ಗುರುವಾರ , ಜೂನ್ 24, 2021
27 °C

ನಗರದಲ್ಲಿ ಇಂದು ಮಾರ್ಚ್ 2, ಶುಕ್ರವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೇಷಾದ್ರಿಪುರಂ ಕಾನೂನು ಕಾಲೇಜು: ಗೋವಿಂದರಾವ್ ರಸ್ತೆ, ಶೇಷಾದ್ರಿಪುರಂ. ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ. ಉದ್ಘಾಟನೆ: ನ್ಯಾ. ಎನ್. ವೆಂಕಟಚಾಲ. ಅತಿಥಿಗಳು: ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಆರ್. ಪಂಡಿತ್ ಆರಾಧ್ಯ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ.ಕೆ.ಎಸ್.ಬಾಗ್ಲೆ. ಸಂಜೆ 6ರಿಯಾಲಿಟಿ ಪ್ಲಸ್ ಎಕ್ಸ್‌ಲೆನ್ಸ್  ಪ್ರಶಸ್ತಿ 2012-ಸೌತ್. ಉದ್ಘಾಟನೆ:  ಸಚಿವ ಜಗದೀಶ್ ಶೆಟ್ಟರ್. ಅಧ್ಯಕ್ಷತೆ: ಸಂಸದ ಪಿ.ಸಿ.ಮೋಹನ್. ಸ್ಥಳ: ಮಾಥನ್ (ಮಣಿಪಾಲ್ ಆಸ್ಪತ್ರೆ), ಎಚ್‌ಎಎಲ್  ಏರ್‌ಪೋರ್ಟ್ ರಸ್ತೆ. ಸಂಜೆ 6.ಬಿಇಎಲ್ ಉದ್ಯೋಗಿಗಳ ವಿಜ್ಞಾನ ವೇದಿಕೆ: ರಜತ ಭವನ, ಕನ್ನಡ ಸಾಹಿತ್ಯ ಕೂಟ, ಬಿಇಎಲ್ ಜಾಲಹಳ್ಳಿ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ಅತಿಥಿಗಳು: ಶಿಕ್ಷಣ ತಜ್ಞ ಪ್ರೊ.ಎಂ.ಆರ್.ನಾಗರಾಜ್. ಅಧ್ಯಕ್ಷತೆ: ಭಾರತ್ ಎಲೆಕ್ಟ್ರಾನಿಕ್ಸ್‌ನ ದೂರ ಸಂಪರ್ಕ ಮತ್ತು ಪ್ರಸರಣ ವ್ಯವಸ್ಥೆಗಳ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಶೇಷಗಿರಿ ಪ್ರಸಾದ್. ಸಂಜೆ 4.15.ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಜೆಎಸ್‌ಎಸ್ ಕಾಲೇಜು ಸಭಾಂಗಣ, 38ನೇ ಕ್ರಾಸ್, 1ನೇ ಮುಖ್ಯ ರಸ್ತೆ, 8ನೇ ವಿಭಾಗ, ಜಯನಗರ. ಸಾಹಿತಿ ಡಾ.ಎಸ್.ಎಂ.ಶಿವಪ್ಪ ಅವರಿಂದ `ಶರೀರದಲ್ಲಿ ಓಂಕಾರ~ ಕುರಿತು ಉಪನ್ಯಾಸ. ಸಂಜೆ 6.ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್: ನಂ.2, 3ನೇ ಸಿ ಕ್ರಾಸ್, 6ನೇ ಮೇನ್ ಎ ರಸ್ತೆ, 2ನೇ ಬ್ಲಾಕ್, ಎಚ್‌ಆರ್‌ಬಿಆರ್ ಬಡಾವಣೆ, ಕಲ್ಯಾಣ ನಗರ.  ಕ್ಯಾಂಪಸ್ ಕಾರ್ಪೋರೆಟ್ ಕನ್‌ಕ್ಲೆವ್ ರಾಷ್ಟ್ರೀಯ ವಿಚಾರ ಸಂಕಿರಣ ಬೆಳಿಗ್ಗೆ 9.ಸಾಂಸ್ಕೃತಿಕ ಕಾರ್ಯಕ್ರಮ

ಎನ್‌ಎಸ್‌ಐಸಿ: ತ್ರಿಪುರ ವಾಸಿನಿ, ಅರಮನೆ ಮೈದಾನ. ಎಂಎಸ್‌ಎಂಇ-ಡಿಪೋ ಎಕ್ಸ್‌ಪೊ 2012. ಉದ್ಘಾಟನೆ: ಎಂ.ಎಂ.ಪಲ್ಲಂ ರಾಜು. ಅತಿಥಿಗಳು: ವೀರಭದ್ರ ಸಿಂಗ್, ಅಮರೇಂದ್ರ ಸಿನ್ಹಾ, ಕೆ.ಜ್ಯೋರ್ತಿಲಿಂಗಂ, ಮಹೇಶ್ವರ ರಾವ್. ಬೆಳಿಗ್ಗೆ 11.ಹೆರಿಟೇಜ್ ಸಂಸ್ಥೆ: ನಗರದ ದೇವಾಲಯಗಳ ಉತ್ಸವ `ಗುಡಿಯ ಸಂಭ್ರಮ~ ಬಸವನಗುಡಿಯ ದೊಡ್ಡ ಬಸವಣ್ಣದೇವಸ್ಥಾನದಲ್ಲಿ ಶುಕ್ರವಾರ ನಡೆಯಲಿದೆ. 

ಅತಿಥಿಗಳು: ಪೀತಾಂಬರ್ ದೇವ್ ಗೋಸ್ವಾಮಿ, ಔನ್ಯತಿ ಸತ್ರಾ, ಮಜೌಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್. ಮುದ್ರಿಕಾ ಫೌಂಢೇಶನ್ ನಿದೇರ್ಶಕ ಮಿನಲ್ ಪ್ರಭು. ಸಂಜೆ 5.30ಕ್ಕೆ ಸಂಗೀತ ನೃತ್ಯ ಕೈಂಕರ್ಯ, ಕೂಚುಪುಡಿ ಸಮನ್ವಯ ಡಾನ್ಸ್ ಕಂ.ವೀಣಾಮೂರ್ತಿ ವಿಜಯ್. ಸಂಜೆ 7.30ಕ್ಕೆ ಅಸ್ಸಾಂ ವಿದ್ಯಾರ್ಥಿಗಳಿಂದ ಸತ್ತರಿಯ ನೃತ್ಯ ಪ್ರದರ್ಶನ.ಬೆಂಗಳೂರು ಲಲಿತ ಕಲಾ ಪರಿಷತ್: ನ್ಯಾಷನಲ್ ಕಾಲೇಜು ಆವರಣ, ಜಯನಗರ. ವಸುಧಾ ಕೇಶವ್ ಮತ್ತು ತಂಡದಿಂದ ಗಾಯನ. ಸಂಜೆ 6.30.ಗಾನಯೋಗಿ ಪಂಚಾಕ್ಷರ ಸಂಗೀತ ವಿದ್ಯಾಲಯ: ಕನ್ನಡ ಭವನ, ಜೆ.ಸಿ.ರಸ್ತೆ. ವಾರ್ಷಿಕೋತ್ಸವ, ಸಂಗೀತೋತ್ಸವ ಮತ್ತು ಸನ್ಮಾನ ಸಮಾರಂಭ. ಉದ್ಘಾಟನೆ: ಉದ್ಯಮಿ, ಎಚ್. ಚಂದ್ರಶೇಖರ್. ಅಧ್ಯಕ್ಷತೆ: ಗಾಯನ ಸಮಾಜದ ಅಧ್ಯಕ್ಷ ಎಂ.ಆರ್.ವಿ. ಪ್ರಸಾದ. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ ವಿದುಷಿ  ಡಿ.ಶಶಿಕಲಾ ಅವರಿಗೆ ಸನ್ಮಾನ. ಸಂಜೆ 4.ರಂಗಭೂಮಿ

ರಂಗಶಂಕರ: ಜೆ.ಪಿ.ನಗರ 2ನೇ ಹಂತ. ಬೆಂಗಳೂರಿನ ವಿವಿಧ ತಂಡಗಳಿಂದ ಶಾರ್ಟ್-ಸ್ವೀಟ್ ಬೆಂಗಳೂರು-2012 ಕನ್ನಡ ಮತ್ತು ಹಿಂದಿ ನಾಟಕ. (ನಿರ್ದೇಶನ: ಅಲೆಕ್ಸ್ ಬ್ರೌನ್). ಸಂಜೆ 7.30.ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್: ಸೇವಾ ಸದನ, ಮಲ್ಲೇಶ್ವರ. ವೇಷದ ಹುಲಿ ನಾಟಕ. (ರಚನೆ: ಡಾ.ಎಂ.ಭೈರೇಗೌಡ, ಸಂಗೀತ ನಿರ್ದೇಶನ: ರಾಜಗುರು ಹೊಸಕೋಟೆ). ಸಂಜೆ 6.30.ಪ್ರಯೋಗ ರಂಗ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.ಸಮಾನತೆ ನಾಟಕ. (ರಚನೆ: ಕೆ.ಎಂ.ವಿಜಯಲಕ್ಷ್ಮಿ, ನಿರ್ದೇಶನ: ದಾಕ್ಷಾಯಿಣಿ ಭಟ್). ಸಂಜೆ 6.30.ಧಾರ್ಮಿಕ ಕಾರ್ಯಕ್ರಮ

ಲಕ್ಷ್ಮಿವೆಂಕಟೇಶ್ವರ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಮತ್ತು ನವಗ್ರಹ ದೇವಾಲಯ:
4ನೇ ಮುಖ್ಯ ರಸ್ತೆ, ಪಿ.ಪಿ.ಬಡಾವಣೆ ವಾರ್ಷಿಕೋತ್ಸವ. `ಚಕ್ರ ನವಾವರಣ ಹೋಮ~ ಮತ್ತು ಲಕ್ಷ್ಮೀನಾರಾಯಣ ಹೃದಯ ಹೋಮ~. ಬೆಳಿಗ್ಗೆ 6.ಅಂತರರಾಷ್ಟ್ರೀಯ ವೈನ್ ಫೆಸ್ಟಿವಲ್: ವೈಟ್ ಪೆಟಲ್ಸ್, ಅರಮನೆ ಮೈದಾನ. ಉದ್ಘಾಟನೆ: ತೋಟಗಾರಿಕೆ ಮತ್ತು ಸಕ್ಕರೆ ಇಲಾಖೆ ಸಚಿವ ಎಸ್.ಎ.ರವೀಂದ್ರನಾಥ್, ವೈನ್ ಉದ್ಯಮಿಗಳಿಗೆ ಒಡಂಬಡಿಕೆ ಪತ್ರ ವಿತರಣೆ: ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ, ಕೈಗಾರಿಕೆ ಸಚಿವ ಮುರುಗೇಶ್ ಆರ್.ನಿರಾಣಿ. ಅಧ್ಯಕ್ಷತೆ: ಶಾಸಕ ಆರ್.ರೋಷನ್ ಬೇಗ್. ಸ್ಮರಣ ಸಂಚಿಕೆ ಬಿಡುಗಡೆ: ಕೃಷಿ ಸಚಿವ ಉಮೇಶ್ ವಿ.ಕತ್ತಿ. ಅತಿಥಿ: ಸಂಸದ ಪಿ.ವಿ ಮೋಹನ್. ಬೆಳಿಗ್ಗೆ 11.ಶ್ರೀ ಕಬ್ಬಾಳಮ್ಮದೇವಿ ಬ್ರಹ್ಮರಥೋತ್ಸವ: ತಪೋವನ ಕ್ಷೇತ್ರ, ಹನುಮಗಿರಿ ಬೆಟ್ಟ, ಅರಹಳ್ಳಿ ಎಜಿಎಸ್ ಪಾರ್ಕ್, ಉತ್ತರಹಳ್ಳಿ ಸಮೀಪ. ಬ್ರಹ್ಮರಥೋತ್ಸವದಲ್ಲಿ ಪಂಚಮುಖಿ ಗಣಪತಿ , ಲಕ್ಷ್ಮಿವೆಂಕಟೇಶ್ವರ, ಲಕ್ಷ್ಮಿನರಸಿಂಹಸ್ವಾಮಿ ದೇವರುಗಳ ಉತ್ಸವ , ಸಿದ್ದರಾಮೇಶ್ವರ ಭೋವಿ ಗುರುಪೀಠ ಚಿತ್ರದುರ್ಗದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರಿಂದ ವಿಶೇಷ ಪೂಜೆ. ಮಧ್ಯಾಹ್ನ 12. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ.

