ಮಂಗಳವಾರ, ಮೇ 18, 2021
24 °C

ನಗರದಲ್ಲಿ ಇಂದು- ಸೆಪ್ಟೆಂಬರ್ 18, ಭಾನುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಪ್ಟೆಂಬರ್ 18, ಭಾನುವಾರ

ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘ: ಜಸ್ಮಾದೇವಿ ಭವನ, ಜಸ್ಮಾದೇವಿ ಭವನರಸ್ತೆ, ಗುರುನಾನಕ್ ಭವನದ ಬಳಿ. 37ನೇ ವಾರ್ಷಿಕೋತ್ಸವ, ಜಸ್ಮಾದೇವಿ ಭವನ ಕಲ್ಯಾಣ ಮಂಟಪದ ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿಗಳು- ಸಂಸದ ಅನಂತಕುಮಾರ್, ಸಚಿವ ಆರ್.ಅಶೋಕ, ಶಾಸಕ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಎಸ್.ರಘು. ಬೆಳಿಗ್ಗೆ 10.30.ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್: ನಯನ ಸಭಾಂಗಣ, ಕನ್ನಡ ಭವನ. ರಾಜ್ಯ ಮಟ್ಟದ 2ನೇ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ. ಉದ್ಘಾಟನೆ- ಸಚಿವ ಸಿ.ಪಿ.ಯೋಗೀಶ್ವರ್. ಅತಿಥಿಗಳು- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಅ.ಕ.ಬಸವರಾಜಪ್ಪ, ಶೇಷಾದ್ರಿಪುರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಆರ್.ಶ್ರೀನಿವಾಸ್, ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ. ಬೆಳಿಗ್ಗೆ 10.15.ಡಾ.ಬಿ.ಆರ್.ಅಂಬೇಡ್ಕರ್ ಉಚಿತ ತರಬೇತಿ ಸಂಸ್ಥೆ:
ಸೇವಾ ಆಶ್ರಮ ಪ್ರೌಢಶಾಲೆ, 5ನೇ ಮುಖ್ಯರಸ್ತೆ, ಶ್ರೀರಾಮಪುರ. ಉಚಿತ ಆರೋಗ್ಯ ತಪಾಸಣಾ ಶಿಬಿರ. ಉದ್ಘಾಟನೆ- ಸಚಿವ ಎಸ್.ಸುರೇಶ್‌ಕುಮಾರ್. ಅತಿಥಿಗಳು- ಶಾಸಕ ದಿನೇಶ್ ಗುಂಡೂರಾವ್, ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ರಮೇಶ್‌ರಾಜು, ಪಾಲಿಕೆ ಸದಸ್ಯರಾದ ಟಿ.ಮಲ್ಲೇಶ್, ಶಕೀಲಾ ಮುನಿರಾಜು. ಬೆಳಿಗ್ಗೆ 10.30.ಕರ್ನಾಟಕ ರಾಜ್ಯ ಸರ್ಕಾರ ತಿಗಳ ನೌಕರರ/ ವೃತ್ತಿಪರರ ಸಂಘ: ಪುರಭವನ. ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ. ಉದ್ಘಾಟನೆ- ಸಚಿವ ಆರ್.ಅಶೋಕ. ಅತಿಥಿಗಳು- ಸಚಿವರಾದ ಬಿ.ಎನ್.ಬಚ್ಚೇಗೌಡ, ಎ.ನಾರಾಯಣಸ್ವಾಮಿ, ಶಾಸಕ ನೆ.ಲ.ನರೇಂದ್ರಬಾಬು. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಸಿ.ಕೃಷ್ಣಪ್ಪ. ಬೆಳಿಗ್ಗೆ 11.ಕ್ರೀಡಾ ರತ್ನ ಯೂತ್ ಅಸೋಸಿಯೇಷನ್: ಸುಮಂಗಲಿ ಸೇವಾ ಆಶ್ರಮ, ಚೋಳನಾಕಯನಹಳ್ಳಿ, ಹೆಬ್ಬಾಳ ಬಳಿ, ಆರ್.ಟಿ.ನಗರ. `2010-11ನೇ ಸಾಲಿನ ಕ್ರೀಡಾ ರತ್ನ~ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು- ಶಾಸಕ ಎಸ್.ಆರ್.ವಿಶ್ವನಾಥ್, ಸಮಾಜ ಸೇವಕರಾದ ವಿ.ಶಾಮಣ್ಣ, ಬಿ.ಆರ್.ಅನಿಲ್‌ಕುಮಾರ್. ಸನ್ಮಾನಿತರು- ಭಾರತೀಯ ಕ್ರೀಡಾ ಪ್ರಾಧಿಕಾರದ ಕಬಡ್ಡಿ ತರಬೇತುದಾರ ಎಸ್.ಪ್ರಕಾಶ್. ಅಧ್ಯಕ್ಷತೆ- ಆಶ್ರಮದ ಸಂಸ್ಥಾಪಕಿ ಎಸ್.ಜಿ.ಸುಶೀಲಮ್ಮ. ಬೆಳಿಗ್ಗೆ 9.45.ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಉದ್ಯಾನವನ ಸಂರಕ್ಷಣಾ ಸೇವಾ ಸಮಿತಿ: 50 ಅಡಿ ರಸ್ತೆ, ಆವಲಹಳ್ಳಿ, ಬಿಡಿಎ ಬಡಾವಣೆ. ಸರ್.ಎಂ.ವಿಶ್ವೇಶ್ವರಯ್ಯ ದಿನಾಚರಣೆ. ಉದ್ಘಾಟನೆ- ಶಾಸಕ ಎಂ.ಕೃಷ್ಣಪ್ಪ (ವಿಜಯನಗರ). ಅತಿಥಿಗಳು- ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಪಾಲಿಕೆ ಸದಸ್ಯೆ ಎಚ್.ಎಸ್.ಲಲಿತಾ, ಮಾಜಿ ಉಪ ಮೇಯರ್ ಎಂ.ಲಕ್ಷ್ಮೀನಾರಾಯಣ. ಅಧ್ಯಕ್ಷತೆ- ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ. ಬೆಳಿಗ್ಗೆ 10.ರಂಗ ಜಂಗಮ ಕಲಾನಿಕೇತನ ಟ್ರಸ್ಟ್: ರವೀಂದ್ರ ಕಲಾಕ್ಷೇತ್ರ. ದಿ.ಡಾ.ವಿಷ್ಣುವರ್ಧನ್ ಚಿತ್ರ ಹಬ್ಬ ಕಾರ್ಯಕ್ರಮ ಉದ್ಘಾಟನೆ- ನಟಿ ಭಾರತಿ ವಿಷ್ಣುವರ್ಧನ್. ಅತಿಥಿಗಳು- ಮೇಯರ್ ಪಿ.ಶಾರದಮ್ಮ, ಬಿಬಿಎಂಪಿ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಅರಸ್, ಕೆಎಸ್‌ಐಸಿ ಅಧ್ಯಕ್ಷ ವಿಜಯಕುಮಾರ್. ಅಧ್ಯಕ್ಷತೆ- ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಸಂಜೆ 6.