ‘ಭಕ್ತ ವೀರಮಣಿ’ ಯಕ್ಷಗಾನ ಪ್ರದರ್ಶನ. ಬೆಳಿಗ್ಗೆ 10. ಸಭಾ ಕಾರ್ಯಕ್ರಮ: ಆಶೀರ್ವಚನ–ಗುರುದೇವದತ್ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ. ಅಧ್ಯಕ್ಷತೆ – ಬಂಟರ ಸಂಘದ ಅಧ್ಯಕ್ಷ ಟಿ.ಅಮರನಾಥ ಹೆಗ್ಡೆ. ಅತಿಥಿಗಳು– ನಿವೃತ್ತ ಐಎಎಸ್‌ ಅಧಿಕಾರಿ ಐ.ಎಂ.ವಿಠಲಮೂರ್ತಿ, ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್‌, ನಟ ರಕ್ಷಿತ್‌ ಶೆಟ್ಟಿ. ಸಂಜೆ 5.ಯಕ್ಷಗಾನ ತಪಸ್ಸಂಘ: ಉದಯಭಾನು ಕಲಾಸಂಘ, ಕೆಂಪೇಗೌಡನಗರ. ‘ಚಂದ್ರಾವಳೀ ವಿಲಾಸ ಹಾಗೂ ಭರತಾಗಮನ’ ಪೌರಾಣಿಕ ಯಕ್ಷಗಾನ ಪ್ರದರ್ಶನ. ಮಧ್ಯಾಹ್ನ 3.ಯಕ್ಷ ಸಿಂಚನ ಟ್ರಸ್ಟ್‌: ಜಯರಾಮ ಸೇವಾ ಮಂಡಳಿ, ಜಯನಗರ 8ನೇ ಹಂತ. ‘ದ್ರೌಪದಿ ಸ್ವಯಂವರ’ ಯಕ್ಷಗಾನ ಪ್ರದರ್ಶನ. ಸಂಜೆ 5. 

ಚಿತ್ಕಲಾ ಸ್ಕೂಲ್ ಆಫ್‌ ಡ್ಯಾನ್ಸ್‌್: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ. ನವ್ಯಶ್ರೀ ಕೆ.ನಾಗೇಂದ್ರ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ. ಸಂಜೆ 6.ಫೀನಿಕ್ಸ್‌ ಮಾರ್ಕೆಟ್‌ ಸಿಟಿ: ಮಹದೇವಪುರ, ವೈಟ್‌ಫೀಲ್ಡ್‌. ‘ಕಾಯಾ’ ಬ್ಯಾಂಡ್‌ನಿಂದ ಪ್ರದರ್ಶನ. ಸಂಜೆ 6.ಸಪ್ತಕ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ. ಸಂಜೆ 6.ರಂಗಸಂಪದ: ರವೀಂದ್ರ ಕಲಾಕ್ಷೇತ್ರ. ರಂಗಸಂಪದ ತಂಡದ ಕಲಾವಿದರಿಂದ ‘ತ್ರಿಶಂಕು’ ನಾಟಕ ಪ್ರದರ್ಶನ. ಸಂಜೆ 7.ಸುಚಿತ್ ಫಿಲ್ಮ್‌ ಸೊಸೈಟಿ: ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ. 19ನೇ ಯೂರೋಪಿಯನ್‌ ಯೂನಿಯನ್‌ ಚಲನಚಿತ್ರೋತ್ಸವದಲ್ಲಿ ‘ಬ್ರೀದಿಂಗ್‌’ ಚಲನಚಿತ್ರ ಪ್ರದರ್ಶನ. ಸಂಜೆ 5. ‘ಆನ್‌ ದಿ ಸ್ಕೈ’ ಸಂಜೆ 7.

ಸಮುದಾಯ: ಕೆ.ಎಚ್‌.ಕಲಾಸೌಧ, ಹನುಮಂತನಗರ. ‘ಪಂಪ ಭಾರತ’ ನಾಟಕ ಪ್ರದರ್ಶನ. ನಿರ್ದೇಶನ – ಪ್ರಮೋದ್‌ ಶಿಗ್ಗಾಂವ್‌. ಸಂಜೆ 7.30.

ರಂಗಶಂಕರ: ಜೆ.ಪಿ.ನಗರ 2ನೇ ಹಂತ. ‘ಮಿಸ್‌ ಸದಾರಮೆ’ ನಾಟಕ ಪ್ರದರ್ಶನ. ಪ್ರಸ್ತುತಿ– ಸಮಷ್ಟಿ ರಂಗ ತಂಡ. ನಿರ್ದೇಶನ –ಮಂಜುನಾಥ್‌ ಎಲ್‌.ಬಡಿಗೇರ್‌. ಸಂಜೆ 7.30.  ಸಂಗೀತ ಕಾರ್ಯಕ್ರಮ

ಕಲಾಮಂಟಪ ಮತ್ತು ಹಂಸಧ್ವನಿ: ರಾಮ ಲಲಿತಕಲಾ ಮಂದಿರ, ಬನಶಂಕರಿ 2ನೇ ಹಂತ. 2ನೇ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮ. ಅತಿಥಿಗಳು – ಶ್ರೀರಾಮ ಲಲಿತಕಲಾ ಮಂದಿರದ ಅಧ್ಯಕ್ಷ ಜಿ.ವಿ.ಕೃಷ್ಣಪ್ರಸಾದ್, ವೀಣಾ ವಾದಕ ಡಾ.ಬಾಲಕೃಷ್ಣ. ಬೆಳಿಗ್ಗೆ 10.ಸರಸ್ವತಿ ಸಂಗೀತ ವಿದ್ಯಾಲಯ: ಬಯಲು ಸಭಾಂಗಣ, ಶೇಷಾದ್ರಿಪುರ ಕಾಲೇಜು, ನೆಹರೂ ವೃತ್ತದ ಬಳಿ. ವಿದುಷಿ ಲಕ್ಷ್ಮೀ ಜಿ.ಭಾವೆ ಅವರ ಜನ್ಮ ಶತಾಬ್ಧಿ ವರ್ಷದ ಅಂಗವಾಗಿ ‘ದಾಸ ನಾದ ಸೌರಭ’ ಭಾರತೀಯ ಪಾರಂಪರಿಕ ಭಕ್ತಿ ಸಂಗೀತೋತ್ಸವ ಕಾರ್ಯಕ್ರಮ. ವಾಗೀಶ ಭಟ್‌, ಡಾ.ಕೆ.ವಾಗೀಶ್, ಆರ್‌.ಕೆ.ಪದ್ಮನಾಭ, ಶ್ಯಾಮಲಾ ಜಿ.ಭಾವೆ ಅವರಿಂದ ಗಾಯನ. ಮಧ್ಯಾಹ್ನ 3.ನಾದಸುರಭಿ ಕಲ್ಚರಲ್ ಅಸೋಸಿಯೇಷನ್‌: ಇಂಡಿಯನ್‌ ಹೆರಿಟೇಜ್‌ ಅಕಾಡೆಮಿ ಸಭಾಂಗಣ, ಕೋರಮಂಗಲ 6ನೇ ಹಂತ. ಅಮೃತಾ ಮುರಳಿ ಅವರಿಂದ ಗಾಯನ. ಸಂಜೆ 4.15.ನಾದಬ್ರಹ್ಮ ಕಲಾಕೇಂದ್ರ: ನಾದಬ್ರಹ್ಮ ಪ್ರಾರ್ಥನಾ ಮಂದಿರ, ಅರಕೆರೆ. ಚಿತ್ರಾ ಶ್ರೀಕೃಷ್ಣ ಅವರಿಂದ ಗಾಯನ. ಶಂಕರ್‌ ರಾಜನ್‌ (ಪಿಟೀಲು), ಭಾರ್ಗವ್‌ ಸಿಂಹಾದ್ರಿ (ಮೃದಂಗ).  ಸಂಜೆ 5.ತ್ಯಾಗರಾಜ ಗಾನಸಭಾ ಟ್ರಸ್ಟ್‌: ಶ್ರೀವಾಣಿ ವಿದ್ಯಾಕೇಂದ್ರ, ರಾಜಾಜಿನಗರ 2ನೇ ಹಂತ. ರಾಜಲಕ್ಷ್ಮೀ ತಿರುನಾರಾಯಣನ್‌ ಅವರಿಂದ ವೀಣಾ ವಾದನ. ಎನ್.ಜಿ.ರವಿ (ಮೃದಂಗ), ಬಿ.ಶಶಿಶಂಕರ್‌ (ಘಟ). ಸಂಜೆ 5.ಬೆಂಗಳೂರು ಗಾಯನ ಸಮಾಜ: ಕೆ.ಆರ್.ರಸ್ತೆ. ಸೀತಾ ಸತ್ಯನಾರಾಯಣ ಅವರಿಂದ ಗಾಯನ. ಎಸ್.ಯಶಸ್ವಿ (ಪಿಟೀಲು), ವೆಳಕವಾಡಿ ಆರ್.ಶ್ರೀಧರ್‌  (ಮೃದಂಗ), ಎ.ವಿ.ಕಾಶಿನಾಥ್‌ (ಖಂಜರಿ). ಸಂಜೆ 5.ಅನನ್ಯ ಮತ್ತು ರಾಗಸುಧಾಲಯ: ಅನನ್ಯ ಸಭಾಂಗಣ, ಮಲ್ಲೇ­ಶ್ವರ. ವಿದ್ವಾನ್‌ ಪವನ್‌ ರಂಗಾಚಾರ್‌ ಅವರಿಂದ ಗಾಯನ. ಟಿಎಸ್‌­ಎಸ್‌ ಮಣಿ (ಮೃದಂಗ), ಟಿ.ಎನ್‌.ರಮೇಶ್‌ (ಘಟ). ಸಂಜೆ 6.ರಾಗ ಸಂಗಮ: ಕ್ಷೇಮ ಭವನ, ಸಹಕಾರನಗರ. ಹೆಗ್ಗಾರ ಅನಂತ ಹೆಗಡೆ ಅವರಿಂದ ಗಾಯನ. ಭರತ್‌ ಹೆಗಡೆ (ಹಾರ್ಮೋನಿಯಂ), ಗುರುಚರಣ್‌ ಗರುಡ (ತಬಲ). ಸಂಜೆ 6.ಕಾಡುಮಲ್ಲೇಶ್ವರ ಗೆಳೆಯರ ಬಳಗ: ಕಾಡುಮಲ್ಲೇಶ್ವರ ದೇವಸ್ಥಾನ, ಮಲ್ಲೇಶ್ವರ. 57ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಉಸ್ತಾದ್‌್ ಹುಮಾಯುನ್‌ ಹರ್ಲಾಪುರ ಅವರಿಂದ ಗಾಯನ. ಗುರುಸಂಗಪ್ಪ ಹೂಗಾರ (ತಬಲ), ರವೀಂದ್ರ ಬಿ.ಮಳಗಿ (ಹಾರ್ಮೋನಿಯಮ್‌), ನಿಶಾದ್‌ ಹರ್ಲಾಪುರ (ಸ್ವರ ಮಂಡಲ). ಸಂಜೆ 6.30.ಧಾರ್ಮಿಕ ಕಾರ್ಯಕ್ರಮ

ಕೋದಂಡರಾಮಸ್ವಾಮಿ ದೇವಸ್ಥಾನ: ಕಾಡುಗೋಡಿ. ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ಮತ್ತು ಅನ್ನದಾನ ಕಾರ್ಯಕ್ರಮ. ಬೆಳಿಗ್ಗೆ 11.ರಾಘವೇಂದ್ರ ಗುರು ಸೇವಾ ಮಂಡಳಿ: ಮೊದಲನೇ ಹಂತ, ಮತ್ತಿಕೆರೆ. ಪರಿಮಳ ಪ್ರವಚನ ಮಂದಿರ ಉದ್ಘಾಟನೆ, ಅಷ್ಟೋತ್ತರ ಸ್ತೋತ್ರ ಪಾರಾಯಣ. ಬೆಳಿಗ್ಗೆ 9.ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ: 7ನೇ ಮುಖ್ಯರಸ್ತೆ, ಭುವನೇಶ್ವರಿ ನಗರ. ಎಳ್ಳಿನಾರತಿ. ಬೆಳಿಗ್ಗೆ 5.ಲಕ್ಷ್ಮೀನರಸಿಂಹಸ್ವಾಮಿ ದೇವರ ಸೇವಾ ಟ್ರಸ್ಟ್‌: ಅತ್ತಿಗುಪ್ಪೆ, ವಿಜಯನಗರ 2ನೇ ಹಂತ. ರಥೋತ್ಸವದ ಅಂಗವಾಗಿ ಅಖಂಡ ದೀಪ ಸೇವೆ. ಬೆಳಿಗ್ಗೆ 5.ಶ್ರೀಗಣಪತಿ ಸಚ್ಚಿದಾನಂದ ಆಶ್ರಮ: 3ನೇ ‘ಸಿ’ ಮುಖ್ಯರಸ್ತೆ, ಗಿರಿನಗರ 2ನೇ ಹಂತ. ಪ್ರತಿಷ್ಠಾಹೋಮ, ಪವಮಾನ ಹೋಮ, ದತ್ತಾತ್ರೇಯ ಹೋಮ. ಬೆಳಿಗ್ಗೆ 7. ಸಾಮೂಹಿಕ ಅನಘಾಷ್ಟಮೀವ್ರತ. ಬೆಳಿಗ್ಗೆ 9.

ಶ್ರೀಚಕ್ರಪೂಜೆ, ರತ್ನಾನ್ಯಾಸ. ಬೆಳಿಗ್ಗೆ 10. ರಥೋತ್ಸವ. ಸಂಜೆ 5. ದಿವ್ಯನಾಮ ಸಂಕೀರ್ತನ. ಸ. 6.30.ಡೇರಾ ಸಚ್ಚಾ ಸೌದಾ: ಕಿಂಗ್ಸ್‌ ಕೋರ್ಟ್‌ ಸಭಾಂಗಣ, ಅರಮನೆ ಮೈದಾನ. ಹರಿಯಾಣದ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಜೀ ಅವರಿಂದ ಆಶೀರ್ವಚನ. ಸಂಜೆ 5.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.