`ಆಚಾರ್ಯ~ರಿಗೆ ಶ್ರದ್ಧಾಂಜಲಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ: ಶುಕ್ರವಾರ ಡಾ.ವಿ.ಎಸ್. ಆಚಾರ್ಯ ಅವರಿಗೆ ಶ್ರದ್ಧಾಂಜಲಿ.ಆಚಾರ್ಯ ಅವರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ `ಭೀಷ್ಮಾಚಾರ್ಯ~ ಎಂದು ಹೆಸರು ಗಳಿಸಿದ್ದ ಸಜ್ಜನಿಕೆಯ ರಾಜಕಾರಣಿ ಎನಿಸಿಕೊಂಡಿದ್ದರು. ಕರ್ನಾಟಕ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಉನ್ನತ ಶಿಕ್ಷಣ ಸಚಿವರಾಗಿಯೂ ಹೆಸರು ಮಾಡಿದ್ದರು. `ಅಜಾತಶತ್ರು~ ಎನಿಸಿಕೊಂಡ ಆಚಾರ್ಯ ಅವರಿಗೆ ಬ್ರಾಹ್ಮಣ ಮಹಾಸಭೆಯು ಶ್ರದ್ಧಾಂಜಲಿ ಅರ್ಪಿಸಲಿದೆ.ನುಡಿನಮನದಲ್ಲಿ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಸಚಿವ ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಬಿ.ಎನ್. ವಿಜಯಕುಮಾರ್, ರವಿ ಸುಬ್ರಹ್ಮಣ್ಯಂ, ಎಂ.ವಿ.ರಾಜಶೇಖರನ್,  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೈರಾಜ್, ಬಿ.ಡಿ.ಎ ಆಯುಕ್ತ ಭರತ್‌ಲಾಲ್ ಮೀನ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯ, ಗುಪ್ತದಳ ಇಲಾಖೆ ಐ.ಜಿ. ಗೋಪಾಲ್ ಹೊಸೂರು, ಬಬ್ಬೂರುಕಮ್ಮೆ ಸೇವಾ ಸಮಿತಿ ಅಧ್ಯಕ್ಷ ಡಾ.ಎ.ವಿ.ಪ್ರಸನ್ನ. ಪತ್ರಕರ್ತ ವಿ.ಎನ್.ಸುಬ್ಬರವ್. ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ಸಂಜೆ 6ಪ್ರಿಯಾತ್ಮ, ಅದಿತಾ ಭರತನಾಟ್ಯ

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು ಶುಕ್ರವಾರ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಿಯಾತ್ಮ ಕಿಂಚಾ ಮತ್ತು ಅದಿತಾ ಪ್ರಕಾಶ್ ಅವರಿಂದ ಭರತನಾಟ್ಯ ದ್ವಂದ್ವ ನೃತ್ಯ ಪ್ರದರ್ಶನ. ಸ್ಥಳ: ಯವನಿಕಾ, ನೃಪತುಂಗ ರಸ್ತೆ. ಸಂಜೆ 6.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.