ಭಾರತಿ ಪತ್ತಿನ ಸಹಕಾರ ಸಂಘ: ಭಾರತ್ ವಿದ್ಯಾ ಸಂಸ್ಥೆಯ ಆವರಣ, 16ನೇ ಮುಖ್ಯರಸ್ತೆ, ಜಯನಗರ. ಪ್ರಥಮ ವಾರ್ಷಿಕ ಸನ್ಮಾನ ಸಮಾರಂಭ. ಅತಿಥಿಗಳು- ಹೈಕೋರ್ಟ್‌ನ  ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಮರಿಯಪ್ಪ ಸಮೂಹ ಸಂಸ್ಥೆಗಳ ಸಂಸ್ಥಾಪಕ ಪ್ರೊ.ಕೆ.ಬಿ.ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಮಾರ್ಕಂಡಪುರಂ ಶ್ರೀನಿವಾಸ್, ಕ್ರೀಡಾಪಟು ಬಿ.ಸಿ.ರಮೇಶ್. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಅ.ನ.ನರಸಿಂಹಮೂರ್ತಿ. ಬೆಳಿಗ್ಗೆ 9.30.ಕಾವೇರಿ ಡಯಾಬಿಟಿಕ್ ಫೌಂಡೇಷನ್, ಕಾವೇರಿ ಚಾರಿಟಬಲ್ ಟ್ರಸ್ಟ್: ಕೇಶವ ಶಿಲ್ಪ ಸಭಾಂಗಣ, ರಾಷ್ಟ್ರೀಯ ಪರಿಷತ್ ಕಟ್ಟಡ, ಚಾಮರಾಜಪೇಟೆ. ಮಧುಮೇಹ ಕಾಯಿಲೆ ಬಗ್ಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ. ಅತಿಥಿಗಳು- ಮಧುಮೇಹ ತಜ್ಞರಾದ ಡಾ.ಕೆ.ರಾಮಚಂದ್ರ, ಡಾ.ಸೋಮಶೇಖರ ರೆಡ್ಡಿ, ಡಾ.ಸುಹಾಸ್ ಹೊಸೂರು, ಮಾನಸಿಕ ಹಾಗೂ ಲೈಗಿಂಕ ತಜ್ಞ ಡಾ.ಸಿ.ಆರ್.ಚಂದ್ರಶೇಖರ್, ಹೃದ್ರೋಗ ತಜ್ಞ ಡಾ.ಕೇಶವ್. ದಂತ ತಜ್ಞ ಡಾ.ಶಶಿಕುಮಾರ್ ಸ್ವಾಮಿ. ಬೆಳಿಗ್ಗೆ 10. ಸೂರ್ಯ ಕಿರಣ ಪ್ರತಿಷ್ಠಾನ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಹೊಸೂರು ರಸ್ತೆ. ಕ್ಯಾನ್ಸರ್ ರೋಗಿಗಳಿಗೆ ತ್ರಿಚಕ್ರ, ಫ್ರಿಜ್ ಹಾಗೂ ಇತರೆ ಪೀಠೋಪಕರಣಗಳ ವಿತರಣೆ. ಅತಿಥಿಗಳು- ಮೇಲುಕೋಟೆ ಸಂಸ್ಕೃತ ಕಾಲೇಜಿನ ಉಪನ್ಯಾಸಕ ಡಾ.ಇ.ಜೆ. ಶ್ರೀವೆಂಕಟೇಶನ್, ವೆಂಕಟೇಶ್ವರ ಧರ್ಮಶಾಲೆ ಸದಸ್ಯ ಕಾರ್ಯದರ್ಶಿ ಡಾ.ಎಂ.ವಿಜಯಕುಮಾರ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವೈದ್ಯಕೀಯ ಮೇಲ್ವಿಚಾರಕ ಡಾ.ಎಲ್.ಅಪ್ಪಾಜಿ. ಬೆಳಿಗ್ಗೆ 10.45.ಸುಚಿತ್ರ ಕಲಾಕೇಂದ್ರ: 9ನೇ ಮುಖ್ಯರಸ್ತೆ, ಬಿ.ವಿ.ಕಾರಂತರಸ್ತೆ, 2ನೇ ಹಂತ, ಬನಶಂಕರಿ. `ಬೇಂದ್ರೆ ವಿಮರ್ಶೆಯ ಆಯಾಮಗಳು~ ಕುರಿತು ಉಪನ್ಯಾಸ- ಡಾ.