ನಗರದಲ್ಲಿ ಇಂದು - ಮೇ 14, ಸೋಮವಾರ

7

ನಗರದಲ್ಲಿ ಇಂದು - ಮೇ 14, ಸೋಮವಾರ

Published:
Updated:

ಮೇ 14, ಸೋಮವಾರ

ಬನವಾಸಿ ಬಳಗ:
ಪ್ರೆಸ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್. `ಪ್ರಜಾಪ್ರಭುತ್ವ ಮತ್ತು ಡಬ್ಬಿಂಗ್~ ಕುರಿತು ವಿಚಾರ ಸಂಕಿರಣ. ಉಪನ್ಯಾಸ- ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸಮತಾ ಸೈನಿಕ ದಳದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಪತ್ರಕರ್ತ ಎನ್. ಎ. ಎಂ. ಇಸ್ಮಾಯಿಲ್, ಬಳಗದ ಅಧ್ಯಕ್ಷ ಜಿ. ಆನಂದ್. ಬೆಳಿಗ್ಗೆ 11.ಬೆಂಗಳೂರು ವಿಜ್ಞಾನ ವೇದಿಕೆ ಮತ್ತು ಸಮಾಜ ವಿಜ್ಞಾನ ವೇದಿಕೆ: ಡಾ. ಎಚ್. ಎನ್. ಮಲ್ಟಿಮೀಡಿಯಾ ಸಭಾ ಭಾವನ, ದಿ ನ್ಯಾಶನಲ್ ಡಿಗ್ರಿ ಕಾಲೇಜು, ಬಸವನಗುಡಿ. `ಮಹಿಳೆ ಮತ್ತು ರಾಜಕಾರಣ~ ಕುರಿತು ಉಪನ್ಯಾಸ ಮಾಜಿ ಸಚಿವೆ ಡಾ. ಲೀಲಾದೇವಿ ಆರ್. ಪ್ರಸಾದ್ ಅವರಿಂದ. ಸಂಜೆ 6.ಬಸವ ಸಮಿತಿ:
ಅರಿವಿನ ಮನೆ, ಬಸವ ಸಮಿತಿ, ಬಸವ ಭವನ, ಬಸವೇಶ್ವರ ರಸ್ತೆ. 715ನೇ ಜ್ಞಾನ ದಾಸೋಹ ಕಾರ್ಯಕ್ರಮ. ಸಾವಂದಿ ಶೆಟ್ಟರ ಎಸ್. ರುದ್ರಪ್ಪ ಮತ್ತು ರಾಜಮ್ಮ ರುದ್ರಪ್ಪ ಅವರ ಸ್ಮರಣಾರ್ಥ ದತ್ತಿ. `ಸಿದ್ಧಾಂತ ಮತ್ತು ಅನುಭವ~ ಕುರಿತು ಉಪನ್ಯಾಸ ಛಲವಾದಿ ಮಹಾಸಂಸ್ಥಾನದ ಬಸವ ನಾಗಿದೇವ ಸ್ವಾಮೀಜಿ ಅವರಿಂದ, ಸಾನ್ನಿಧ್ಯ- ಸರ್ಪಭೂಷಣ ಮಠದ ಅಧ್ಯಕ್ಷ ಮಲ್ಲಿಕಾರ್ಜುನ ದೇವರು. ಸಂಜೆ 5.30.ಧಾರ್ಮಿಕ ಕಾರ್ಯಕ್ರಮಗಳು

ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ:
15ನೇ ಅಡ್ಡ ರಸ್ತೆ, ಮಲ್ಲೇಶ್ವರ. ನರಸಿಂಹ ಜಯಂತಿ ಪ್ರಯುಕ್ತ ಕಲ್ಯಾಣೋತ್ಸವ ಮತ್ತು ತಿರುವೀದಿ ಉತ್ಸವ. ಬೆಳಿಗ್ಗೆ 10.30.

ಶಂಕರ ಜಯಂತಿ ಮಂಡಳಿ: ಶಂಕರ ಕೃಪಾ, ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ರಾಮಸ್ವಾಮಿ ಅಯ್ಯಂಗಾರ್ ಅವರಿಂದ `ಪ್ರಶ್ನೋಪನಿಷತ್~ ಕುರಿತು ಪ್ರವಚನ. ಸಂಜೆ 6.30.ಸಾಯಿ ಸತ್ಸಂಗ ಸೇವಾ ಸಮಿತಿ: ಶಿವಂ ಸಭಾಂಗಣ, 10ನೇ ಕ್ರಾಸ್, 16ನೇ ಮುಖ್ಯ ರಸ್ತೆ, ಪದ್ಮನಾಭ ನಗರ. ವಿದ್ವಾಂಸರಾದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ `ಭಾಗವತ ಸಪ್ತಾಹ~ ಕುರಿತು ಪ್ರವಚನ. ಸಂಜೆ 6.ರಾಮಕೃಷ್ಣ ಧ್ಯಾನ ಮಂದಿರ: 26ನೇ ಅಡ್ಡರಸ್ತೆ, ಕಬ್ಬನ್ ಪೇಟೆ. ಧ್ಯಾನ ಮತ್ತು ಪ್ರವಚನ. ಸಂಜೆ 5.30.ಪರಮಾರ್ಥ ವಿಚಾರ ಸಂಘ ಟ್ರಸ್ಟ್: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಕೆ. ಜಿ. ಸುಬ್ರಾಯಶರ್ಮ ಅವರಿಂದ `ಸಮನ್ವಯ ಶಾಂಕರ ಭಾಷ್ಯಂ~ ಕುರಿತು ಧಾರ್ಮಿಕ ಪ್ರವಚನ. ಬೆಳಿಗ್ಗೆ 7.45.ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್, ಬಸವನಗುಡಿ. ಕೆ. ಜಿ. ಸುಬ್ರಾಯಶರ್ಮಾ ಅವರಿಂದ `ಶ್ವೇತಾಶ್ವತರೋಪನಿಷತ್ ಭಾಷ್ಯಂ~ ಕುರಿತು ಧಾರ್ಮಿಕ ಪ್ರವಚನ. ಬೆಳಿಗ್ಗೆ 9.

 

ನಾಟ್ಯಾಂತರಂಗ: ಸೇವಾ ಸದನ, ಮಲ್ಲೇಶ್ವರಂ. ಶುಭಾ ಧನಂಜಯ್ ಅವರ ಶಿಷ್ಯೆ ಭವ್ಯ ಶ್ರೀನಿಧಿ ಅವರಿಂದ ಭರತನಾಟ್ಯ. ಅತಿಥಿಗಳು: ಇಸ್ಕಾನ್ ನಿರ್ದೇಶಕ ತಿರುಸ್ವಾಮಿ, ಹೈಕೋರ್ಟ್ ವಕೀಲ ಎಚ್.ಎಲ್. ನರಸಿಂಹ ಮೂರ್ತಿ. ಸಂಜೆ 6.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry