ಶನಿವಾರ, ಜೂನ್ 19, 2021
28 °C

ನಗರದಲ್ಲಿ ಇಂದು ಮಾರ್ಚ್ 21, ಬುಧವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 21, ಬುಧವಾರ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರ: ದಿ ಕ್ಯಾಪಿಟಲ್ ಹೋಟೆಲ್, ರಾಜಭವನ ರಸ್ತೆ, ರಾಜ್ಯ ಮಟ್ಟದ ರಫ್ತು ಪ್ರಶಸ್ತಿ ಪ್ರದಾನ ಸಮಾರಂಭ. ಪ್ರಶಸ್ತಿ ಪ್ರದಾನ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಅಧ್ಯಕ್ಷತೆ- ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಅತಿಥಿ- ಸಣ್ಣ ಕೈಗಾರಿಕಾ ಸಚಿವ ನರಸಿಂಹನಾಯಕ. ಸಂಜೆ 5.30.ಕನ್ನಡ ಸಂಘರ್ಷ ಸಮಿತಿ: ಎಂ.ವಿ.ಸೀ ಸಭಾಂಗಣ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೊನಿ. ರಾಷ್ಟ್ರಕವಿ ಎಂ.ಗೋವಿಂದ ಪೈ ಅವರ 130ನೇ ಹುಟ್ಟುಹಬ್ಬ, ಕವನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಉದ್ಘಾಟನೆ- ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್, ಅಧ್ಯಕ್ಷತೆ- ವಿಮರ್ಶಕ ಪ್ರೊ. ಎಲ್.ಎನ್.ಮುಕುಂದರಾಜ್, ಅತಿಥಿಗಳು-ಲೇಖಕಿ ಡಾ.ಎಸ್.ವಿ.ಪ್ರಭಾವತಿ, ಸಮಿತಿ ಅಧ್ಯಕ್ಷ ರಾಮಣ್ಣ ಕೋಡಿಹೊಸಹಳ್ಳಿ. ಸಂಜೆ 5.30.ಡಾ.ರಾಮ ಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ವಾಡಿಯ ರಸ್ತೆ, ಬಸವನಗುಡಿ, ಡಾ.ಲೋಹಿಯಾ ಅವರ 102ನೇ ಜನ್ಮದಿನಾಚರಣೆ. ಅಧ್ಯಕ್ಷತೆ- ವಕೀಲ ಡಾ.ಸಿ.ಎಸ್.ದ್ವಾರಕನಾಥ್, ಸನ್ಮಾನ- `ಡಾ.ಲೋಹಿಯಾ ಅವರ ವಿಚಾರಧಾರೆ~ ರಾಜಕೀಯ ಕಾರ್ಯಕರ್ತೆ ನಂದನಾ ರೆಡ್ಡಿ, `ಹಿಂದುಳಿದ ವರ್ಗಗಳಲ್ಲಿ ಈವರೆಗೆ ಆಗಿರುವ ಬದಲಾವಣೆ~ ವಿಷಯ ಕುರಿತು ಉಪನ್ಯಾಸ- ಮೈಸೂರು ವಿವಿ ಅಭಿವೃದ್ಧಿ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ. ವಿ.ಕೆ.ನಟರಾಜ್ ಅವರಿಂದ. `ಭಾರತೀಯ ಜಾತಿ ಪದ್ಧತಿಯಿಂದಾಗಿರುವ ಅನಾಹುತಗಳು~ ವಿಷಯ ಕುರಿತು ಉಪನ್ಯಾಸ- ಮಾಜಿ ಸಚಿವ ಬಿ.ಸೋಮಶೇಖರ್ ಅವರಿಂದ. ಸಂಜೆ 6.ಬೆಂಗಳೂರು ವಿಜ್ಞಾನ ವೇದಿಕೆ:
ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ಬಸವನಗುಡಿ, `ಅಲರ್ಜಿಕ್ ರೈನೈಟಿಸ್~ (ಅಲರ್ಜಿಯಿಂದಾಗುವ ಆರೋಗ್ಯದ ಸಮಸ್ಯೆಗಳು) ವಿಷಯ ಕುರಿತು ಉಪನ್ಯಾಸ- ಅಪೋಲೊ ಆಸ್ಪತ್ರೆಯ ಇ.ಎನ್.ಟಿ. ಹಿರಿಯ ಸಮಾಲೋಚಕ ಡಾ.ಸುನಿಲ್ ನಾರಾಯಣ್ ದತ್, ಸಂಜೆ 6.ದಿ ಮಿಥಿಕ್ ಸೊಸೈಟಿ:
ನೃಪತುಂಗ ರಸ್ತೆ, ಪ್ರೊ. ಎಂ.ವಿ.ಕೃಷ್ಣರಾವ್ ಸ್ಮಾರಕ ದತ್ತಿ ಉಪನ್ಯಾಸ. `ಬಾನುಲಿ ಕಾರ್ಯಕ್ರಮಗಳು ಜನರ ಮೇಲೆ ಬೀರಿದ ಪ್ರಭಾವ~ ವಿಷಯ ಕುರಿತ ಉಪನ್ಯಾಸ- ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ಸಂಯೋಜಕ ಅಬ್ದುಲ್ ರಶೀದ್, ಅಧ್ಯಕ್ಷತೆ- ತುಮಕೂರು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀಪಾದ ಭಟ್, ಸಂಜೆ 6.ನ್ಯಾಷನಲ್ ಪದವಿ ಕಾಲೇಜು:
ಡಾ.ಎಚ್.ಎನ್.ಕಲಾಕ್ಷೇತ್ರ, ವಾರ್ಷಿಕೋತ್ಸವ ಸಮಾರಂಭ, ಅಧ್ಯಕ್ಷತೆ- ಎನ್.ಇ.ಎಸ್ ಆಫ್ ಕರ್ನಾಟಕ ನಿರ್ದೇಶಕ ಡಾ.ಎ.ಎಚ್.ರಾಮರಾವ್, ಅತಿಥಿಗಳು- ಭಾರತೀಯ ವಿದ್ಯಾ ಭವನ ಗಾಂಧಿ ಸೆಂಟರ್ ಆಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ನಿರ್ದೇಶಕ ಡಾ.ಎಸ್.ಬಾಲಚಂದ್ರ ರಾವ್, ಅತಿಥಿಗಳು- ಎ.ಇ.ಎಸ್. ಕಾರ್ಯದರ್ಶಿಗಳಾದ ಡಾ.ಸದಾನಂದ ಮಯ್ಯ, ಪ್ರೊ. ಎಸ್. ಎನ್.ನಾಗರಾಜ ರೆಡ್ಡಿ, ಬೆಳಿಗ್ಗೆ 11.ಬೆಂಗಳೂರು ಎನ್ವಿರಾನ್‌ಮೆಂಟಲ್ ಟ್ರಸ್ಟ್, ರಾಷ್ಟ್ರ ಬಂಧು:
ಅರಣ್ಯ ಭವನ, 8ನೇ ಮಹಡಿ, 18ನೇ ಅಡ್ಡ ರಸ್ತೆ, ಮಲ್ಲೇಶ್ವರ, ವಿಶ್ವ ಅರಣ್ಯ ದಿನದ ಅಂಗವಾಗಿ `ವಾಟರ್ ಈಸ್ ದ ಪ್ರಾಡೆಕ್ಟ್ ಆಫ್ ಫಾರೆಸ್ಟ್~ (ನೀರು ಅರಣ್ಯದ ಉತ್ಪನ್ನ) ವಿಷಯ ಕುರಿತ ಅಂತರ ಕಾಲೇಜು ಚರ್ಚಾಸ್ಪರ್ಧೆ, ಅಧ್ಯಕ್ಷತೆ- ಲೇಖಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ವೈ.ಆರ್.ಮೋಹನ್ ಸಂಪಾದಿಸಿರುವ `ಒಂದು ಮರದ ವ್ಯಥೆಯ ಕತೆ~ ಪುಸ್ತಕ ಲೋಕಾರ್ಪಣೆ: ಟ್ರಸ್ಟ್‌ನ ಮುಖ್ಯಸ್ಥರು ಕ್ಯಾಪ್ಟನ್ ಪ್ರಬಲ, ಅತಿಥಿಗಳು- ಎ.ಕೆ.ವರ್ಮ (ಐಎಫ್‌ಎಸ್), ಡಾ.ಎ.ಎನ್.ಯಲ್ಲಪ್ಪ ರೆಡ್ಡಿ, ಕವಿ ಜರಗನಹಳ್ಳಿ ಶಿವಶಂಕರ್, ಬೆಳಿಗ್ಗೆ 10.30.ಸರ್ಕಾರಿ ಆರ್.ಸಿ.ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, `ಹೊನ್ನುಡಿ~ ಕನ್ನಡ ಸಂಘ, ಬೆಂಗಳೂರು ವಿವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ: ಕುವೆಂಪು ಸಂಭಾಂಗಣ, ರಾಜ್ಯಮಟ್ಟದ ವಿಚಾರ ಸಂಕಿರಣ. `ಕರ್ನಾಟಕದ ಸಾಂಸ್ಕೃತಿಕ ಬಿಕ್ಕಟ್ಟುಗಳು~.

ಉದ್ಘಾಟನೆ- ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷತೆ- ಪ್ರಾಂಶುಪಾಲ ಡಾ. ವೇಣುಗೋಪಾಲ್, ಬೆಳಿಗ್ಗೆ 10.30.ಮಲ್ಟಿಪಲ್ ಸ್ಲ್ಕೆರೋಸಿಸ್ ಸೊಸೈಟಿ ಆಫ್ ಇಂಡಿಯಾ, ಬೆಂಗಳೂರು ಶಾಖೆ: ಬಾಷ್ ಸ್ಪೋರ್ಟ್ಸ್ ಗ್ರೌಂಡ್, ಆಡುಗೋಡಿ. ಉಚಿತ ಆರೋಗ್ಯ ತಪಾಸಣಾ ಶಿಬಿರ. ಭಾಗವಹಿಸುವ ವೈದ್ಯರು- ಡಾ. ರಾಜೇಶ್ ಬಿ.ಅಯ್ಯರ್ (ನರರೋಗ ತಜ್ಞ), ಡಾ. ವಿಜೀಂದ್ರನ್ (ಫಿಸಿಯೋಥೆರಪಿ). ಬೆಳಿಗ್ಗೆ 10. ಸಾಂಸ್ಕೃತಿಕ ಕಾರ್ಯಕ್ರಮಗಳು:

ಹೈವೇ ಥಿಯೇಟರ್ಸ್‌: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, `ಕ್ರಿಮಿ~ ನಾಟಕ ಪ್ರದರ್ಶನ, ರಚನೆ ಮತ್ತು ನಿರ್ದೇಶನ- ವಿ.ಎಂ.ಮಂಜುನಾಥ, ಕಲಾವಿದರು- ಸಂತೋಷ್ ಡಿ.ಆರ್. ಸಾಗರ್, ಅರ್ಚನಾ ಆರ್.ರಾವ್, ಹರೀಶ್ ಜಿ.ನಾರಾಯಣ್, ಟಿ.ಆರ್.ಗೋಪಿನಾಥ್, ಕೆ.ಎಸ್.ಉಷಾ ರಮೇಶ್, ಸಂಗೀತ- ಅರುಣ್ ಮತ್ತು ಎ.ಎ.ಸ್ವಾಮಿ, ರಂಗ ವಿನ್ಯಾಸ- ವಿ.ಎಂ.ರಾಜಣ್ಣ, ಬೆಳಕು- ಕಲಾಮಂದಿರ ರವಿ. ಸಂಜೆ 7.ಕನ್ನಡ ಮತ್ತು ಸಂಸ್ಕೃತಿ ಇಲಾಖೆ:
ನಯನ ರಂಗಮಂದಿರ, ಕನ್ನಡ ಭವನ, `ಯುವ ಸೌರಭ~, ಸುಗಮ ಸಂಗೀತ- ವೈಷ್ಣವರಾವ್. ಸಂಜೆ 6.30.ಕೃತಿಗಳ ಲೋಕಾರ್ಪಣೆ:


ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಅವರ `ಗುಂಗಿಹುಳ~ ಮತ್ತು `ಮೂರಂಕಣದ ಮನೆ~ ಅವಳಿ ಪುಸ್ತಕಗಳು ಬುಧವಾರ ಲೋಕಾರ್ಪಣೆಯಾಗಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ.ಸಾ.ಪ. ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ.ಮನು ಬಳಿಗಾರ್ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.

ಸ್ಥಳ: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು. ಚಾಮರಾಜಪೇಟೆ. ಸಂಜೆ 5.ಸೇಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜು: ಜ.ನಾ.ತೇಜಶ್ರೀ ಅವರ `ಅವನರಿವಲ್ಲಿ~ (ಖಂಡಕಾವ್ಯ) ಪುಸ್ತಕ ಲೋಕಾರ್ಪಣೆ. ಕನ್ನಡ ಸಂಘ, ಸೇಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜು ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಪುಸ್ತಕ ಲೋಕಾರ್ಪಣೆ ಮಾಡುತ್ತಾರೆ. ಸೇಂಟ್ ಜೋಸೆಫ್ಸ್ ವಿದ್ಯಾ ಸಂಸ್ಥೆಯ ರೆವರೆಂಡ್ ಫಾದರ್ ವಿಜಯ್ ಪ್ರಭು ಅಧ್ಯಕ್ಷತೆ ವಹಿಸುತ್ತಾರೆ. ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಹಾಗೂ ಲೇಖಕ ಡಾ.ನಟರಾಜ್ ಹುಳಿಯಾರ್, ಕಾಲೇಜಿನ ನಿರ್ದೇಶಕ ರೆವರೆಂಡ್ ಡಾ.ಸ್ಟ್ಯಾನಿ ಡಿಸೋಜಾ, ಪ್ರಾಂಶುಪಾಲರಾದ ಡಾ.ಲಿಲ್ಲಿ ಡೇವಿಡ್ ಪಾಲ್ಗೊಳ್ಳಲಿದ್ದಾರೆ. ಜ.ನಾ.ತೇಜಶ್ರೀ ಮತ್ತು ಭವಾನಿ ಪ್ರಕಾಶ್ ಕಾವ್ಯ ಮಂಡನೆ ಮಾಡಲಿದ್ದಾರೆ.

ಸ್ಥಳ: ಯವನಿಕಾ ಸಭಾಂಗಣ, ನೃಪತುಂಗ ರಸ್ತೆ. ಸಂಜೆ 6ಕ್ಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.