ಎಂ.ಎಸ್.ಆಶಾದೇವಿ. ಅತಿಥಿಗಳು- ವಿಮರ್ಶಕ ಎಸ್.ಆರ್.ವಿಜಯಶಂಕರ್, ಕಾದಂಬರಿಗಾರ್ತಿ ಎಚ್.ಎಸ್.ಚಂಪಾವತಿ. ಬೆಳಿಗ್ಗೆ 10.30.ರಾಷ್ಟ್ರೀಯ ನಾಟಕ ಶಾಲೆ: ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣ, ಚಾಮರಾಜಪೇಟೆ. `ಬಾದಲ್ ಸರ್ಕಾರ್~ ರಂಗ ನಮನ, ವಿಚಾರ ಸಂಕಿರಣ. ಅತಿಥಿಗಳು- ಡಾ.ಅನುರಾಧಾ ಕಪೂರ್, ರಂಗಕರ್ಮಿ ಪ್ರಸನ್ನ, ಪ್ರೊ.ಸಮಿಕ್ ಬಂದೋಪಧ್ಯಾಯ. ಬೆಳಿಗ್ಗೆ 10.30.ಸುಚಿತ್ರ ಚಲನಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿ: ಬಿ.ವಿ.ಕಾರಂತ ರಸ್ತೆ, 2ನೇ ಹಂತ, ಬನಶಂಕರಿ. `ಮಾಧ್ಯಮವೆಂಬ ಬ್ರಹ್ಮಾಂಡ~ ಉಪನ್ಯಾಸ- ಪತ್ರಕರ್ತ ಈಶ್ವರ ದೈತೋಟ. ಸಂಜೆ 5.ನವ ಕರ್ನಾಟಕ ಪ್ರಕಾಶನ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್     ವರ್ಲ್ಡ್ ಕಲ್ಚರ್, ಬಸವನಗುಡಿ. ಲೇಖಕ ಡಾ.ಎಂ.ವೆಂಕಟಸ್ವಾಮಿ ಅವರ `ಏಳು ಪರ್ವತಗಳು ಒಂದು ನದಿ~, ಡಾ.ಎಚ್.ಎಸ್.ಎಂ.ಪ್ರಕಾಶ್ ಅವರ `ಈಶಾನ್ಯ ಭಾರತದ ಆಧುನಿಕ ಮತು ಐತಿಹ್ಯ ಕಥೆಗಳು~, ಚಂದ್ರಕಾಂತ ಪೋಕಳೆ ಅವರ `ಮಾಹೀಮ ಖಾರಿ~, ಆರ್.ಪಿ.ಹೆಗಡೆ ಅವರ `ಮುಳ್ಳುಗುಳ್ಳಿ~ ಹಾಗೂ ಇತರೆ ಲೇಖಕರ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ. ಅತಿಥಿ- ಗೀತ ರಚನೆಕಾರ ಜಯಂತ್ ಕಾಯ್ಕಿಣಿ. ಬೆಳಿಗ್ಗೆ 10.ಟೆರಿಫಾಕ್ಸ್ ರನ್ ಸೇವಾ ಸಂಸ್ಥೆ: ಕಂಠೀರವ ಕ್ರೀಡಾಂಗಣ. ಕ್ಯಾನ್ಸರ್ ರೋಗಿಗಳ ಸಹಾಯಕ್ಕಾಗಿ ಮ್ಯಾರಥಾನ್. ಅತಿಥಿಗಳು- ನಟ ರಮೇಶ್ ಅರವಿಂದ, ಕ್ರೀಡಾಪಟುಗಳಾದ ಪಂಕಜ್ ಅಡ್ವಾಣಿ, ರೋಹನ್ ಬೋಪಣ್ಣ, ಸಂಸ್ಥೆಯ ಮುಖ್ಯಸ್ಥೆ ಅನುಪಮಾ ಮೊಂಗ. ಬೆಳಿಗ್ಗೆ 8.ಸಹ್ಯಾದ್ರಿ ಸಂಘ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನ. ಸಹ್ಯಾದ್ರಿ ಪ್ರಶಸ್ತಿ ಪ್ರದಾನ ಸಮಾರಂಭ. ಪುರಸ್ಕೃತರು- ಗಾಯಕಿ ಶಮಿತಾ ಮಲ್ನಾಡ್, ಅಡಿಕೆ ಸುಲಿಯುವ ಯಂತ್ರದ ಸಂಶೋಧಕ ಕೆ.ವಿಶ್ವನಾಥ್ ಕುಂಟವಳ್ಳಿ, ಚಿತ್ರ ನಿರ್ಮಾಪಕ ಶ್ರೀನಿವಾಸ ಸೂಡ, ಕ್ರೀಡಾಪಟು ಡಿ.ಯಶಸ್. ಸಂಜೆ 6.30.ಕವಿಗಳ ಅಂತರರಾಷ್ಟ್ರೀಯ ಸಂಘ: ವಲ್ಲಭ ನಿಕೇತನ, ಕುಮಾರಪಾರ್ಕ್ ಪೂರ್ವ, ಶಿವಾನಂದ ವೃತ್ತ. ತಿಂಗಳ ಕವಿಗೋಷ್ಠಿ. ಅತಿಥಿ- ಗಾಯಕ ಎಂ.ಆರ್.ಅನಂತಮೂರ್ತಿ. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಡಾ.ಟಿ.ಜಿ.ಪ್ರಭಾಕರ್ ಪ್ರೇಮಿ. ಬೆಳಿಗ್ಗೆ 10.30.ಕರ್ನಾಟಕ ಶೀಘ್ರಲಿಪಿಗಾರರ ಸಂಘ: ಸಭಾ ಭವನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕಬ್ಬನ್‌ಪೇಟೆ. ಸಂಸ್ಥಾಪನಾ ದಿನಾಚರಣೆ ಹಾಗೂ ಶೀಘ್ರಲಿಪಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಎಚ್.ಬಿ.ಎಸ್.ಆರಾಧ್ಯ. ಮಧ್ಯಾಹ್ನ 1.ಅಶೋಕ ಸಂಘ: ಬಿ.ಕೆ.ಮರಿಯಪ್ಪ ಧರ್ಮ ಸಂಸ್ಥೆಯ ಸಭಾಂಗಣ, ಚಾಮರಾಜಪೇಟೆ. ಸಂಘದ ಉದ್ಘಾಟನೆ- ಡಾ.ಟಿ.ಸೋಮಶೇಖರ್. ಅಧ್ಯಕ್ಷತೆ- ಬಿ.ಕೆ.ಮರಿಯಪ್ಪ ಧರ್ಮ ಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿ ಎನ್.ಪುಟ್ಟರುದ್ರ. ಸಂಜೆ 4.ಶರಣರ ಬಳಗ: 6ನೇ ಅಡ್ಡರಸ್ತೆ, 29ನೇ ಮುಖ್ಯರಸ್ತೆ, ಬಿಟಿಎಂ ಬಡಾವಣೆ. `ಬಸವಣ್ಣನವರ ಸ್ವಾತಂತ್ರ್ಯ~ ಕುರಿತು ಉಪನ್ಯಾಸ- ವಚನ ಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ. ಅತಿಥಿಗಳು- ಜನಪದ ಗಾಯಕ ಟಿ.ತಿಮ್ಮೇಶ್. ಅಧ್ಯಕ್ಷತೆ- ಶರಣರ ಬಳಗದ ಅಧ್ಯಕ್ಷೆ ಶಕುಂತಲಾ ಜಯದೇವ. ಸಂಜೆ 4.ಬ್ರಾಹ್ಮಣ ಸಭಾ: ಗಾಯತ್ರಿ ಮಂದಿರ, 1ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಉದ್ಘಾಟನೆ- ರಂಗನಟ `ಮಾಸ್ಟರ್~ ಹಿರಣ್ಣಯ್ಯ. ಅತಿಥಿಗಳು- ಪ್ರಾಂಶುಪಾಲ ಆರ್.ಕೆ.ವಿದ್ಯಾವಲ್ಲಭ. ಅಧ್ಯಕ್ಷತೆ- ಸಭಾದ ಅಧ್ಯಕ್ಷ ಎಚ್.ಎಸ್.ಸುಧೀಂದ್ರಕುಮಾರ್. ಸಂಜೆ 5.30.ಗುಡ್‌ನೈಟ್ ಸೂರ್ಯ: ಸೇವಾ ಸದನ, 14ನೇ ಮುಖ್ಯರಸ್ತೆ, ಮಲ್ಲೇಶ್ವರ. ಸೂರ್ಯ ಉತ್ಸವ. ರಾಮಾಯಣಂ ಬ್ಯಾಲೆಟ್ ಪ್ರದರ್ಶನ- ಮಿಥಿಲಾಯ ತಂಡದಿಂದ. ಸಂಜೆ 6.45.ಬಾಲಾಜಿ ಯೋಗ ಕೇಂದ್ರ: ಬಿಲ್ಲವ ಅಸೋಸಿಯೇಷನ್, ಮೀನಾಕ್ಷಿ ದೇವಸ್ಥಾನದ ಎದುರು, ಬನ್ನೇರುಘಟ್ಟ ರಸ್ತೆ. ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರ ಉದ್ಘಾಟನಾ ಸಮಾರಂಭ. ಅತಿಥಿಗಳು- ಪರಬ್ರಹ್ಮ ಆಶ್ರಮದ ಗುರು ಭಗವಾನ್, ಮೀನಾಕ್ಷಿ ದೇವಾಲಯದ ಧರ್ಮದರ್ಶಿ ಸ್ವರೂಪ್ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಕೆ. ರವಿ, ಚಲನಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ. ಬೆಳಿಗ್ಗೆ 10.ಮ್ಯಾಕ್ಸ್ ಟರ್ನರ್: ಒಪಿಯುಎಸ್ ಇನ್ ದಿ ಕ್ರೀಕ್, ವೈಟ್‌ಫೀಲ್ಡ್. `ಬೆಂಗಳೂರು ಅಂತರರಾಷ್ಟ್ರೀಯ ಹಬ್ಬ-2011. ಡ್ರಮ್ಸ ವಾದನ ಕಾರ್ಯಕ್ರಮ. ಸಂಜೆ 7.30.ಬೆಂಗಳೂರು ಇಂಟರ್ ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್: ಸ್ವಾತಂತ್ರ್ಯ ಉದ್ಯಾನ, ಶೇಷಾದ್ರಿರಸ್ತೆ. ಜಾನಪದ ಉತ್ಸವ. ಶ್ರೀಲಂಕಾ ಮತ್ತು ಫಿಲಿಫೀನ್ಸ್ ತಂಡದಿಂದ ಕಾರ್ಯಕ್ರಮ. ಸಂಜೆ 6.30.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ಸಭಾಂಗಣ, ಬಸವನಗುಡಿ. ಸುರಭಿ ಭಾರದ್ವಾಜ್ ಅವರಿಂದ ಭರತನಾಟ್ಯ ಪ್ರದರ್ಶನ. ಸಂಜೆ 6.ಜೀವನ್ಮುಖಿ: ನಯನ ಸಭಾಂಗಣ, ಕನ್ನಡ ಭವನ. ಕವಿ ವಿ.ಮಂಜುನಾಥ್ ಅವರ `ಬೆಳ್ಳಿ ಬೆಳಕು~ ಕವನ ಸಂಕಲನ ಲೋಕಾರ್ಪಣೆ- ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ. ಅತಿಥಿಗಳು- ಸಾಹಿತಿ ಜರಗನಹಳ್ಳಿ ಶಿವಶಂಕರ್, ಗಾಯಕ ಶಶಿಧರ ಕೋಟೆ. ಅಧ್ಯಕ್ಷತೆ- ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಜಿ.ನಾರಾಯಣ. ಸಂಜೆ 4.30.ಅಮೃತ ತಾಂತ್ರಿಕ ಮತ್ತು ನಿರ್ವಹಣಾ ವಿದ್ಯಾಲಯ:
ಸಂಭವನಾಥ್ ಜೈನ್ ಭವನ, ಜೈನ್ ಕಾಲೇಜು ಎದುರು, ವಿ.ವಿ.ಪುರ. ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭ. ಅತಿಥಿಗಳು- ಕೆಟು ಟೆಕ್ನಾಲಜಿ ಕಂಪೆನಿಯ ಅನಂತ್ ಕೊಪ್ಪರ್. ಅಧ್ಯಕ್ಷತೆ- ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ (ಪೀಪಲ್ಸ್ ಫೌಂಡೇಷನ್) ಮಾಜಿ ಅಧ್ಯಕ್ಷ ಮುಖ್ಯಸ್ಥ ಜಗದೀಶ್ ಬಾಪಟ್. ಬೆಳಿಗ್ಗೆ 10.ರಂಗದರ್ಶಿ

ರಾಷ್ಟ್ರೀಯ ನಾಟಕ ಶಾಲೆ:
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣ, ಚಾಮರಾಜಪೇಟೆ. ಬಾದಲ್ ಸರ್ಕಾರ್ ಅವರ `ಮೆರವಣಿಗೆ~ ನಾಟಕ ಪ್ರದರ್ಶನ- ಸಮುದಾಯ ತಂಡದಿಂದ. ಸಂಜೆ 4.ಬಿಇಎಲ್ ದಕ್ಷಣ ಕನ್ನಡಿಗರ ಸಂಘ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಆಸ್ಪತ್ರೆ ಬಳಿ, ಜಾಲಹಳ್ಳಿ. `ಶ್ರೀದೇವಿ ಮಹಾತ್ಮೆ~ ಯಕ್ಷಗಾನ ಪ್ರದರ್ಶನ. ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ. ಮಧ್ಯಾಹ್ನ 2.30.ರಂಗಶಂಕರ: 2ನೇ ಹಂತ, ಜೆ.ಪಿ.ನಗರ. `ಮಿಡ್‌ನೈಟ್ ಟ್ರಾವಲರ್~ ನಾಟಕ ಪ್ರದರ್ಶನ. ಮಧ್ಯಾಹ್ನ 3.30.

ಜನಗಣ ರಂಗವೇದಿಕೆ: ಎಚ್.ಎನ್.ಕಲಾಕ್ಷೇತ್ರ, 7ನೇ ಬಡಾವಣೆ, ಜಯನಗರ. `ಸಿಟಿ ಹಾಸ್ಟೆಲ್~ ನಾಟಕ ಪ್ರದರ್ಶನ. ಸಂಜೆ 7.

ಧಾರ್ಮಿಕ ಕಾರ್ಯಕ್ರಮ

ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನ:
ಮಹಾಲಕ್ಷ್ಮಿಪುರ. ಭಜನೆ- ಲಲಿತಾ ಪಂತುಲು ತಂಡದಿಂದ. ಬೆಳಿಗ್ಗೆ 9.

ರಾಗಿಗುಡ್ಡ ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನ: 9ನೇ ಬಡಾವಣೆ, ಜಯನಗರ. ದೇವರನಾಮಗಳು ಗಾಯನ- ಎಚ್.ಜಿ.ಅಮೃತವರ್ಷಣಿ ಅವರಿಂದ. ಸಂಜೆ 6.ದೇವಗಿರಿ ಗುರು ಸೇವಾ ಸಮಿತಿ:
24ನೇ ಮುಖ್ಯರಸ್ತೆ, 2ನೇ ಹಂತ, ಬನಶಂಕರಿ. `ಶ್ರದ್ಧಾ~ ಪ್ರವಚನ- ಪ್ರದ್ಯುಮ್ನಾಚಾರ್ಯ. ಸಂಜೆ 7.ಕೋದಂಡರಾಮಸ್ವಾಮಿ ದೇವಸ್ಥಾನ ಸಮಿತಿ:
ಸಂಪಂಗಿರಾಮನಗರ. ದಾಳಿಂಬೆ ಹಣ್ಣಿನ ಅಲಂಕಾರ. ಬೆಳಿಗ್ಗೆ 7.

ಚಿನ್ಮಯ ಮಿಷನ್: 5ನೇ ಮುಖ್ಯರಸ್ತೆ, ಮಲ್ಲೇಶ್ವರ. `ಶಿವಾಪರಾಧ ಕ್ಷಮಾಪಣ ಸ್ತೋತ್ರಮ್~ ಪ್ರವಚನ- ವಸುಮನ ಚೈತನ್ಯ. ಸಂಜೆ 6.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.